newsfirstkannada.com

ಲೋಕಸಭೆ ಚುನಾವಣೆ; ಬಾಕ್ಸ್​ ಮೇಲೆ ಸಿದ್ದರಾಮಯ್ಯ, ಶಿವಕುಮಾರ್ ಭಾವಚಿತ್ರ ಇರುವ ಕುಕ್ಕರ್​​ಗಳು ಸೀಜ್..!

Share :

Published March 21, 2024 at 1:41pm

    ತುಮಕೂರು ಜಿಲ್ಲೆಯ ಕುಣಿಗಲ್​​ನ ಮಲ್ಲಿಪಾಳ್ಯದಲ್ಲಿ ಕುಕ್ಕರ್​ಗಳು ಪತ್ತೆ

    ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಸೇರಿರುವ ಕುಣಿಗಲ್

    ಸಂಸದ ಡಿ.ಕೆ.ಸುರೇಶ್ ವಿರುದ್ಧ ಜೆಡಿಎಸ್​ ಗಂಭೀರ ಆರೋಪ

ತುಮಕೂರು: ಮತದಾರರಿಗೆ ಹಂಚಲು ಕುಕ್ಕರ್​​ಗಳನ್ನ ಸಂಗ್ರಹಿಸಿ ಇಡಲಾಗಿದೆ ಎಂಬ ಆರೋಪದ ಮೇಲೆ ಗೋಡೌನ್ ಮೇಲೆ ಜಿಲ್ಲೆಯ ಕುಣಿಗಲ್ ಚುನಾವಣಾ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಕುಣಿಗಲ್ ಪಟ್ಟಣದ 22ನೇ ವಾರ್ಡ್​ನ ಮಲ್ಲಿಪಾಳ್ಯದಲ್ಲಿ ಬೆಟ್ಟಸ್ವಾಮಿ ಎಂಬಾತನಿಗೆ ಸೇರಿದ ಗೋದಾಮಿನ ಮೇಲೆ ದಾಳಿ ಮಾಡಲಾಗಿದೆ. ಜೆಡಿಎಸ್ ಕಾರ್ಯಕರ್ತರ ಮಾಹಿತಿ ಮೇರೆಗೆ ಅಧಿಕಾರಿಗಳ ದಾಳಿ ಮಾಡಿದ್ದಾರೆ. 80ಕ್ಕೂ ಹೆಚ್ಚು ಕುಕ್ಕರ್​ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಕುಕ್ಕರ್ ಬಾಕ್ಸ್​ ಮೇಲೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ ಸುರೇಶ್ ಹಾಗೂ ಶಾಸಕ ಡಾ.ರಂಗನಾಥ್ ಭಾವಚಿತ್ರ ಇದೆ. ಟಿಸಿ ರಿಪೇರಿ ಮಾಡುವ ಗೋದಾಮು ಇದಾಗಿದೆ. ನಿನ್ನೆ ಮಧ್ಯಾಹ್ನ ಕುಕ್ಕರ್ ಕೇಳಿದ್ದ ಮಹಿಳೆ ಮೇಲೆ‌ ಹಲ್ಲೆ ನಡೆಸಿದ್ದ ಕಾಂಗ್ರೆಸ್ ಮುಖಂಡರೊಬ್ಬರು ಹಲ್ಲೆ ನಡೆಸಿದ ಆರೋಪ ಕೇಳಿಬಂದಿತ್ತು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಕುಣಿಗಲ್ ಬರುತ್ತದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಅವರ ವಿರುದ್ಧ ಮತದಾರರಿಗೆ ಕುಕ್ಕರ್ ಹಂಚುತ್ತಿರುವ ಆರೋಪ ಕೇಳಿಬಂದಿದೆ. ಸದ್ಯ ಕುಕ್ಕರ್​ಗಳನ್ನು ವಶಕ್ಕೆ ಪಡೆದು ಚುನಾವಣಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭೆ ಚುನಾವಣೆ; ಬಾಕ್ಸ್​ ಮೇಲೆ ಸಿದ್ದರಾಮಯ್ಯ, ಶಿವಕುಮಾರ್ ಭಾವಚಿತ್ರ ಇರುವ ಕುಕ್ಕರ್​​ಗಳು ಸೀಜ್..!

https://newsfirstlive.com/wp-content/uploads/2024/03/TMK-COCKER.jpg

Load More