Advertisment

ಪವಿತ್ರ ರಂಜಾನ್​ ವೇಳೆ ಸಮಾಜದ ಸ್ವಾಸ್ಥ್ಯ ಕದಡುವ ಕೆಲಸ.. ಕೊಪ್ಪಳ, ಹುಬ್ಬಳ್ಳಿಯಲ್ಲಿ ಕಿರಿಕ್..!

author-image
Ganesh
Updated On
ಪವಿತ್ರ ರಂಜಾನ್​ ವೇಳೆ ಸಮಾಜದ ಸ್ವಾಸ್ಥ್ಯ ಕದಡುವ ಕೆಲಸ.. ಕೊಪ್ಪಳ, ಹುಬ್ಬಳ್ಳಿಯಲ್ಲಿ ಕಿರಿಕ್..!
Advertisment
  • ರಂಜಾನ್​ ಸಂಭ್ರಮದ ನಡುವೆ ಪ್ಯಾಲೆಸ್ತೇನ್​ ಪರ ಘೋಷಣೆ
  • ಕೊಪ್ಪಳ, ಚಿಕ್ಕಮಗಳೂರಿನಲ್ಲಿ ಉದ್ದಟತನ, ಎಲ್ಲೆಡೆ ಆಕ್ರೋಶ
  • ಹುಬ್ಬಳ್ಳಿಯಲ್ಲಿ ಪ್ರಾರ್ಥನೆ ವೇಳೆ ಸಂಘ ಪರಿಹಾರ ಬಗ್ಗೆ ಅವಹೇಳನ

ಈದ್-ಉಲ್-ಫಿತರ್‌ ಹೆಸರಿನಿಂದ ಕರೆಯಲ್ಪಡುವ ರಂಜಾನ್‌ ಹಬ್ಬವು ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವು ಪವಿತ್ರ ರಂಜಾನ್ ಮಾಸದ ಅಂತ್ಯವನ್ನು ಸೂಚಿಸುತ್ತದೆ. ರಂಜಾನ್‌ ಮಾಸದ ಚಂದ್ರ ದರ್ಶನದೊಂದಿಗೆ ಆರಂಭವಾಗುವ ಉಪವಾಸ ಆಚರಣೆಯು ಶವ್ವಾಲ್‌ ತಿಂಗಳ ಚಂದ್ರ ದರ್ಶನದೊಂದಿಗೆ ಕೊನೆಗೊಳ್ಳುತ್ತದೆ.

Advertisment

ದಾನ-ಧರ್ಮದ ಪ್ರತೀಕವಾಗಿರುವ ಈ ರಂಜಾನ್​ ಹಬ್ಬವನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಿದ್ದಾರೆ. ಕರ್ನಾಟಕದಲ್ಲೂ ಕೆಲವೆಡೆ ಶಾಂತಿ ಸೌಹಾರ್ದತೆಯಿಂದ ಆಚರಣೆ ಮಾಡಿದ್ದಾರೆ.. ಆದ್ರೆ ಕೆಲ ಮುಸ್ಲಿಮರ ಸಮಾಜದಲ್ಲಿ ಶಾಂತಿ ಕದಡುವಂತೆ ಕೆಲಸವನ್ನು ಮಾಡಿದ್ದಾರೆ. ಪ್ಯಾಲೆಸ್ತೇನ್​ ಪರ ಭಿತ್ತಿ ಫಲಕಗಳನ್ನು ಪ್ರದರ್ಶಿಸಿದ್ದಾರೆ.

ರಂಜಾನ್​ ಸಂಭ್ರಮದ ನಡುವೆ ಪ್ಯಾಲೆಸ್ತೇನ್​ ಪರ ಘೋಷಣೆ

ಗಂಗಾವತಿ ನಗರದ ಈದ್ಗಾ ಮೈದಾನ ಮತ್ತು ಜಾಮೀಯಾ ಮಸೀದಿ ಬಳಿ ರಂಜಾನ ಪ್ರಾರ್ಥನೆ ಸಂದರ್ಭದಲ್ಲಿ ಪ್ಯಾಲಿಸ್ತೇನ್ ಪರ ಪ್ಲೇ ಕಾರ್ಡ್​ ಪ್ರದರ್ಶಿಸಿ, ಘೋಷಣೆ ಕೂಗಿದ್ದಾರೆ. ಜೊತೆಗೆ ವಕ್ಫ್ ಮಸೂದೆ ವಿರೋಧಿ ಘೋಷಣೆ ಕೂಗಿದ್ದಾರೆ. ಇದರ ಬೆನ್ನಲ್ಲೇ ಅಲರ್ಟ್​ ಆದ ಪೊಲೀಸರು 6 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಹ್ಯಾಟ್ರಿಕ್​ ಸೋಲಿನಿಂದ ಮುಂಬೈ ಇಂಡಿಯನ್ಸ್ ಪಾರು​.. ಹಾರ್ದಿಕ್​ ಪಾಂಡ್ಯ ಪಡೆಗೆ ಮೊದಲ ಗೆಲುವು

Advertisment

publive-image

ಕೊಪ್ಪಳದಲ್ಲಿ ಮಾತ್ರವಲ್ಲ.. ಕಾಫಿನಾಡು ಚಿಕ್ಕಮಗಳೂರಿನಲ್ಲೂ ಕೆಲ ಮುಸ್ಲಿಂ ಸಮಾಜದವರು ಪ್ಯಾಲೆಸ್ತೇನ್​ ಪರ ನಾಮಫಲಕ ಪ್ರದರ್ಶಿಸಿದ್ದಾರೆ. ಕೆಂಪನಹಳ್ಳಿ ಸಮೀಪದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ವೇಳೆ ಕೈಗೆ ಕಪ್ಪು ಪಟ್ಟಿ ಧರಿಸಿ ವಕ್ಫ್ ಬೋರ್ಡ್ ತಿದ್ದುಪಡಿ ಪ್ಯಾಲೆಸ್ತೇನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನ ಖಂಡಿಸಿ ಕಪ್ಪುಪಟ್ಟಿ ಧರಿಸಿ ಭಿತ್ತಿ ಪತ್ರ ಪ್ರದರ್ಶನ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಪ್ರಾರ್ಥನೆ ವೇಳೆ ಸಂಘ ಪರಿಹಾರ ಬಗ್ಗೆ ಅವಹೇಳನ

ಹುಬ್ಬಳ್ಳಿಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಸಂಘ ಪರಿಹಾರದ ಬಗ್ಗೆ ಅವಹೇಳನ ಮಾಡಿ ಪ್ಲೇ ಕಾರ್ಡ್ ಪ್ರದರ್ಶನ ಮಾಡಲಾಗಿದೆ. ಇದರಿಂದ ಆಕ್ರೋಶಗೊಂಡ ಹಿಂದೂ ಸಂಘಟನೆಗಳು ಎಸ್​ಡಿಪಿಐ ಮುಖಂಡನ ವಿರುದ್ಧ ಆಕ್ರೋಶ ಹೊರಹಾಕಿದ್ರು. ಬಳಿಕ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಕ್ರಮಕೈಗೊಳ್ಳವಂತೆ ಆಗ್ರಹಿಸಿದ್ರು.. ಬಳಿಕ ಪೊಲೀಸರಿ ದೂರಿನನ್ವರ ಅಬ್ದುಲಗಪುರ ಕುರಹಟ್ಟಿ ವಿರುದ್ಧ ಬಿ ಎನ್ ಎಸ್ 2023 ಯು/ಎಸ್ 352, 353 ಆರ್/ಡಬ್ಲ್ಯೂ 3(5) ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಮೋದಿಗೆ ಆಪ್ತ ಕಾರ್ಯದರ್ಶಿಯಾಗಿ ಯುವ IFS ಅಧಿಕಾರಿ ನೇಮಕ.. ನಿಧಿ ತಿವಾರಿ ಯಾರು?

Advertisment

publive-image

ಒಟ್ಟಾರೆ.. ರಂಜಾನ್​ ಪ್ರಾರ್ಥನೆ ವೇಳೆ ಸಮಾಜದ ಸ್ವಾಸ್ಥ್ಯವನ್ನು ಕದಡುವ ಕೆಲಸಕ್ಕೆ ಕೈ ಹಾಕಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಇನ್ನಾದ್ರೂ ಇಂಧ ಪುಂಡರಿಗೆ ಸರಿಯಾದ ಶಿಕ್ಷೆ ಆಗ್ಬೇಕಿದೆ.

ಇದನ್ನೂ ಓದಿ: ಹೊಸ ಆರ್ಥಿಕ ವರ್ಷ ಆರಂಭ; ದುಡಿಯುವ ವರ್ಗಕ್ಕೆ ಗಾಯದ ಮೇಲೆ ಬರೆ! ಯಾರಿಗೆಲ್ಲ ಬಿಗ್ ರಿಲೀಫ್?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment