/newsfirstlive-kannada/media/post_attachments/wp-content/uploads/2025/07/VOTER_ID_1.jpg)
ಬಿಹಾರದಲ್ಲಿ ಕೇಂದ್ರ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣಾ ಅಭಿಯಾನ ನಡೆಸುತ್ತಿದೆ. ಇದನ್ನು ಆಗಸ್ಟ ತಿಂಗಳಿನಿಂದ ದೇಶಾದ್ಯಂತ ನಡೆಸಲಿದೆ. ಹೀಗಾಗಿ ದೇಶಾದ್ಯಂತ ಮತದಾರರು ಮತ್ತೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರಬೇಕಾದರೇ, ಬರ್ತ್ ಸರ್ಟಿಫಿಕೇಟ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಸಲ್ಲಿಸಬೇಕು.
ಈಗಾಗಲೇ ಬಹಳಷ್ಟು ರಾಜ್ಯಗಳಲ್ಲಿ ರಾಜ್ಯಗಳ ಚುನಾವಣಾಧಿಕಾರಿಗಳ ಆಯಾ ವರ್ಷದ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗದ ವೆಬ್​ಸೈಟ್​ನಲ್ಲಿ ಪ್ರಕಟಿಸುತ್ತಿದ್ದಾರೆ. ಉದಾಹರಣೆಗೆ ದೆಹಲಿಯಲ್ಲಿ 2008 ರಲ್ಲಿ ಕೊನೆಯ ಭಾರಿಗೆ ಮತದಾರರ ಪಟ್ಟಿಯ ಪರಿಷ್ಕರಣೆ ನಡೆದಿತ್ತು. 2008ರ ಮತದಾರರ ಪಟ್ಟಿಯನ್ನು ದೆಹಲಿ ಸಿಇಓ ವೆಬ್​ಸೈಟ್​​ನಲ್ಲಿ ಪ್ರಕಟಿಸಿದ್ದಾರೆ.
ಇನ್ನೂ ಉತ್ತರಾಖಂಡ್ ರಾಜ್ಯದಲ್ಲಿ 2006 ರಲ್ಲಿ ಕೊನೆಯ ಭಾರಿಗೆ ಮತದಾರರ ಪಟ್ಟಿ ಪರಿಷ್ಕರಣೆ ನಡೆದಿತ್ತು. ಹೀಗಾಗಿ 2006 ರ ನಂತರ ಮತದಾರರ ಪಟ್ಟಿಗೆ ಸೇರ್ಪಡೆಯಾದವರ ವಿವರ ಕಲೆ ಹಾಕಲಾಗುತ್ತಿದೆ. ಈಗಾಗಲೇ ಅನೇಕ ರಾಜ್ಯಗಳ ಸಿಇಒಗಳು ಅನೌಪಚಾರಿಕವಾಗಿ ಮತದಾರರ ಪಟ್ಟಿ ಪರಿಷ್ಕರಣೆಗೆ ಬೂತ್ ಮಟ್ಟದ ಅಧಿಕಾರಿಗಳ ನೇಮಕ, ಟ್ರೇನಿಂಗ್ ನಡೆಸುತ್ತಿದ್ದಾರೆ.
ಇದನ್ನೂ ಓದಿ: KTM ADVENTURE 390X ಅತ್ಯಂತ ಕಡಿಮೆ ಬೆಲೆಗೆ ಲಭ್ಯ.. ಹಳೆ ಮಾಡೆಲ್​ಗಿಂತ 70 ಸಾವಿರ ರೂಪಾಯಿ ಕಡಿಮೆ!
ಮತದಾರರ ಪಟ್ಟಿಯ ಪಾವಿತ್ರ್ಯತೆಯನ್ನು ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆಯ ಸಂವಿಧಾನಿಕ ಅಧಿಕಾರವನ್ನು ಚಲಾಯಿಸಲು ಕೇಂದ್ರ ಚುನಾವಣಾ ಆಯೋಗ ತೀರ್ಮಾನಿಸಿದೆ. ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆಯ ಬಗ್ಗೆ ಪ್ರತೇಕವಾಗಿ ಆದೇಶ ಹೊರಡಿಸಲಾಗುತ್ತೆ. ಬಿಹಾರದ ಅನುಭವವನ್ನು ಉಳಿದ ರಾಜ್ಯಗಳಲ್ಲಿ ಕೇಂದ್ರ ಚುನಾವಣಾ ಆಯೋಗ ಬಳಸಿಕೊಳ್ಳಲಿದೆ.
ಈಗಾಗಲೇ ದೇಶಾದ್ಯಂತ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಗೆ ಪ್ರಾಥಮಿಕ ಸಿದ್ಧತೆಯನ್ನು ಕೇಂದ್ರ ಚುನಾವಣಾ ಆಯೋಗ ಆರಂಭಿಸಿದೆ. ಈ ಪರಿಷ್ಕರಣೆಯ ಮೂಲಕ ಭಾರತದ ನಾಗರಿಕರಲ್ಲದವರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದರೇ, ಅಂಥವರ ಹೆಸರನ್ನು ತೆಗೆದು ಹಾಕಿ, ಅಂಥವರನ್ನು ದೇಶದಿಂದ ಗಡಿಪಾರು ಮಾಡಲು ಸಂಬಂಧಪಟ್ಟ ಇಲಾಖೆಗೆ ಶಿಫಾರಸ್ಸು ಕೂಡ ಮಾಡಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ