Advertisment

ಚಾಮರಾಜನಗರದಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ; ಯಾವಾಗ? ಯಾಕೆ?

author-image
admin
Updated On
ಚಾಮರಾಜನಗರದಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ; ಯಾವಾಗ? ಯಾಕೆ?
Advertisment
  • ಚಾಮರಾಜನಗರ ಜಿಲ್ಲೆಯ ಇಂಡಿಗನತ್ತ ಗ್ರಾಮದಲ್ಲಿ ಮರು ಮತದಾನ
  • ಹನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ಇಂಡಿಗನತ್ತ ಗ್ರಾಮ
  • ಸೂಕ್ತ ಭದ್ರತೆಯೊಂದಿಗೆ ಮರು ಮತದಾನಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಆದೇಶ

ಚಾಮರಾಜನಗರ: ನಿನ್ನೆಯಷ್ಟೇ ರಾಜ್ಯದ 14 ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ ಮುಗಿದಿದೆ. ಚುನಾವಣೆ ಮುಗಿಸಿರೋ ಅಭ್ಯರ್ಥಿಗಳು ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಆದರೆ ಚಾಮರಾಜನಗರ ಜಿಲ್ಲೆಯ ಇಂಡಿಗನತ್ತ ಗ್ರಾಮದಲ್ಲಿ ಮರು ಮತದಾನಕ್ಕೆ ದಿನಾಂಕ ಹಾಗೂ ಸಮಯ ನಿಗದಿಯಾಗಿದೆ.

Advertisment

ಚಾಮರಾಜನಗರ ಲೋಕಸಭಾ ಕ್ಷೇತ್ರದ ಇಂಡಿಗನತ್ತ ಗ್ರಾಮದಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಏಪ್ರಿಲ್ 29 ಅಂದ್ರೆ ಮುಂದಿನ ಸೋಮವಾರ ಬೆಳಿಗ್ಗೆ 7ರಿಂದ ಸಂಜೆ 6ವರೆಗೆ ಮತದಾನಕ್ಕೆ ಅವಕಾಶ ನೀಡಲಾಗುತ್ತಿದೆ.

ಇದನ್ನೂ ಓದಿ:JDS​​ಗೆ ವೋಟ್ ಮಾಡಿದ್ದಕ್ಕೆ ಬೆರಳು ಕಟ್.. ಕಾಂಗ್ರೆಸ್​ ವಿರುದ್ಧ ಗಂಭೀರ ಆರೋಪ 

ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಇಂಡಿಗನತ್ತ ಗ್ರಾಮ ಬರುತ್ತೆ. ನಿನ್ನೆ ಇಲ್ಲಿನ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಮತಯಂತ್ರವನ್ನೆಲ್ಲ ಧ್ವಂಸ ಮಾಡಿದ್ದರು. ಇಂಡಿಗನತ್ತ ಮತಗಟ್ಟೆಯಲ್ಲಿ ಇವಿಎಂ ಧ್ವಂಸವಾದ ಹಿನ್ನೆಲೆಯಲ್ಲಿ ಮರು ಮತದಾನ ನಡೆಯಲು ಆದೇಶ ಹೊರಡಿಸಲಾಗಿದೆ.

Advertisment

ಇಂಡಿಗನತ್ತ ಗ್ರಾಮದಲ್ಲಿ ಇವಿಎಂ ಮತಯಂತ್ರ ಧ್ವಂಸ ಮಾಡಿದ್ದರ ಬಗ್ಗೆ ಚಾಮರಾಜನಗರ ಕ್ಷೇತ್ರ ಚುನಾವಣಾಧಿಕಾರಿಗಳ ಬಳಿ ವರದಿ ಪಡೆಯಲಾಗಿದೆ. ಈ ವರದಿ ಆಧಾರದ ಮೇಲೆ ಚುನಾವಣಾ ಆಯೋಗ ಮರು ಚುನಾವಣೆ ನಡೆಸಲು ನಿರ್ಧಾರ ಮಾಡಲಾಗಿದೆ. ಏಪ್ರಿಲ್ 29ರಂದು ಸೂಕ್ತ ಭದ್ರತೆಯೊಂದಿಗೆ ಮರು ಮತದಾನಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment