ಅಮೆರಿಕದಲ್ಲಿ ಓದಲು ಕನಸು ಕಾಣುವ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​.. ಬೆಂಗಳೂರಲ್ಲೇ ಇದೆ ಅವಕಾಶ; ಹೇಗೆ?

author-image
Bheemappa
Updated On
ಅಮೆರಿಕದಲ್ಲಿ ಓದಲು ಕನಸು ಕಾಣುವ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​.. ಬೆಂಗಳೂರಲ್ಲೇ ಇದೆ ಅವಕಾಶ; ಹೇಗೆ?
Advertisment
  • US​ನ 80ಕ್ಕೂ ಹೆಚ್ಚು ಯುನಿವರ್​ಸಿಟಿಗಳು​ ಇದರಲ್ಲಿ ಭಾಗಿಯಾಗುತ್ತಿವೆ
  • ಎಜುಕೇಶನ್‌ USA ಮೇಳ ನಡೆಯುವ ದಿನಾಂಕ, ಸಮಯ ಏನು?
  • ಮಕ್ಕಳ ಬಗ್ಗೆ ಮಾಹಿತಿ ಕೇಳಲು ಪೋಷಕರು ಭಾಗವಹಿಸಬಹುದು

ಅಮೆರಿಕದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪ್ರತಿಷ್ಠಿತ ಯುನಿವರ್​ಸಿಟಿಗಳಲ್ಲಿ ಅಧ್ಯಯನ ಮಾಡಲು ಬಯಸುವ ಆಕಾಂಕ್ಷಿಗಳಿಗೆ ಗುಡ್​ನ್ಯೂಸ್​. ನಿಮಗೇನಾದರೂ ಅಮೆರಿಕದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿವೇತನ, ಪ್ರವೇಶ ಹಾಗೂ ಇತರ ಅಂಶಗಳ ಬಗ್ಗೆ ಯಾವುದಾದರೂ ಸಮಸ್ಯೆ ಇದ್ದರೆ ಅದನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಅದು ಹೇಗೆಂದರೆ?.

ಇದನ್ನೂ ಓದಿ: ಆನ್​ಲೈನ್ ಕೋರ್ಸ್​ಗೆ ISRO ಅರ್ಜಿ ಆಹ್ವಾನ.. AI, ML ಬಗ್ಗೆ ತಿಳಿದುಕೊಳ್ಳಬೇಕಾ, ಅಪ್ಲೇ ಮಾಡಿ

ಅಮೆರಿಕದಲ್ಲಿ ಅಧ್ಯಯನ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗಾಗಿ ಎಜುಕೇಶನ್‌USA, ಯುಎಸ್ ಡಿಪಾರ್ಟ್‌ಮೆಂಟ್ ಆಫ್ ಸ್ಟೇಟ್ ಬೆಂಬಲಿತ ನೆಟ್‌ವರ್ಕ್​​ನಿಂದ ಭಾರತದ ವಿವಿಧ ನಗರಗಳಲ್ಲಿ ಮೇಳ ಆಯೋಜಿಸುತ್ತಿದೆ. ಈ ಮೇಳ ಆಗಸ್ಟ್ 16 ರಿಂದ 25 ರವರೆಗೆ ಇರಲಿದ್ದು ಆಸಕ್ತರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಶ್ರೀ ಕ್ಷೇತ್ರಕ್ಕೆ ಹೋಗಿ ಬಂದ ಬೆನ್ನಲ್ಲೇ ಬಿಗ್​​ ಅಪ್​ಡೇಟ್ಸ್​​ ಕೊಟ್ಟ ರಾಕಿಂಗ್ ಸ್ಟಾರ್ ಯಶ್

ಯುಎಸ್​ನಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ, ಪ್ರವೇಶ, ಅರ್ಜಿ ಹಾಕುವುದು, ಹಣಕಾಸಿನ ನೆರವು ಪಡೆಯುವುದು ಹಾಗೂ ವಿದ್ಯಾರ್ಥಿ ವೀಸಾ ಪ್ರಕ್ರಿಯೆ, ಇತರೆ ಅಂಶಗಳ ಕುರಿತು ಮಾಹಿತಿ ನೀಡಲಾಗುತ್ತದೆ. ವಿದ್ಯಾರ್ಥಿಗಳು ಮತ್ತು ಪೋಷಕರು ವಿವಿಧ ಸಂಸ್ಥೆಗಳ ತಜ್ಞರು ಹಾಗೂ ಎಕ್ಸ್​ಪರ್ಟ್​ ಜೊತೆ ಚರ್ಚೆ ನಡೆಸಲು bit.ly/EdUSAFair24Emb ಲಿಂಕ್​ ಅನ್ನು ಕ್ಲಿಕ್ ಮಾಡಿ ನಿಮ್ಮ ವಿವರ ನೋಂದಾಯಿಸಿಕೊಳ್ಳಬಹುದು ಎಂದು ಹೇಳಲಾಗಿದೆ.

ಭಾರತದ ಪ್ರತಿಷ್ಠಿತ 8 ನಗರಗಳಲ್ಲಿ ಈ ಎಜುಕೇಶನ್‌USA ಮೇಳ ಆಯೋಜನೆ ಮಾಡಲಾಗುತ್ತಿದ್ದು ಇದರಲ್ಲಿ ಅಮೆರಿಕದ 80ಕ್ಕೂ ಹೆಚ್ಚು ಯುನಿವರ್​ಸಿಟಿಗಳು ಭಾಗವಹಿಸಲಿವೆ. ಬೆಂಗಳೂರು, ಕೋಲ್ಕತ್ತ, ಹೈದರಾಬಾದ್, ಅಹಮದಾಬಾದ್, ಚೆನ್ನೈ, ಪುಣೆ, ಮುಂಬೈ ಹಾಗೂ ದೆಹಲಿಯಲ್ಲಿ ಈ ಮೇಳ ನಡೆಸಲಾಗುತ್ತದೆ.

[caption id="attachment_79559" align="aligncenter" width="800"]publive-image ಕೋಲ್ಕತ್ತದಲ್ಲಿನ ಹಳೆಯ ಫೋಟೋ[/caption]

ಎಜುಕೇಶನ್‌ USA ಮೇಳದ ವೇಳಾಪಟ್ಟಿ

  • ಬೆಂಗಳೂರಿನ ಎಂ.ಜಿ ರೋಡ್​ನಲ್ಲಿನ ತಾಜ್ ಹೋಟೆಲ್​ನಲ್ಲಿ ಆಗಸ್ಟ್​ 18 ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5ಗಂಟೆವರೆಗೆ ಮೇಳ ಇರುತ್ತದೆ.
  • ಹೈದರಾಬಾದ್​ನ ಐಟಿಸಿ ಕೊಹೆನೂರು ಆಗಸ್ಟ್​ 16ರಂದು ಸಂಜೆ 4:30 ರಿಂದ 9 ಗಂಟೆ
  • ಚೆನ್ನೈನ ಹಿಲ್ಟನ್​ನಲ್ಲಿ ಆಗಸ್ಟ್​ 17 ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5ಗಂಟೆವರೆಗೆ ಇರುತ್ತದೆ.
  • ಕೋಲ್ಕತ್ತದಲ್ಲಿ ದಿ ಒಬೆರಾಯ್ ಗ್ರ್ಯಾಂಡ್​ನಲ್ಲಿ ಆ.19ರಂದು ಸಂಜೆ 7ರಿಂದ 10 ಗಂಟೆವರೆಗೆ ಇರುತ್ತದೆ.
  • ಅಹಮದಾಬಾದ್, ಹಯಾತ್ ವಸ್ತ್ರಪುರ್​​ನಲ್ಲಿ ಆ.21 ಸಂಜೆ 6 ರಿಂದ 9 ಗಂಟೆವರೆಗೆ ಇರುತ್ತದೆ.
  • ಪುಣೆಯ ಶೆರಟನ್ ಗ್ರ್ಯಾಂಡ್ ಪುಣೆ ಬಂಡ್ ಗಾರ್ಡನ್​ನಲ್ಲಿ ಆ.22 ರಂದು 6 ರಿಂದ 9 ಗಂಟೆವರೆಗೆ ಇರುತ್ತದೆ.
  • ಮುಂಬೈ, ಸೇಂಟ್. ರೆಜಿಸ್​ನಲ್ಲಿ ಆ.24ರಂದು ಮ.2 ರಿಂದ ಸಂಜೆ 5ಗಂಟೆವರೆಗೆ ಇದೆ.
  • ದೆಹಲಿಯ ಲಲಿತ್​​ನಲ್ಲಿ ಆ.25 ರಂದು ಮ.2 ರಿಂದ ಸಂಜೆ 5ಗಂಟೆವರೆಗೆ ಇದೆ.ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
Advertisment