ಕೇರಳ ಮಳೆಯ ಎಫೆಕ್ಟ್.. ಕೊಡಗಿನಲ್ಲೂ 2 ದಿನ ರೆಡ್ ಅಲರ್ಟ್; ಕಾವೇರಿ ತೀರಕ್ಕೂ ಪ್ರವಾಹದ ಭೀತಿ

author-image
admin
Updated On
ಕೇರಳ ಮಳೆಯ ಎಫೆಕ್ಟ್.. ಕೊಡಗಿನಲ್ಲೂ 2 ದಿನ ರೆಡ್ ಅಲರ್ಟ್; ಕಾವೇರಿ ತೀರಕ್ಕೂ ಪ್ರವಾಹದ ಭೀತಿ
Advertisment
  • ಕೇರಳ ಮಳೆ ಮಧ್ಯೆ ಕೊಡಗು ಜಿಲ್ಲೆಯಲ್ಲೂ ವರುಣನ ಅಬ್ಬರ
  • ನಾಳೆ ನಾಡಿದ್ದು 2 ದಿನ‌ ಕೊಡಗಿನಲ್ಲಿ ರೆಡ್ ಅಲರ್ಟ್ ಘೋಷಣೆ
  • ಕಾವೇರಿ ಕೊಳ್ಳದ ಜನರು ಸುರಕ್ಷಿತವಾಗಿ ಇರಲು ಮಹತ್ವದ ಸೂಚನೆ

ನೆರೆಯ ಕೇರಳದಲ್ಲಿ ಮಹಾಮಳೆ ಸುರಿಯುತ್ತಿದ್ದು ಭಯಾನಕ ಭೂಕುಸಿತ ಸಂಭವಿಸಿದೆ. ಕೇರಳ ಮಳೆಯ ಮಧ್ಯೆ ಕೊಡಗು ಜಿಲ್ಲೆಯಲ್ಲೂ ಮತ್ತೆ ಧಾರಾಕಾರ ಮಳೆ ಬಿರುಸು ಪಡೆದುಕೊಂಡಿದೆ. ನಾಳೆ ನಾಡಿದ್ದು 2 ದಿನ‌ ಕೊಡಗಿನಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ.

publive-image

ಕೊಡಗಿನಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿರುವುದರಿಂದ ಮತ್ತೆ ಆತಂಕ ಹೆಚ್ಚಾಗಿದೆ. ಅಲ್ಲಲ್ಲಿ ಗುಡ್ಡದ ಸಣ್ಣ ಪ್ರಮಾಣದ ಮಣ್ಣು ಕುಸಿಯುತ್ತಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ವಾಹನ ಸವಾರರು ಆತಂಕದಲ್ಲಿದ್ದಾರೆ.

ಇದನ್ನೂ ಓದಿ: ಹಾಸನದಲ್ಲೂ ಇಂದು ಭೂಕುಸಿತ.. 200 ಮೀಟರ್ ದೂರ ಕೊಚ್ಚಿ ಹೋದ ರಸ್ತೆ; ಫೋಟೋಗಳು ಇಲ್ಲಿವೆ 

ಭಾರೀ ಮಳೆಯ ಜೊತೆಗೆ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಕಾವೇರಿ ತಟದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಕ್ಷೇತ್ರ ಮತ್ತೆ ಭರ್ತಿಯಾಗಿದೆ. ಗಾಳಿ ಮಳೆಗೆ ವಿದ್ಯುತ್ ಕಂಬಗಳು ಧರಾಶಾಹಿಯಾಗುತ್ತಿವೆ. ಹಲವು ಗ್ರಾಮೀಣ ಪ್ರದೇಶಗಳು ಕತ್ತಲಲ್ಲಿ ಮುಳುಗಿವೆ.

publive-image

ಕೇರಳದಿಂದ ಕೆಆರ್‌ಎಸ್‌ಗೆ ಹೆಚ್ಚಿನ ನೀರು!
ಕೇರಳದಲ್ಲಿ ಸುರಿಯುತ್ತಿರುವ ಮಳೆಗೆ ತ್ರಿಶೂರ್ ಜಿಲ್ಲೆಯ ಪಿಚ್ಚಿ ಡ್ಯಾಮ್ ಭರ್ತಿಯಾಗಿದೆ. ಡ್ಯಾಮ್‌ ಗೇಟ್ ತೆಗೆದ ಅಧಿಕಾರಿಗಳು ನೀರನ್ನು ನದಿಗೆ ಬಿಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ವಯನಾಡ್ ಜಿಲ್ಲೆಯಲ್ಲಿ ನಿರಂತರವಾಗಿ ಭಾರೀ ಪ್ರಮಾಣದ ಮಳೆಯಾಗಿದೆ.

ವಯನಾಡ್ ಜಿಲ್ಲೆಯ ಮಹಾ ಮಳೆಯಿಂದಾಗಿ ಕರ್ನಾಟಕದ ಕೆ.ಆರ್‌.ಎಸ್‌ ಜಲಾಶಯಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇಂದು ಕೂಡ ಕೆ.ಆರ್‌.ಎಸ್‌, ಕಬಿನಿಯಿಂದ ಒಂದು ಲಕ್ಷ ಕ್ಯೂಸೆಕ್‌ಗೂ ಹೆಚ್ಚಿನ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: 25 ಕಿ.ಮೀ ದೂರದಲ್ಲಿ ಪತ್ತೆಯಾದ ಶವಗಳು.. ಕೇರಳದಲ್ಲಿ ಘೋರ ದುರಂತ; ಪ್ರತ್ಯಕ್ಷದರ್ಶಿ ಹೇಳಿದ್ದೇನು? 

ಕೆಆರ್‌ಎಸ್‌ನಿಂದ ನದಿಗೆ 1,30,000 ಕ್ಯೂಸೆಕ್ ನೀರು ಬಿಡಲಾಗಿತ್ತು. ಒಳಹರಿವು ಕಡಿಮೆ ಆದ ಕಾರಣ ನಿನ್ನೆಯಿಂದ ಹೊರಹರಿವು ಕಡಿಮೆ ಮಾಡಲಾಗಿತ್ತು. ಇಂದು ಬೆಳಗ್ಗೆ 55,659 ಕ್ಯೂಸೆಕ್ ಹೊರಹರಿವು ಇತ್ತು. ಇದೀಗ ಕೆಆರ್‌ಎಸ್‌ಗೆ ಮತ್ತಷ್ಟು ಪ್ರಮಾಣದಲ್ಲಿ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಹೀಗಾಗಿ ಡ್ಯಾಂನಿಂದ 1,10,000 ಕ್ಯೂಸೆಕ್ ನೀರು ಬಿಡಲು ಸಿದ್ಧತೆ ಮಾಡಲಾಗಿದೆ. 1 ಲಕ್ಷಕ್ಕೂ ಅಧಿಕ ನೀರು ಹೊರಗಡೆ ಬಿಡುತ್ತಿರುವುದರಿಂದ ಕಾವೇರಿ ಕೊಳ್ಳದ ಜನರು ಸುರಕ್ಷಿತವಾಗಿ ಇರಲು ಜಿಲ್ಲಾಡಳಿತ ಮಹತ್ವದ ಸೂಚನೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment