Advertisment

ಉರಿ ಬಿಸಿಲ ತಾಪತ್ರೆ ಒಂದಲ್ಲ ಎರಡಲ್ಲ.. ಕೋಳಿ ಮೊಟ್ಟೆಗೂ ಗುನ್ನಾ ಕೊಟ್ಟ ರಣಬಿಸಿಲು..!

author-image
Ganesh
Updated On
ಉರಿ ಬಿಸಿಲ ತಾಪತ್ರೆ ಒಂದಲ್ಲ ಎರಡಲ್ಲ.. ಕೋಳಿ ಮೊಟ್ಟೆಗೂ ಗುನ್ನಾ ಕೊಟ್ಟ ರಣಬಿಸಿಲು..!
Advertisment
  • ಬಿಸಿಲಿನ ಆರ್ಭಟಕ್ಕೆ ಕಂಗಾಲ್ ಆಗಿರುವ ಮೊಟ್ಟೆ ಉತ್ಪಾದಕರು
  • ಕಳೆದ 15 ದಿನಗಳ ಅಂತರದಲ್ಲಿ ಮೊಟ್ಟೆ ಉತ್ಪಾದನೆ ಭಾರೀ ಇಳಿಕೆ
  • ಮಾರುಕಟ್ಟೆಯಲ್ಲಿ ಮೊಟ್ಟೆ ರೇಟ್ ಹೆಚ್ಚಳ ಆಗುವ ಆತಂಕ

ಬೆಂಗಳೂರು: ಬೇಸಿಗೆಯ ಬಿಸಿಲಿನ ನರ್ತನ ರಾಜ್ಯದಲ್ಲಿ ಜೋರಾಗಿದೆ. ಉರಿ ಬಿಸಿಲಿನ ಸೆಕೆ ಕೇವಲ ಮನುಷ್ಯರಿಗೆ ಮಾತ್ರವಲ್ಲ, ಕೋಳಿ ಮಟ್ಟೆಗೂ ತಟ್ಟಿದೆ.

Advertisment

ವಾತಾವರಣದ ಉಷ್ಣಾಂಶದಲ್ಲಿ ಪ್ರತಿನಿತ್ಯ 2 ರಿಂದ 3 ಡಿಗ್ರಿ ಸೆಲ್ಸಿಯಸ್ ನಿರಂತರ ಏರಿಕೆ ಆಗುತ್ತಿದೆ. ಇದರಿಂದ ಮೊಟ್ಟೆ ಉತ್ಪಾದನೆ, ಕೋಳಿ ಸಾಕಾಣಿಕೆ ಮೇಲೆ ಭಾರೀ ಹೊಡೆತ ಬೀಳುತ್ತಿದೆ. ತಾಪಮಾನದಲ್ಲಿ ಏರಿಕೆ ಆಗುತ್ತಿರೋದ್ರಿಂದ ಕೋಳಿಗಳು ಸಾವನ್ನಪ್ಪುತ್ತಿವೆ. ಒಂದು ಅಂದಾಜಿನ ಪ್ರಕಾರ ದಿನಕ್ಕೆ ಸರಿ ಸುಮಾರು 12 ಲಕ್ಷ ಮೊಟ್ಟೆಗಳ ಉತ್ಪಾದನೆಯಲ್ಲಿ ಖೋತಾ ಆಗಿದೆ. ಕಳೆದ 15 ದಿನಗಳಲ್ಲಿ ಮೊಟ್ಟೆ ಉತ್ಪಾದನೆಯಲ್ಲಿ ಶೇಕಡಾ 15 ರಿಂದ 20 ರಷ್ಟು ಇಳಿಕೆ ಕಂಡಿದೆ.

ಇದನ್ನೂ ಓದಿ: ಇನ್ನೂ ಎರಡು ದಿನ ಭಯಂಕರ ಸೆಕೆ; ಕರ್ನಾಟಕದ ಈ ಭಾಗದಲ್ಲಿ ಭಾರೀ ಬಿಸಿಲು ಎಂದು ಹವಾಮಾನ ಇಲಾಖೆ ಎಚ್ಚರಿಕೆ

ಕರ್ನಾಟಕ ಮೊಟ್ಟೆ ಉತ್ಪಾದನೆಯಲ್ಲಿ 5ನೇ ಸ್ಥಾನ ಹೊಂದಿದೆ. ಸಾಮಾನ್ಯವಾಗಿ ಒಂದು ಕೋಳಿ 20 ವಾರದಿಂದ 80 ವಾರಗಳವರೆಗೆ ನಿರಂತರವಾಗಿ ಮೊಟ್ಟೆ ಇಡುತ್ತದೆ. ಒಂದು ಕೋಳಿ 75 ವಾರದೊಳಗೆ ಸುಮಾರು 330 ಮೊಟ್ಟೆ ಇಡುತ್ತದೆ. ಆದರೆ ಉಷ್ಣಾಂಶ ಏರಿಕೆ ಹಿನ್ನೆಲೆ ಮೊಟ್ಟೆ ಇಡುವುದರಲ್ಲಿ ಇಳಿಕೆ ಆಗಿದೆ. ಮಾಂಸದ ಕೋಳಿಗಳು ಅತಿಯಾದ ಉಷ್ಣಾಂಶಕ್ಕೆ ತುತ್ತಾಗಿ ಕೋಳಿಗಳು ಸಾವನ್ನಪ್ಪುತ್ತಿವೆ.

Advertisment

ಇದನ್ನೂ ಓದಿಫೀಲ್ಡಿಂಗ್​ಗೆ ಅಡ್ಡಿಪಡಿಸಿದ ಜಡೇಜಾ; ರನೌಟ್​​ಗೆ ಅಪೀಲ್ ಮಾಡದೇ ವಿವಾದಕ್ಕೆ ಸಿಲುಕಿಕೊಂಡ ಕಮ್ಮಿನ್ಸ್​..!

ರಾಜ್ಯದಲ್ಲಿ 344 ಲಕ್ಷ ಕೋಳಿಗಳಿಂದ ವಾರ್ಷಿಕವಾಗಿ 1000 ಕೋಟಿ ಮೊಟ್ಟೆ ಉತ್ಪಾದನೆ ಮಾಡಲಾಗ್ತಿದೆ. ಅಂದರೆ ಪ್ರತಿನಿತ್ಯ ಸರಾಸರಿ 2.83 ಕೋಟಿ ಮೊಟ್ಟೆಗಳು ಉತ್ಪಾದನೆ ಆಗುತ್ತಿವೆ. ಬೆಂಗಳೂರು ನಗರವೊಂದರಲ್ಲೇ ದಿನವೊಂದಕ್ಕೆ 85 ಲಕ್ಷ ಮೊಟ್ಟೆಗಳು ಮಾರಾಟ ಆಗುತ್ತವೆ. ಮೈಸೂರು, ಕೊಪ್ಪಳ, ಬಳ್ಳಾರಿ, ಹಾವೇರಿ, ಹೊಸನಗರ ಜಿಲ್ಲೆಯಲ್ಲಿ ಮೊಟ್ಟೆ ಕೋಳಿಗಳ ಸಾಕಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ರಾಜಸ್ಥಾನ್ ರಾಯಲ್ಸ್​ಗೆ RCB ಚಮಕ್ ಕೊಡೋದು ಸುಲಭದ ಮಾತಲ್ಲ, ಅದಕ್ಕೆ ಕಾರಣ ಈ ನಾಲ್ವರು..!

Advertisment

ಮಾರಾಟಗಾರರು ಗ್ರಾಹಕರ ಪೂರೈಕೆ ಪೂರೈಸಲು ಒದ್ದಾಟ ನಡೆಸ್ತಿದ್ದಾರೆ. ಇದೀಗ ಹೊಲ್​ಸೇಲ್​ನಲ್ಲಿ ಒಂದು ಮೊಟ್ಟೆಗೆ 5.65 ರೂಪಾಯಿ ದರ ನಿಗದಿ ಮಾಡಲಾಗಿದೆ. ಚಿಲ್ಲರೆ ದರ 6.50 ರೂಪಾಯಿ ಮಾರುಕಟ್ಟೆಯಲ್ಲಿ ಸಿಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment