ತನಗೆ ಉಳಿಯಲು ಸರಿಯಾದ ಮನೆಯೇ ಇಲ್ಲ.. ಆದರೂ ಅಂಗನವಾಡಿಗಾಗಿ ಜಾಗ ದಾನ ಮಾಡಿದ ಅಜ್ಜಿ..!

author-image
Ganesh
Updated On
ತನಗೆ ಉಳಿಯಲು ಸರಿಯಾದ ಮನೆಯೇ ಇಲ್ಲ.. ಆದರೂ ಅಂಗನವಾಡಿಗಾಗಿ ಜಾಗ ದಾನ ಮಾಡಿದ ಅಜ್ಜಿ..!
Advertisment
  • ಅಜ್ಜಿಯ ಸಾಮಾಜಿಕ ಕಳಕಳಿಗೆ ಎಲ್ಲರೂ ಫಿದಾ ಆಗಿದ್ದಾರೆ
  • 17 ಲಕ್ಷ ವೆಚ್ಚದಲ್ಲಿ ತಲೆ ಎತ್ತಿದ ಅಂಗನವಾಡಿ ಕೇಂದ್ರ
  • ಆದರೆ, ಅಜ್ಜಿ ಸುಶೀಲಮ್ಮಳಿಗೆ ಸರಿಯಾದ ಸೂರೇ ಇಲ್ಲ

ದಾವಣಗೆರೆ: ಸೂಜಿ ಮಣೆಯ ಜಾಗ ಬಿಟ್ಟು ಕೊಡದೆ ಅದಕ್ಕಾಗಿ ಯುದ್ಧಗಳೇ ನಡೆದ ಉದಾಹರಣೆಗಳಿವೆ. ಆದರೆ ಇಲ್ಲೊಬ್ಬ ಅಜ್ಜಿ ಅಂಗನವಾಡಿ ಕೇಂದ್ರಕ್ಕೆ ಜಾಗ ಇಲ್ಲ ಅಂತ ತನ್ನ ಜಾಗವನ್ನ ದಾನವಾಗಿ ನೀಡಿದ್ದಾಳೆ. ಅಜ್ಜಿಯ ಈ ಹೃದಯ ವೈಶಾಲ್ಯತೆಯನ್ನ ಈಡೀ ಗ್ರಾಮವೇ ಕೊಂಡಾಡುತ್ತಿದೆ.

ಅಜ್ಜಿಯ ಹೆಸರು ಸುಶೀಲಮ್ಮ. ದಾpublive-imageವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮೆದಿಕೆರೆ ಗ್ರಾಮದವರು. ಸುಶಿಲಮ್ಮ ಮೆದಿಕೆರೆ ಗ್ರಾಮದಲ್ಲಿ ಸ್ವಂತ ಸೂರು ಇಲ್ಲದೆ ಬಾಡಿಗೆ ಮನೆಯಲ್ಲಿದ್ದಾರೆ. ಅವರೇ ಕಷ್ಟದಲ್ಲಿದ್ದರೂ ಕೂಡ ಅವರ ಹೃದಯ ವೈಶಾಲ್ಯತೆ ಎಲ್ಲರಿಗೂ ಮಾದರಿಯಾಗುವಂತಿದೆ. ತಮ್ಮದೆ ಗ್ರಾಮದ ಅಂಗನವಾಡಿ ಕೇಂದ್ರದ ಮಕ್ಕಳು ಸೋರುವ ಕೋಣೆಯಲ್ಲಿ ವಿದ್ಯಾಭ್ಯಾಸ ಮಾಡುತಿದ್ದರು. ಇದನ್ನು ನೋಡಿ ತುಂಬಾ ನೊಂದುಕೊಂಡಿದ್ದ ಸುಶೀಲಮ್ಮ ಮತ್ತು ಕುಟುಂಬ ತಮ್ಮ ಜಾಗವನ್ನ ದಾನ ನೀಡಲು ಮುಂದಾಗಿದ್ರು. ಇದನ್ನ ಪಂಚಾಯತ್​ನ ಗಮನಕ್ಕೆ ತಂದಾಗ ಅವರು ಕೂಡ ಸಂತೋಷದಿಂದ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಅಂದು 600 ರೂ ಸಂಬಳ, ಇಂದು ದಿನಕ್ಕೆ 25 ಸಾವಿರ.. ಸಿನಿಮಾ ಟು ಕ್ರಿಕೆಟ್​ ‘ಚಕ್ರವರ್ತಿ’ ಕಹಾನಿ..!

publive-image

ಅಂಗನವಾಡಿ ಮಕ್ಕಳಿಗೆ ಒಳ್ಳೇಯ ಕಟ್ಟಡ ಕಟ್ಟಲಿ ಅಂತ ಸುಶಿಲಮ್ಮ ಕುಟುಂಬ ಒಂದೂವರೆ ಗುಂಟೆ ಜಾಗವನ್ನ ದಾನವಾಗಿ ನೀಡಿದ್ದಾರೆ. ಅಜ್ಜಿ ನೀಡಿದ ಜಾಗದಲ್ಲೆ ಸರ್ಕಾರದಿಂದ‌ 17 ಲಕ್ಷ ವೆಚ್ಚ ಮಾಡಿ ಭವ್ಯವಾದ ಅಂಗನವಾಡಿ ಕಟ್ಟಡ ಕಟ್ಟಿದ್ದಾರೆ.‌ ಇದು ನಮ್ಮೆಲ್ಲ ಕುಟುಂಬ ಸದಸ್ಯರ ಆಸೆ. ನಮ್ಮ ಆಸೆಯಂತೆ ಜಾಗವನ್ನ ದಾನ ನೀಡಿದ್ದೇವೆ ಎಲ್ಲ ಮಕ್ಕಳಿಗೂ ಇದರಿಂದ ಅನಕೂಲವಾಗಲಿ. ಆ ಮಕ್ಕಳು ಚನ್ನಾಗಿ ಬೆಳೆಯಲಿ ಅಂತ ಸುಶಿಲಮ್ಮ ಹಾರೈಸಿದ್ದಾರೆ.

publive-image

ಸುಶಿಲಮ್ಮಾಗೆ ಇರಲೂ ಸ್ವಂತವಾದ ಸೂರು ಇಲ್ಲ. ಒಂದು ಮನೆ ಕಟ್ಟಲು ಅಂತ ತೀರ್ಮಾನ‌ ಮಾಡಿದ್ದರೂ ಹಣ ಕಾಸಿನ ಕೊರತೆಯಿಂದ ಅದು ಸಾಧ್ಯವಾಗಿಲ್ಲ. ಹೀಗಿರುವಾಗ ಅವರೇ ಒಂದೂವರೆ ಗುಂಟೆ ಜಾಗ ದಾನ ನೀಡಿದ್ದಾರೆ. ಸಮಾಜಕ್ಕೆ, ಮಕ್ಕಳಿಗೆ ಒಳ್ಳೇಯದಾಗಲಿ ಅಂತ ನಾವು ಎಲ್ಲ ಒಪ್ಪಿಕೊಂಡು ಜಮೀನು ದಾನ ಮಾಡಿದ್ದೇವೆ. ನಮಗೆ ಯಾವುದೇ ಫಲಾಪೇಕ್ಷೆ ಇಲ್ಲ ಎಲ್ಲರಿಗೂ ಒಳ್ಳೇಯದಾಗಲಿ ಅಂತ ದಾನ‌ ನೀಡಿದ್ದೇವೆ ಎಂದು ಆನಂದಬಾಸ್ಪ ಸುರಿಸಿ ತಿಳಿಸಿದ್ರು. ಇನ್ನೂ ಇವರ ಹೃದಯ ವೈಶಾಲ್ಯತೆ ಕಂಡು ಗ್ರಾಮಸ್ಥರು ಹಾಡಿ ಹೊಗಳುತ್ತಿದ್ದಾರೆ. ಇವರ ಕೆಲಸ ಎಲ್ಲರಿಗೂ ಮಾದರಿ. ಜನರಿಗೆ ಒಳ್ಳೇಯದು ಬಯಸುವ ಕುಟುಂಬಕ್ಕೆ ಸರ್ಕಾರ ಒಂದು ಸೂರು ಮಾಡಿಕೊಡಲಿ ಅಂತ ಗ್ರಾಮಸ್ಥರು ಸರ್ಕಾರಕ್ಕೆ, ಶಾಸಕ ಶಿವಗಂಗಾ ಅವರಿಗೆ ಒತ್ತಾಯಿಸಿದ್ದಾರೆ‌.

ಇದನ್ನೂ ಓದಿ: ಅಂದು ಕಿಚ್ಚ ಯಾಕೆ ಬಿಗ್​​ಬಾಸ್​ನಿಂದ ಹೊರ ಬರಲು ನಿರ್ಧರಿಸಿದ್ದರು..? ಸುದೀಪ್ ಖಡಕ್ ರಿಯಾಕ್ಷನ್..!

publive-image

ಜನ ಒಂದಿಂಚು ಜಾಗ ಬಿಟ್ಟು ಕೊಡೋದಕ್ಕೆ ಹಿಂದೆ ಮುಂದೆ ನೋಡ್ತಾರೆ. ಅಂತದ್ರಲ್ಲಿ ಬಡವಾರಾಗಿದ್ರೂ ಅವರಿಗೆ ಇರಲು ಸೂರು ಇಲ್ಲದಿದ್ದರೂ ಕೂಡ ಒಂದುವರೆ ಗುಂಟೆ ಜಮೀನು ದಾನವಾಗಿ ನೀಡಿದ್ದು ಎಲ್ಲರಿಗೂ ಮಾದರಿ. ಬಡ ಸುಶೀಲಮ್ಮ ಹೃದಯ ವೈಶಾಲ್ಯತೆಯನ್ನ ಕಡು ಜನ ಹ್ಯಾಟ್ಸ್​ಆಫ್ ಹೇಳ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment