/newsfirstlive-kannada/media/post_attachments/wp-content/uploads/2024/12/munirathna.jpg)
ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣ. ಇಂದು ಆಸ್ಪತ್ರೆಯಿಂದ ಮುನಿರತ್ನ ಡಿಸ್ಚಾರ್ಜ್​ ಘಟನೆ ಸಂಬಂಧ ದೂರು ನೀಡಿದ ಮುನಿರತ್ನ. ದೂರು ಸ್ವೀಕರಿಸಿದ ಮಲ್ಲೇಶ್ವರಂ ಎಸಿಪಿ. ಮುನಿರತ್ನ ಆರೋಗ್ಯ ವಿಚಾರಿಸಿದ ಬಳಿಕ ವಿಜಯೇಂದ್ರ ಪ್ರತಿಕ್ರಿಯೆ. ಮುನಿರತ್ನ ಮೇಲೆ ದಾಳಿ ಸಣ್ಣ ಪ್ರಕರಣವಲ್ಲ. ಸಿ.ಟಿ.ರವಿ ಪ್ರಕರಣದಂತೆ ಹೋರಾಟಕ್ಕೆ ಪ್ಲಾನ್. ಕುಸುಮಾ ಹನುಮಂತರಾಯಪ್ಪ ಟ್ವೀಟ್​.. ತಮ್ಮ ವಿರುದ್ಧದ ಆರೋಪಕ್ಕೆ ಕಿಡಿ. ಹೀಗೆ ಹಲವು ಬೆಳವಣಿಗೆಗಳು ಶಾಸಕ ಮುನಿರತ್ನ ಅವರ ಮೇಲೆ ಮೊಟ್ಟೆ ದಾಳಿ ನಡೆದ ಬಳಿಕ ಕಂಡು ಬಂದಿವೆ.
ರಾಜ್ಯದಲ್ಲಿ ಸಂಚಲ ಸೃಷ್ಟಿಸಿದ ಮುನಿರತ್ನ ಮೇಲೆ ಮೊಟ್ಟೆ ಎಸೆತ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಮತ್ತು ಸಿ.ಟಿ.ರವಿ ನಡುವಿನ ಅಶ್ಲೀಲ ಟಾಕ್​ವಾರ್​ ಕಡಿಮೆ ಆಗೋ ಹೊತ್ತಲ್ಲೇ ರಾಜ್ಯ ಮತ್ತೆ ಬಿಜೆಪಿ-ಕಾಂಗ್ರೆಸ್​ ನಾಯಕರು ಜಟಾಪಟಿ ಶುರುವಾಗಿದೆ. ಆರ್​.ಆರ್​.ನಗರ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದು, ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಮತ್ತೊಂದು ಸುತ್ತಿನ ಹೈಡ್ರಾಮಾಕ್ಕೆ ವೇದಿಕೆ ಆಗಿದೆ.
ಬೆಂಗಳೂರಿನ ಲಗ್ಗೆರೆ ಸಮೀಪದ ಲಕ್ಷ್ಮಿದೇವಿನಗರಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರ 100 ವರ್ಷದ ಸಂಭ್ರಮದ ಅಂಗವಾಗಿ ಸುಶಾಸನ ದಿನಾಚರಣೆಗೆಂದು ಶಾಸಕ ಮುನಿರತ್ನ ಆಗಮಿಸಿದ್ರು. ಇದೇ ವೇಳೆ ಮುನಿರತ್ನ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಅವರ ತಲೆಗೆ ಗುರಿಯಿಟ್ಟು ಮೊಟ್ಟೆ ಹೊಡೆದಿದ್ದಾನೆ. ಇದರಿಂದ ಮುನಿರತ್ನ ತಲೆಗೆ ಗಾಯವಾಗಿದ್ದು, ನನ್ನ ಮೇಲೆ ಌಸಿಡ್​ ಅಟ್ಯಾಕ್​ ನಡೆದಿದೆ ಎಂದು ಆರೋಪಿಸಿದ್ದರು. ಸದ್ಯ ಕೆ.ಸಿ.ಜನರಲ್​ ಆಸ್ಪತ್ರೆಯಲ್ಲಿ ಶಾಸಕ ಮುನಿರತ್ನ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವಾಗಿದ್ದಾರೆ. ಇನ್ನು ಘಟನೆ ಸಂಬಂಧ ನಂದಿನಿ ಲೇಔಟ್​ ಪೊಲೀಸರಿಗೆ ಮುನಿರತ್ನ ದೂರು ನೀಡಿದ್ದಾರೆ. ಇನ್ನು ಮಲ್ಲೇಶ್ವರಂ ಎಸಿಪಿ ಕೂಡ ಆಸ್ಪತ್ರೆಗೆ ತೆರಳಿ ದೂರು ಪಡೆದಿದ್ದಾರೆ. ಇನ್ನು ಪೊಲೀಸರು ಎಫ್​ಐಆರ್​ ದಾಖಲಿಸಿದ ಬಳಿಕ ಡಿಸ್ಚಾರ್ಜ್​ ಆಗಲು ಮುನಿರತ್ನ ನಿರ್ಧರಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/12/MUNIRATNA-EGG-ATTACK-2.jpg)
ಸಿ.ಟಿ.ರವಿ ಪ್ರಕರಣದ ಮಾದರಿಯಲ್ಲಿ ಹೋರಾಟಕ್ಕೆ ಬಿಜೆಪಿ ಪ್ಲಾನ್​
ಸಚಿವೆಯನ್ನು ನಿಂಧಿಸಿದ ಪ್ರಕರಣದಲ್ಲಿ ಸಿ.ಟಿ.ರವಿಯನ್ನು ಪೊಲೀಸರು ಬಂಧಿಸಿದ್ದರು. ಬಳಿಕ ನನ್ನ ಮೇಲೆ ಹತ್ಯೆ ಯತ್ನ ನಡೆದಿತ್ತು ಎಂದು ದೊಡ್ಡ ಆರೋಪ ಮಾಡಿದ್ರು. ಇದೀಗ ಮುನಿರತ್ನ ಕೂಡ, ಪೊಲೀಸರು ಇಲ್ಲದಿದ್ದರೆ ನನ್ನ ಕೊಲೆ ಆಗ್ತಿತ್ತು ಎಂದು ಆರೋಪಿಸಿದ್ದಾರೆ. ಸದ್ಯ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮುನಿರತ್ನರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಇದೇನು ಸಣ್ಣ ಘಟನೆಯಲ್ಲ. ಶಾಸಕ ಮುನಿರತ್ನ ಅವರಿಗೆ ಪ್ರಾಣಭಯವಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಪೊಲೀಸ್ ಇಲಾಖೆಯನ್ನ ದುರ್ಬಳಕೆ ಮಾಡಿಕೊಂಡು ನಮ್ಮ ಶಾಸಕರ ಮೇಲೆ ಒತ್ತಡ ಹೇರುವಂತ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
/newsfirstlive-kannada/media/post_attachments/wp-content/uploads/2024/12/MUNIRATNA-EGG-ATTACK-1.jpg)
'ಮೊಟ್ಟೆ ಅಟ್ಯಾಕ್' ಚಿತ್ರದ ರಚನೆ, ನಿರ್ಮಾಣ ಅವರದ್ದೇ!
ಶಾಸಕ ಮುನಿರತ್ನ ಮೇಲಿನ 'ಮೊಟ್ಟೆ ಎಸೆತ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರೀ ಕೋಲಾಹಲ ಎಬ್ಬಿಸಿದೆ. ಇದರ ಹಿಂದೆ ಕಾಂಗ್ರೆಸ್​ ನಾಯಕಿ ಕುಸುಮಾ ಕೈವಾಡ ಇದೆ ಎಂದು ಮುನಿರತ್ನ ಆರೋಪಿಸಿದ್ರು.. ಇದಕ್ಕೆ ಕುಸುಮಾ ಸಖತ್​ ಟಾಂಗ್​ ನೀಡಿದ್ದಾರೆ. ಮೊಟ್ಟೆ ಅಟ್ಯಾಕ್' ಚಿತ್ರದ ರಚನೆ ಹಾಗೂ ನಿರ್ಮಾಣ ಸ್ವತಃ ಮುನಿರತ್ನರದ್ದೇ ಎನ್ನುವ ಮೂಲಕ ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ವ್ಯಂಗ್ಯವಾಡಿದ್ದಾರೆ. ಅಷ್ಟೇ ಅಲ್ಲ. ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಮುನಿರತ್ನ ಪಾಪದ ಕೆಲಸಗಳಿಗೆ ತಕ್ಕ ಶಾಸ್ತಿ ಆಗೇ ಆಗುತ್ತದೆ. ಕಾಲಾಯ ತಸ್ಮೈ ನಮಃ!' ಎಂದು ಟಾಂಗ್​ ನೀಡಿದ್ದಾರೆ.
ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ನಡೆಸಿದ್ದು ಯಾರು? ಕಾಂಗ್ರೆಸ್​ ನವರಾ ಅಥವಾ ಇದರ ಹಿಂದೆ ಬೇರೆಯದ್ದೇ ಲೆಕ್ಕಾಚಾರ ಇದ್ಯಾ ಅನ್ನೋದನ್ನು ಪೊಲೀಸರು ಸೂಕ್ತ ತನಿಖೆ ಮೂಲಕ ಪತ್ತೆ ಹಚ್ಚಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us