/newsfirstlive-kannada/media/post_attachments/wp-content/uploads/2025/03/GST-NOTICE.jpg)
ಉತ್ತರಪ್ರದೇಶದ ಮತ್ತು ಮಧ್ಯಪ್ರದೇಶದ ಮೊಟ್ಟೆ ಮಾರಾಟಗಾರನಿಗೆ ಹಾಗೂ ಜ್ಯೂಸ್ ವ್ಯಾಪಾರಿಗೆ ಜಿಎಸ್​ಟಿ ಬಿಗ್ ಶಾಕ್ ಕೊಟ್ಟಿದೆ. ಕೋಟ್ಯಾಂತರ ರೂಪಾಯಿ ತೆರಿಗೆ ಕಟ್ಟುವುದನ್ನು ಬಾಕಿ ಉಳಿಸಿಕೊಂಡ ವಿಚಾರವಾಗಿ ಸರಕು ಮತ್ತು ಸೇವೆ ಇಲಾಖೆ ಈ ಇಬ್ಬರು ವ್ಯಾಪಾರಿಗಳಿಗೆ ನೋಟಿಸ್ ಜಾರಿ ಮಾಡಿದೆ. ಮನೆಗೆ ತಾವೊಬ್ಬರೇ ಆಧಾರವಾಗಿರುವ ಇಬ್ಬರು ವ್ಯಾಪಾರಿಗಳಿಗೆ ಬಂದ ನೋಟಿಸ್​ ಅವರನ್ನು ತೀವ್ರವಾಗಿ ಆತಂಕಕ್ಕೆ ತಳ್ಳಿದೆ.
ಇದನ್ನೂ ಓದಿ: ವಜ್ರಕ್ಕಿಂತ ದುಬಾರಿ ಈ ಒಂದು ಮರದ ಕಟ್ಟಿಗೆ..ಇದರ ಬೆಲೆ ಕೇಳಿದ್ರೆ ದಂಗಾಗಿ ಹೋಗ್ತೀರಾ
ಮಧ್ಯಪ್ರದೇಶದ ದೊಮ್ಹಾ ಜಿಲ್ಲೆಯ ಮೊಟ್ಟೆ ಮಾರಾಟಗಾರ ಪ್ರಿನ್ಸ್​ ಸುಮನ್​ ಹೇಳುವ ಪ್ರಕಾರ. ನೋಟಿಸ್​ನಲ್ಲಿ ನಾನು ಸುಮಾರು 50 ಕೋಟಿ ರೂಪಾಯಿ ವ್ಯಾಪಾರ ವ್ಯವಹಾರ ನಡೆಸುತ್ತಿದ್ದೇನೆ ಹೀಗಾಗಿ 6 ಕೋಟಿ ರೂಪಾಯಿ ಜಿಎಸ್​ಟಿ ಕಟ್ಟಬೇಕು ಎಂದು ಹೇಳಲಾಗಿದೆಯಂತೆ. ಐ.ಟಿ ಇಲಾಖೆ ಕಳಿಸಿರುವ ನೋಟಿಸ್​ನಲ್ಲಿ ಪ್ರಿನ್ಸ್ ಸುಮನ್​ ಕಂಪನಿಯ ಬಗ್ಗೆ ಪ್ರಿನ್ಸ್ ಎಂಟರ್​ಪ್ರೈಸಿಸ್​, ದೆಹಲಿಯ 3ನೇ ಜೋನ್​, ವಾರ್ಡ್​ ನಂಬರ್​ ಎಂದು ಇದ್ದು, 2022ರಿಂದ ಸುಮನ್ ಎಂಬ ಹೆಸರಿನಿಂದ ಈ ಸಂಸ್ಥೆ ರಬ್ಬರ್​, ಕಟ್ಟಿಗೆ ಮತ್ತು ಕಬ್ಬಿಣದ ವ್ಯಾಪಾರ ನಡೆಸುತ್ತಿದ್ದು, ಈ ಎರಡು ತಿಂಗಳಲ್ಲಿ ಬೃಹತ್ ಮೊತ್ತದ ವ್ಯವಹಾರ ನಡೆದಿದೆ. ಹೀಗಾಗಿ 6 ಕೋಟಿ ರೂಪಾಯಿ ಜಿಎಸ್​ಟಿ ತುಂಬುವಂತೆ ಹೇಳಲಾಗಿದೆ.
/newsfirstlive-kannada/media/post_attachments/wp-content/uploads/2025/03/GST-NOTICE-1.jpg)
ಪ್ರಿನ್ಸ್ ಸುಮನ್ ಹೇಳುವ ಪ್ರಕಾರ, ನಾನು ಕೇವಲ ಮೊಟ್ಟೆ ಅಂಗಡಿಯನ್ನು ಹೊಂದಿದ್ದೇನೆ. ನಾನು ಯಾವತ್ತು ದೆಹಲಿಗೆ ಹೋದವನಲ್ಲ, ನನ್ನ ಹೆಸರಲ್ಲಿ ಯಾವುದೇ ಕಂಪನಿ ಕೂಡ ಇಲ್ಲ. ನಾನು ಮಧ್ಯಪ್ರದೇಶದ ಪಾಥರೀಯಾ ನಗರದವನು ಎಂದು ಹೇಳಿದ್ದಾರೆ. ಇನ್ನು ಧಾರ್ ಸುಮನ್ ಅವರ ತಂದೆ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದು ಒಂದು ವೇಳೆ ನಾವು 50 ಕೋಟಿ ರೂಪಾಯಿ ಗಳಿಕೆಯನ್ನು ಹೊಂದಿದ್ದೆ ಆದರೆ, ನಿತ್ಯ ಖರ್ಚುಗಳಿಗಾಗಿ ಏಕೆ ಪರದಾಡುತ್ತಿದ್ದೇವು ಎಂದು ಗೋಳು ತೋಡಿಕೊಂಡಿದ್ದಾರೆ.
ಇನ್ನು ಈ ಕುಟುಂಬದ ಪರವಾಗಿ ಮಾತನಾಡಿದ ವಕೀಲರೊಬ್ಬರು. ಸುಮನ್ ಅವರ ವೈಯಕ್ತಿಕ ದಾಖಲೆಗಳು ದುರುಪಯೋಗ ಆಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಾವು ಈಗಾಗಲೇ ಈ ಬಗ್ಗೆ ತನಿಖೆ ನಡೆಸಬೇಕೆಂದು ಪೊಲೀಸರಿಗೆ ಹಾಗೂ ಟ್ಯಾಕ್ಸ್ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಇವತ್ತು ಸೂರ್ಯ ಗ್ರಹಣ.. ಯುಗಾದಿ ಹಿನ್ನೆಲೆಯಲ್ಲಿ ಧಾರ್ಮಿಕವಾಗಿ ಭಾರೀ ಮಹತ್ವ..!
ಇನ್ನು ಉತ್ತರಪ್ರದೇಶದ ಅಲಿಗಢದ ಜ್ಯೂಸ್​​​ ಮಾರಾಟಗಾರ ಎಂಡಿ ರಹೀಸ್​ಗೂ ಕೂಡ ಐಟಿ ಇಲಾಖೆ 7.5 ಕೋಟಿ ರೂಪಾಯಿ ಜಿಎಸ್​ಟಿ ಕಟ್ಟುವಂತೆ ನೋಟಿಸ್ ನೀಡಿದೆ. ನೋಟಿಸ್​ ಕಂಡು ಬೆಚ್ಚಿ ಬಿದ್ದಿರುವ ರಹೀಸ್​. ನನಗೆ ಯಾಕೆ ಈ ನೋಟಿಸ್ ಬಂತು ಎಂದು ಗೊತ್ತಾಗುತ್ತಿಲ್ಲ. ನಾನು ಕೇವಲ ಜ್ಯೂಸ್ ಮಾರಾಟ ಮಾಡುತ್ತೇನೆ. ನನ್ನ ಜೀವನದಲ್ಲಿ ದೊಡ್ಡ ಮೊತ್ತದ ಹಣವನ್ನೇ ನಾನು ನೋಡಿಲ್ಲ. ಈಗ ಏನು ಮಾಡಬೇಕು ಎಂಬುದೇ ನನಗೆ ತಿಳಿಯುತ್ತಿಲ್ಲ ಎಂದು ರಹೀಸ್ ಅಳಲು ತೋಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us