ಮಾಲ್​ನಲ್ಲಿ ಮಹಿಳೆಯರ ಜತೆ ಅಸಭ್ಯ ವರ್ತನೆ ಮಾಡಿದ್ದ ವೃದ್ಧ ಪತ್ತೆ.. ಬೆಂಗಳೂರಿನ ಯಾವ ಏರಿಯಾ?

author-image
Bheemappa
Updated On
ಮಾಲ್​​, ಮೆಟ್ರೋ, ಈಗ BMTC ಬಸ್​​.. ಮತ್ತೆ ಸಿಲಿಕಾನ್ ಸಿಟಿಯಲ್ಲಿ ಕೇಳಿಬಂದ ಲೈಂಗಿಕ ದೌರ್ಜನ್ಯ ಪ್ರಕರಣ
Advertisment
  • ವಿಡಿಯೋ ದೃಶ್ಯ ಆಧರಿಸಿ ಆರೋಪಿ ಗುರುತು ಪತ್ತೆ ಹಚ್ಚಿದ ಪೊಲೀಸರು
  • ಮಠಕ್ಕೆ ಸೇರಿದ್ದ ಶಾಲೆಯೊಂದರಲ್ಲಿ ​ಮುಖ್ಯ ಶಿಕ್ಷಕನಾಗಿದ್ದ, ಇತ್ತಿಚೀಗೆ ನಿವೃತ್ತಿ
  • ಈ ಸಂಬಂಧ ಆರೋಪಿ ಯಾರೆಂಬುದನ್ನ ಪೊಲೀಸರು ಪತ್ತೆ ಮಾಡಿದ್ದಾರೆ

ಬೆಂಗಳೂರು: ಲುಲು ಮಾಲ್​ನಲ್ಲಿ ಮಹಿಳೆಯರ ಜೊತೆ ಅನುಚಿತ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಆಧರಿಸಿ ಆರೋಪಿಯ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಬಸವೇಶ್ವರನಗರ ನಿವಾಸಿ ಅಶ್ವಥ್ ನಾರಾಯಣ್ (60) ಮಾಲ್​ನಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ್ದ ಆರೋಪಿ. ಪೊಲೀಸರು ಬಳಿ ಮನೆ ಹೋಗಿದ್ದ ವೇಳೆ ಆರೋಪಿ ಅಶ್ವಥ್ ನಾರಾಯಣ್ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ. ಆರೋಪಿಯು ನಗರದ ಪ್ರತಿಷ್ಠಿತ ಮಠಕ್ಕೆ ಸೇರಿದ್ದ ಶಾಲೆಯೊಂದರಲ್ಲಿ ​ಮುಖ್ಯ ಶಿಕ್ಷಕನಾಗಿ ಕೆಲಸ ಮಾಡಿ 8 ತಿಂಗಳು ಹಿಂದೆ ನಿವೃತ್ತನಾಗಿದ್ದನು.

3 ದಿನಗಳ ಹಿಂದೆ ಲುಲು ಮಾಲ್​ನಲ್ಲಿ ಯವತಿಯರು ಹಾಗೂ ಮಹಿಳೆಯರಿಗೆ ತಿಳಿಯದಂತೆ ಅವರ ಜೊತೆ ಆರೋಪಿಯು ಅಸಭ್ಯವಾಗಿ ವರ್ತನೆ ಮಾಡುತ್ತಿದ್ದನು. ಇದನ್ನು ಯಶವಂತ್ ಎನ್ನುವ ಯುವಕ ತನ್ನ ಮೊಬೈಲ್​ನಲ್ಲಿ ವಿಡಿಯೋ ಮಾಡಿ ಮಾಲ್​ ಸಿಬ್ಬಂದಿಗೆ ಕಂಪ್ಲೇಟ್ ಮಾಡಿದ್ದನು. ಬಳಿಕ ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದ್ದರಿಂದ ಮಾಲ್​ನ ಮ್ಯಾನೇಜರ್ ಪೊಲೀಸ್​ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ಈ ಸಂಬಂಧ ತನಿಖೆ ಕೈಗೊಂಡಿದ್ದ ಪೊಲೀಸರು ವಿಡಿಯೋ ಆಧರಿಸಿ ಆರೋಪಿಯ ಗುರುತು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಎಸ್ಕೇಪ್ ಆಗಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment