Egg rate: ಒಂದು ಡಜನ್ ಕೋಳಿ ಮೊಟ್ಟೆಗೆ 860 ರೂಪಾಯಿ.. ಜನವರಿಯಲ್ಲಿ ಶೇಕಡಾ 65 ರಷ್ಟು ಏರಿಕೆ..!

author-image
Ganesh
Updated On
ಈ ಹತ್ತು ಆಹಾರಗಳ ಪದಾರ್ಥಗಳನ್ನು ಅಪ್ಪಿತಪ್ಪಿಯೂ ಹಸಿಯಾಗಿ ತಿನ್ನಬೇಡಿ? ಆರೋಗ್ಯಕ್ಕೆ ತುಂಬಾ ಅಪಾಯ!
Advertisment
  • ಹಕ್ಕಿ ಜ್ವರ ಹಿನ್ನೆಲೆಯಲ್ಲಿ ಮೊಟ್ಟೆಗೆ ಭಾರೀ ಡಿಮ್ಯಾಂಡ್
  • ಮೂರು ತಿಂಗಳಲ್ಲಿ 2 ಕೋಟಿ ಕೋಳಿಗಳನ್ನು ಸಾಯಿಸಲಾಗಿದೆ
  • ಮೊಟ್ಟೆ ಉದ್ಯಮದ ಮೇಲೆ ಪೆಟ್ಟು ಕೊಟ್ಟ ಹಕ್ಕಿ ಜ್ವರ

ಅಮೆರಿಕದಲ್ಲಿ ಕೋಳಿ ಮೊಟ್ಟೆಯ ಬೆಲೆ ದಾಖಲೆಯ ಮಟ್ಟ ತಲುಪಿದ್ದು, ತತ್ತಿ ಪ್ರಿಯರು ಕಂಗಾಲ್ ಆಗಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಹಕ್ಕಿ ಜ್ವರವಾಗಿದ್ದು, ಮೊಟ್ಟೆ ಪೂರೈಕೆ ಮೇಲೆ ಕೆಟ್ಟ ಪರಿಣಾಮ ಬೀರಿದೆ.

ಒಂದು ಕಾಲದಲ್ಲಿ ಕಡಿಮೆ ಬೆಲೆಗೆ ಸಿಗುವ ಪ್ರೋಟಿನ್ ಎಂದು ಪರಿಗಣಿಸಲ್ಪಟ್ಟಿದ್ದ ಮೊಟ್ಟ ಇದೀಗ ದುಬಾರಿ ಪದಾರ್ಥಗಳ ವರ್ಗಕ್ಕೆ ಸೇರಿದೆ. ಅಮೆರಿಕಾದ ಕೋಳಿಗಳಲ್ಲಿ HPAI (High pathogenicity avian influenza) ಜ್ವರ ಕಾಣಿಸಿಕೊಂಡಿದೆ. ಈ ಹಕ್ಕಿ ಜ್ವರದ ಪರಿಣಾಮ ಲಕ್ಷಾಂತರ ಕೋಳಿಗಳು ಸಾವನ್ನಪ್ಪುತ್ತಿವೆ.

ಇದನ್ನೂ ಓದಿ: ಬೆಂಗಳೂರು ಮಂದಿಗೆ ಮತ್ತೊಂದು ಗುಡ್​ನ್ಯೂಸ್; ಮೆಟ್ರೋ ಪ್ರಯಾಣಿಕರು ಓದಲೇಬೇಕಾದ ಸುದ್ದಿ

publive-image

ಕಳೆದ ಮೂರು ತಿಂಗಳ ಅವಧಿಯಲ್ಲಿ ಬರೋಬ್ಬರಿ 2 ಕೋಟಿಗೂ ಅಧಿಕ ಕೋಳಿಗಳನ್ನು ಕೊಲ್ಲಲಾಗಿದೆ. ಇದರಿಂದ ಮೊಟ್ಟೆ ಉದ್ಯಮದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಮೊಟ್ಟೆಗಳು ಮಾರುಕಟ್ಟೆಯಲ್ಲಿ ಸಿಗೋದೇ ಕಷ್ಟವಾಗಿದೆ.

ಎಷ್ಟು ರೂಪಾಯಿ ಏರಿಕೆ ಆಗಿದೆ..?

2025 ಜನವರಿಯಲ್ಲಿ ಮೊಟ್ಟೆಯಲ್ಲಿ ಶೇಕಡಾ 65 ರಷ್ಟು ಏರಿಕೆ ಕಂಡಿದೆ. ಸೀಮಿತ ಪೂರೈಕೆಯಿಂದ ಒಂದು ಡಜನ್ ಮೊಟ್ಟೆಗೆ 860 ರೂಪಾಯಿ ಆಗಿದೆ. ಮೊಟ್ಟೆ ಬೆಲೆ ಕೈಗೆಟುಕದ ಹಿನ್ನೆಲೆಯಲ್ಲಿ ಸಾಮಾನ್ಯ ಜನರ ಬಜೆಟ್ ಮೇಲೆ ಹೊರೆಯಾಗಿದೆ. 2015ರಲ್ಲೂ ಅಕ್ಕಿಜ್ವರ ವಿಪರೀತವಾಗಿ ಕಾಣಿಸಿಕೊಂಡಿತ್ತು. ಅಂದಿನಿಂದ ಅಮೆರಿಕದಲ್ಲಿ ಮೊಟ್ಟೆ ದರ ಏರಿಕೆಯಾಗುತ್ತಿದೆ. 2025 ಜನವರಿಯಲ್ಲಿ ಗ್ರೇಡ್ ಎಗೆ ಸೇರಿದ ಒಂದು ಡಜನ್ ಮೊಟ್ಟೆ ಬೆಲೆಯ ಕನಿಷ್ಠ ದರ 429. ರೂಪಾಯಿ. ಇದೇ ಮೊಟ್ಟೆ 2023ರಲ್ಲಿ 176.47 ರೂಪಾಯಿಗೆ ಸಿಗುತ್ತಿತ್ತು. ತಜ್ಞರ ಪ್ರಕಾರ, ಅಮೆರಿಕದಲ್ಲಿ ಮೊಟ್ಟೆ ಬೆಲೆಯಲ್ಲಿ ಇಳಿಕೆಯಾಗಲು ಇನ್ನೂ ಹಲವು ತಿಂಗಳುಗಳು ತೆಗೆದುಕೊಳ್ಳಲಿದೆ.

ಇದನ್ನೂ ಓದಿ: Champions Trophy; ಗಾಯದ್ದೇ ಸಮಸ್ಯೆ.. ರೋಹಿತ್ ಬಳಗದಲ್ಲೂ ಇಂಜುರಿ ಇಂದ ಸ್ಟಾರ್ ಬೌಲರ್ ಔಟ್!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment