Subscribe

0

user
  • Manage Subscription
  • Bookmarks
  • My Profile
  • Log Out
  • LIVE
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಬಿಗ್‌ ಬಾಸ್
  • ವಿದೇಶ
  • ಸ್ಪೋರ್ಟ್ಸ್
  • ಆರೋಗ್ಯ
  • ಲೈಫ್‌ಸ್ಟೈಲ್
  • ಎಜುಕೇಶನ್
  • ಟೆಕ್
  • Sign in with Email

By clicking the button, I accept the Terms of Use of the service and its Privacy Policy, as well as consent to the processing of personal data.

Don’t have an account? Signup

ad_close_btn
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸ್ಪೋರ್ಟ್ಸ್
  • ಆರೋಗ್ಯ
  • ಸಿನಿಮಾ

Powered by :

ಟಾಪ್ ನ್ಯೂಸ್ ರಾಜಕೀಯ

ಮಾಜಿ ಸಚಿವ ಮುನಿರತ್ನ ತಲೆಗೆ ಮೊಟ್ಟೆ ಹೊಡೆತ.. ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ!

author-image
Gopal Kulkarni
25 Dec 2024 13:08 IST
Updated On 25 Dec 2024 13:39 IST
Follow Us
ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣ; ಹೋರಾಟಕ್ಕೆ ಸಜ್ಜಾದ ಕೇಸರಿ ಪಡೆ? ಪ್ಲ್ಯಾನ್ ಏನು?
Advertisment
  • ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದ ಕಾಂಗ್ರೆಸ್ ಕಾರ್ಯಕರ್ತರು
  • ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ಶುರು
  • ತಮ್ಮ ಮೇಲಿನ ಹಲ್ಲೆ ವಿರೋಧಿಸಿ ಪ್ರತಿಭಟನೆಗೆ ಕುಳಿತ ಶಾಸಕ ಮುನಿರತ್ನ

ಜಾತಿ ನಿಂದನೆ ಹಾಗೂ ಹಲವು ಆರೋಪಗಳ ಮೇಲೆ ಜೈಲಿಗೆ ಹೋಗಿ ಜಾಮೀನಿನ ಮೇಲೆ ಆಚೆ ಬಂದಿರುವ ಶಾಸಕ ಹಾಗೂ ಕನ್ನಡ ಚಿತ್ರ ನಿರ್ಮಾಪಕ ಮುನಿರತ್ನ ಅವರ ತಲೆಗೆ ಮೊಟ್ಟೆ ಹೊಡೆದ ಘಟನೆ ಲಗ್ಗೆರೆ ಸಮೀಪದ ಲಕ್ಷ್ಮೀದೇವಿನಗರದಲ್ಲಿ ನಡೆದಿದೆ.

ಸುಶಾಸನ ದಿನಾಚರಣೆ ಕಾರ್ಯಕ್ರಮಕ್ಕೆ ಅಂತ ಮುನಿರತ್ನ ಬಂದಿದ್ದರು ಈ ವೇಳೆ ಕಾರ್ಯಕರ್ತರಿಂದ ಮೊಟ್ಟೆ ಎಸೆತ ಹಾಗೂ ಪ್ರತಿಭಟನೆ ನಡೆದಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿಯೇ ಈ ಘಟನೆ ನಡೆದಿದೆ. ಕಾರ್ಯಕ್ರಮಕ್ಕೆ ಮುನಿರತ್ನ ಬರುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಅವರ ಕಾರಿನತ್ತ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಿಟಿ ರವಿ, ಹೆಬ್ಬಾಳ್ಕರ್ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಓರ್ವ ಅಧಿಕಾರಿಯ ತಲೆದಂಡ..!

ಇದನ್ನು ಬಿಜೆಪಿ ಕಾರ್ಯಕರ್ತರು ವಿರೋಧಿಸಿದ್ದಾರೆ. ಮಾತಿಗೆ ಮಾತು ಬೆಳೆದು ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ, ಮಾರಾಮಾರಿ ನಡೆದಿದೆ. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇತ್ತ ಎರಡು ಪಕ್ಷದ ಕಾರ್ಯಕರ್ತರು ಗಲಾಟೆ ನಡೆಯುತ್ತಿದ್ದ ಸಮಯದಲ್ಲಿಯೇ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ತಮ್ಮ ಮೇಲಿನ ಹಲ್ಲೆ ಖಂಡಿಸಿ ಕಂಠೀರವ ಸ್ಟುಡಿಯೋ ಬಳಿ ಪ್ರತಿಭಟನೆಗೆ ಕುಳಿತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
FOLLOW NEWSFIRST FOR
LATEST UPDATES
YouTubeFacebookTwitterInstagram
Subscribe to our Newsletter! Be the first to get exclusive offers and the latest news
logo

Related Articles
Read the Next Article
Latest Stories
Subscribe to our Newsletter! Be the first to get exclusive offers and the latest news



Quick Links

  • IC
  • GRIEVANCE
  • FEED
  • CONTACT US

Olecom Media Pvt Ltd. © 2025

Powered by