/newsfirstlive-kannada/media/post_attachments/wp-content/uploads/2025/04/Pope-Francis-Eiffel-Tower.jpg)
ಕ್ರೈಸ್ತ ಬಾಂಧವರ ಪರಮೋಚ್ಚ ಧರ್ಮಗುರು, ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪೋಪ್ ಫ್ರಾನ್ಸಿಸ್ ಇಂದು ಬೆಳಗ್ಗೆ 7.35ಕ್ಕೆ ನಿಧನರಾಗಿದ್ದಾರೆ. ಪೋಪ್ ಫ್ರಾನ್ಸಿಸ್ ನಿಧನಕ್ಕೆ ಜಗತ್ತಿನಾದ್ಯಂತ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಪೋಪ್ ಕಳೆದುಕೊಂಡ ವ್ಯಾಟಿಕನ್ ಸಿಟಿ, ರೋಮ್‌ನಲ್ಲಿ ಶೋಕ ಸಾಗರ ಮಡುಗಟ್ಟಿದೆ.
ಮಹಾನ್ ನಾಯಕನಾಗಿ ಮುಂದಿದ್ದು ನಡೆಸುವ ವ್ಯಕ್ತಿ ಪೋಪ್ ಫ್ರಾನ್ಸಿಸ್. ಬಡವರ ಪರ ಧ್ವನಿ ಎತ್ತುತ್ತಿದ್ದ ಪೋಪ್ ಫ್ರಾನ್ಸಿಸ್‌ಗೆ ಪ್ಯಾರಿಸ್‌ನ ಅತ್ಯುನ್ನತ ಗೌರವ ಸಲ್ಲಿಸಲಾಗುತ್ತಿದೆ. ಫ್ರಾನ್ಸಿಸ್ ಕಣ್ಮುಚ್ಚಿದ ಹಿನ್ನೆಲೆ, ಅವರ ಸ್ಮರಣಾರ್ಥವಾಗಿ ಪ್ಯಾರಿಸ್‌ನ ಐಫೆಲ್ ಟವರ್ನಲ್ಲಿ ಇಂದು ರಾತ್ರಿ ಕಗ್ಗತ್ತಲು ಆವರಿಸಲಿದೆ.
ಬಡವರ ಬಂಧುವಾಗಿದ್ದ ಫ್ರಾನ್ಸಿಸ್ ಮೃತರಾಗಿದ್ದರಿಂದ, ಅವರ ಸ್ಮರಣಾರ್ಥವಾಗಿ ಸೋಮವಾರ ರಾತ್ರಿ ಐಫೆಲ್ ಟವರ್ ಲೈಟುಗಳನ್ನ ಆರಿಸಲಾಗಿದೆ. ಫ್ರೆಂಚ್ ರಾಜಧಾನಿಯಲ್ಲಿ ಒಂದು ಸ್ಥಳಕ್ಕೆ ಫ್ರಾನ್ಸಿಸ್ ಅವರ ಹೆಸರನ್ನ ಇಡಲು ನಿರ್ಧಾರ ಮಾಡಲಾಗಿದೆ. ಆಧ್ಯಾತ್ಮಿಕ ಕಾಳಜಿಯ ಕೇಂದ್ರದಲ್ಲಿ ಫ್ರಾನ್ಸಿಸ್ ಅವರ ಮೃತದೇಹವನ್ನ ಇರಿಸಿ, ಬಡವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: Rest in Peace: ಪೋಪ್ ಫ್ರಾನ್ಸಿಸ್ ಇನ್ನಿಲ್ಲ.. ವ್ಯಾಟಿಕನ್ ಸಿಟಿಯಿಂದ ಆಘಾತಕಾರಿ ಸುದ್ದಿ!
ಇನ್ನೆರಡು ದಿನದಲ್ಲಿ ಪೋಪ್ ಫ್ರಾನ್ಸಿಸ್ ಅವರ ಮೃತದೇಹವನ್ನ ಸೇಂಟ್ ಪೀಟರ್ಸ್ ಬೆಸಿಲಿಕಾಗೆ ಸಾಗಿಸಿ, ಭಕ್ತರು ಗೌರವ ಸಲ್ಲಿಸಲು ಅಂತಿಮ ವಿಧಿವಿಧಾನ ವ್ಯವಸ್ಥೆ ಮಾಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ