newsfirstkannada.com

ಲೋಕಸಭೆ ಚುನಾವಣೆ ಟೈಂನಲ್ಲಿ ಟೆಂಪಲ್​ ರನ್; ಶಕ್ತಿ ದೇವತೆಗಳ ಆರಾಧನೆಯಲ್ಲಿ ನಿರತರಾದ ಡಿ.ಕೆ.ಶಿವಕುಮಾರ್​

Share :

Published March 27, 2024 at 7:01am

  ರಾಜಕಾರಣಿಗಳಿಗೆ ಸಂಕಟ ಬಂದಾಗ ಮಾತ್ರ ವೆಂಕಟರಮಣನಾ?

  ಲಕ್ಷ ಹಣ ಮತ್ತು ಬಿ.ಫಾರಂ ಇಟ್ಟು ಪೂಜೆ ಸಲ್ಲಿಸಿದ HD ರೇವಣ್ಣ

  ಅನ್ನಪೂರ್ಣೇಶ್ವರಿಗೆ ಬಿ.ಎಸ್.ಯಡಿಯೂರಪ್ಪ ಕುಟುಂಬದ ಮೊರೆ

ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿ ಆಗಿದೆ. ಈ ಮತಯುದ್ಧ ಗೆಲ್ಲಲು ನಾಯಕರು ಪಣ ತೊಡುತ್ತಿದ್ದಾರೆ. ಪ್ರಜಾಪ್ರಭುತ್ವ ಯುದ್ಧದಲ್ಲಿ ಎದುರಾಳಿಗಳ ಕಟ್ಟಿಹಾಕಿ ಕದನ ಗೆದ್ದು ಬೀಗಲು ಎಲ್ಲರೂ ದೇವರ ಮೊರೆ ಹೋಗುತ್ತಿದ್ದಾರೆ. 2 ದಿನದಿಂದ ಡಿಕೆ ಶಿವಕುಮಾರ್​, ಮಲೆನಾಡು-ಕರಾವಳಿಯಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದರೆ, ಇತ್ತ, ಹೆಚ್​.ಡಿ. ರೇವಣ್ಣ, ಸಹ ಆದಿಶಕ್ತಿಯ ಮೊರೆ ಹೋಗಿದ್ದಾರೆ.

ಶೃಂಗೇರಿ ಶಾರದಾಂಬೆಯ ಮೊರೆಹೋದ ದಳಪತಿ!

ಹೌದು, ಮಾಜಿ ಸಚಿವ ಹೆಚ್​.ಡಿ.ರೇವಣ್ಣ ನಿನ್ನೆ ಶೃಂಗೇರಿಗೆ ಭೇಟಿ ನೀಡಿದ್ದರು. ಶಾರದಾಂಬೆ ದರ್ಶನ ಪಡೆದ್ರು. ಆ ಬಳಿಕ ತೋರಣ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದಾಖಲೆ, ಒಂದು ಲಕ್ಷ ಹಣ ಮತ್ತು ಬಿ.ಫಾರಂ ಇಟ್ಟು ಪೂಜೆ ಸಲ್ಲಿಸಲಾಗಿದೆ ಅಂತ ಹೇಳಲಾಗಿದೆ. ದೇವಾಲಯದ ಬಾಗಿಲ ಮುಂದೆ ದಾಖಲೆ ಹಣ ಇಟ್ಟು ಅರ್ಚಕರು ಪೂಜೆ ಸಲ್ಲಿಸಿದ್ದಾರೆ. ಈವರೆಗೆ ಕುಟುಂಬ ಸಮೇತ ಆಗಮಿಸ್ತಿದ್ದ ರೇವಣ್ಣ, ಈ ಬಾರಿ ಏಕಾಂಗಿಯಾಗಿ ಶೃಂಗೇರಿಗೆ ಆಗಮಿಸಿದ್ದು ಅಚ್ಚರಿ.

ಇದನ್ನೂ ಓದಿ: ಅಮೃತಧಾರೆ ಸೀರಿಯಲ್​ನ ಮಲ್ಲಿಗೆಗೆ ಭಾರೀ ಮೆಚ್ಚುಗೆ; ರಾಧಾ ಇನ್​ಸ್ಟಾದಲ್ಲಿ ಅಂಥದ್ದೇನಿದೆ?

ಎರಡು ದಿನಗಳಿಂದ ಕರಾವಳಿ ಮತ್ತು ಮಲೆನಾಡಲ್ಲಿ ಅಲೆದಾಟ!

ಡಿಸಿಎಂ ಡಿಕೆಶಿ ಸಹ ಟೆಂಪಲ್​​​ ರನ್​​ ಆರಂಭಿಸಿದ್ದಾರೆ. ಧರ್ಮಸ್ಥಳ ಮಂಜುನಾಥ, ಶ್ರೀಕ್ಷೇತ್ರ ಸುಬ್ರಮಣ್ಯ, ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ನಂತರ ತೋರಣ ಗಣಪತಿಗೆ ಮುಂದೆ ಸಂಕಲ್ಪ ಮಾಡಿದ್ರು. ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ್ರು.

ಇವತ್ತು ಗೋರ್ಕಣದ ಮಹಾಬಲೇಶ್ವರನ ಪೂಜೆಯಲ್ಲಿ ಭಾಗಿ ಆಗ್ತಾರೆ. ಲೋಕಕಲ್ಯಾಣ, ಇಷ್ಟಾರ್ಥ ಸಿದ್ಧಿ ಅನ್ನೋ ಹೆಸರಲ್ಲಿ ಪೂಜೆ-ಹೋಮ ಹವನಗಳು ನಡೀತಿವೆ. ಲೋಕಸಭಾ ಚುನಾವಣಾ ಹೊಸ್ತಿಲ್ಲಲ್ಲಿನ ಈ ಪೂಜಾ ಕೈಂಕರ್ಯಗಳು ಮತಯುದ್ಧದಲ್ಲಿ ಮೇಲುಗೈ ಸಾಧಿಸಲು ನಡೆಯುತ್ತಿರೋದು ಗುಟ್ಟಾಗೇನು ಉಳಿದಿಲ್ಲ. ಒಟ್ಟಾರೆ, ದೇವರ ಆಶೀರ್ವಾದ, ಮತ ಪ್ರಭುವಿನ ಮುದ್ರೆ ಯಾರಿಗೆ ಬಲ ನೀಡಲಿದೆ ಅನ್ನೋದು ಜೂನ್ 4ರಂದು ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭೆ ಚುನಾವಣೆ ಟೈಂನಲ್ಲಿ ಟೆಂಪಲ್​ ರನ್; ಶಕ್ತಿ ದೇವತೆಗಳ ಆರಾಧನೆಯಲ್ಲಿ ನಿರತರಾದ ಡಿ.ಕೆ.ಶಿವಕುಮಾರ್​

https://newsfirstlive.com/wp-content/uploads/2024/03/hd-revanna-4.jpg

Load More