/newsfirstlive-kannada/media/post_attachments/wp-content/uploads/2024/12/BLACK-MAGIC.jpg)
ಯೂಟ್ಯೂಬ್​ ನೋಡಿ ಭಾನಾಮತಿ ವಿದ್ಯೆಯನ್ನು ಕಲಿತ ನಾಲ್ವರಿಂದ ಮಹಾ ಘಾತಕ ಕಾರ್ಯವೊದು ನಡೆದು ಹೋಗಿದೆ. 50 ಕೋಟಿ ರೂಪಾಯಿ ಆಸೆಗಾಗಿ ನಾಲ್ವರು ಸೇರಿ ಸ್ನೇಹಿತನ ತಲೆಯನ್ನೇ ಕತ್ತರಿಸಿ ಹಾಕಿದ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್​ನಲ್ಲಿ ನಡೆದಿದೆ.
ಘಾಜಿಯಾಬಾದ್ ಪೊಲೀಸರಿಗೆ ಇತ್ತೀಚೆಗೆ ಒಂದು ರುಂಡುವಿಲ್ಲದ ಪುರುಷನ ಮೃತದೇಹ ತಿಲಾಮೊಡ್ ಏರಿಯಾದಲ್ಲಿ ಜೂನ್ 22 ರಂದು ಪತ್ತೆಯಾಗಿತ್ತು. ಅವನನ್ನು ಮೋತಿಹಾರಿ ನಿವಾಸಿ ರಾಜಕುಮಾರ್ ಎಂದು ಗುರುತಿಸಲಾಗಿತ್ತು. ಮೇಲ್ನೋಟಕ್ಕೆ ಇದು ಬಾನಾಮತಿಗಾಗಿ ನಡೆದ ಕೊಲೆ ಎಂಬುದು ಪೊಲೀಸರಿಗೆ ಅರ್ಥವಾಗಿತ್ತು. ಕೆಲವು ವಾರಗಳ ತನಿಖೆಯ ನಂತರ ಪೊಲೀಸರು ಧನಂಜಯ್ ಹಾಗೂ ವಿಕಾಸ್ ಎಂಬುವವರನ್ನು ಆಗಸ್ಟ್ 15 ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಬಲಿಪಶುವಾದ ರಾಜಕುಮಾರ್​ನ ರೂಮ್​ಮೇಟ್ ವಿಕಾಸ್ ಅಲಿಯಾಸ್ ಪರಮಾತ್ಮನಿಂದಲೇ ಆತನ ಕೊಲೆಗೆ ಯೋಜನೆ ನಡೆದಿದ್ದು ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ:ಪೊಲೀಸರ ಕಠಿಣ ಕ್ರಮ ಹೊಗಳಿದ್ದೇ ತಪ್ಪಾಯ್ತಾ? ಪತ್ನಿಗೆ ತ್ರಿವಳಿ ತಲಾಖ್ ಹೇಳಿದ ಪತಿ! ಆಗಿದ್ದೇನು?
ವಿಚಾರಣೆ ವೇಳೆ ಒಂದೊಂದೇ ಸತ್ಯವನ್ನು ಬಾಯಿಬಿಟ್ಟ ಆರೋಪಿಗಳು ಇದು ಬಾನಾಮತಿಗಾಗಿ ನಡೆದ ಕೊಲೆ ಎಂದು ಹೇಳಿದ್ದಾರೆ. ಪರಮಾತ್ಮ ಹಾಗೂ ನರೇಂದ್ರ ಎಂಬುವವರಿಗೆ ಪವನ್ ಹಾಗೂ ಪಂಕಜ್ ಎಂಬ ಸ್ವಯಂ ಘೋಷಿತ ತಾಂತ್ರಿಕರು ಸಂಪರ್ಕಕ್ಕೆ ಬಂದಿದ್ದರು. ಅವರು ನೀವು ಒಂದು ವೇಳೆ ಮನುಷ್ಯನ ತಲೆ ಬುರುಡೆ ಪೂಜೆ ಮಾಡಿದರೆ ನೀವು 50 ಕೋಟಿ ರೂಪಾಯಿಯ ಒಡೆಯರು ಆಗುತ್ತೀರಿ ಎಂದು ಹೇಳಿದರು. ನರೇಂದ್ರ ಹಾಗೂ ಪರಮಾತ್ಮ ಇವರ ಜೊತೆ ಧನಂಜಯ್ ಹಾಗೂ ವಿಕಾಸ್ ಎಲ್ಲರೂ ಮಾತನಾಡಿಕೊಂಡು ಕುಮಾರ್​ನನ್ನು ತಮ್ಮ ಮನೆಗೆ ಕರೆಸಿಕೊಂಡಿದ್ದಾರೆ. ಅಲ್ಲಿಯೇ ಅವನ ಕತೆಯನ್ನು ಮುಗಿಸಿದ್ದಾರೆ. ಆಮೇಲೆ ಆತನ ನಾಲಿಗೆಯನ್ನು ಕತ್ತರಿಸಿದ್ದಾರೆ ಎಂಬುದನ್ನು ವಿಚಾರಣೆಯಲ್ಲಿ ಆರೋಪಿಗಳು ಬಾಯಿಬಿಟ್ಟಿದ್ದಾರೆ.
ಇದನ್ನೂ ಓದಿ:108 ಆ್ಯಂಬುಲೆನ್ಸ್ ಕದ್ದು ಓಡುತ್ತಿದ್ದ ಕಳ್ಳ.. ಸಿನಿಮಾ ಸ್ಟೈಲ್‌ನಲ್ಲಿ ಚೇಸ್ ಮಾಡಿದ ಪೊಲೀಸ್! VIDEO
ಹತ್ಯೆ ಮಾಡಿದ ಆರೋಪಿಗಳು ಕುಮಾರ್​ನ ತಲೆಯನ್ನು ದೇಹದಿಂದ ಬೇರೆ ಮಾಡಿ ಅದನ್ನು ಪಂಕಜ್ ಹಾಗೂ ಪವನ್​ಗೆ ಒಪ್ಪಿಸಿ ಬಳಿಕ ಉಳಿದ ದೇಹವನ್ನು ತಿಲಾಮೊಡ್ ಏರಿಯಾದಲ್ಲಿ ಮುಚ್ಚಿ ಹಾಕಿದ್ದಾರೆ ಎಂದು ಘಾಜಿಯಾಬಾದ್​ನ ಪೊಲೀಸ್ ಉಪ ಆಯುಕ್ತ ನಿಮಿಷ್ ಪಾಟೀಲ್ ಹೇಳಿದ್ದಾರೆ. ಇನ್ನು ವಿಚಾರಣೆಯಲ್ಲಿ ಪವನ್ ಮತ್ತು ಪಂಕಜ್ ತಾವು ಯೂಟ್ಯೂಬ್​ ನೋಡಿ ಬಾನಾಮತಿ ವಿದ್ಯೆಯನ್ನು ಕಲಿತಿದ್ದು ಎಂದು ಹೇಳಿಕೊಂಡಿದ್ದಾರೆ. ಬಹಳಷ್ಟು ಹಣವನ್ನು ಬಾನಾಮತಿ ವಿದ್ಯೆಯಿಂದ ಹೇಗೆ ಗಳಿಸುವುದು ಎಂಬ ವಿಡಿಯೋಗಳನ್ನು ನೋಡಿ ನಾವು ಕಲಿತುಕೊಂಡಿದ್ದು ಎಂದು ತಪ್ಪೊಪ್ಪಿಗೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us