/newsfirstlive-kannada/media/post_attachments/wp-content/uploads/2024/10/pm-sinde-rahul.jpg)
ರೋಚಕ ಹರಿಯಾಣ, ಜಮ್ಮು-ಕಾಶ್ಮೀರ ಚುನಾವಣೆಯ ಬಳಿಕ ದೇಶದಲ್ಲಿ ಮತ್ತೆ ಎಲೆಕ್ಷನ್ ಜ್ವರ ಆರಂಭವಾಗಿದೆ. ಕೇಂದ್ರ ಚುನಾವಣಾ ಆಯೋಗ ಇಂದು ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ್ದು ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿದೆ. ವಿಧಾನಸಭಾ ಚುನಾವಣೆಯ ಜೊತೆಗೆ ಉಪ ಚುನಾವಣೆಯ ಸೋಲು, ಗೆಲುವು ರಾಜಕೀಯ ಪಕ್ಷಗಳಿಗೆ ಬಹಳ ಪ್ರಮುಖವಾಗಿವೆ.
/newsfirstlive-kannada/media/post_attachments/wp-content/uploads/2024/10/Maharashtra-jarkhand-Election.jpg)
ದೆಹಲಿಯ ವಿಜ್ಞಾನ ಭವನದಲ್ಲಿ ಇಂದು ಕೇಂದ್ರ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್ ಅವರು ಸುದ್ದಿಗೋಷ್ಟಿ ನಡೆಸಿದರು. ಮೊದಲಿಗೆ ಜಮ್ಮು ಕಾಶ್ಮೀರ ಮತ್ತು ಹರಿಯಾಣದ ಜನರಿಗೆ ಅಭಿನಂದನೆ ಸಲ್ಲಿಸಿದರು. ಎರಡು ರಾಜ್ಯಗಳಲ್ಲಿನ ಚುನಾವಣೆ ಹೊಸ ದಾಖಲೆಗಳೊಂದಿಗೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ ಎಂದರು.
ಇದನ್ನೂ ಓದಿ: BREAKING: ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಉಪಚುನಾವಣೆಗೆ ಮುಹೂರ್ತ ಫಿಕ್ಸ್.. ಮೆಗಾ ರಿಸಲ್ಟ್ ಯಾವಾಗ?
ಮಹಾರಾಷ್ಟ್ರ ಚುನಾವಣೆ
ಮಹಾರಾಷ್ಟ್ರದ 288 ಕ್ಷೇತ್ರಗಳಿಗೂ ಈ ಬಾರಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
ಮತದಾನ - ನವೆಂಬರ್ 20
ಫಲಿತಾಂಶ - ನವೆಂಬರ್ 23
ನಾಮಪತ್ರ ಸಲ್ಲಿಕೆಗೆ ಕೊನೇ ದಿನ - ಅಕ್ಟೋಬರ್ 29
ಜಾರ್ಖಂಡ್ ಚುನಾವಣೆ
ಜಾರ್ಖಂಡ್‌ನ 81 ಕ್ಷೇತ್ರದಲ್ಲಿ 2 ಹಂತದ ಮತದಾನ ನಡೆಯುತ್ತಿದೆ. ಜನವರಿ 5ಕ್ಕೆ ಜಾರ್ಖಂಡ್ ವಿಧಾನಸಭಾ ಚುನಾವಣಾ ಅವಧಿ ಮುಕ್ತಾಯವಾಗಲಿದೆ.
1ನೇ ಹಂತದ ಮತದಾನ - ನವೆಂಬರ್ 13
2ನೇ ಹಂತದ ಮತದಾನ - ನವೆಂಬರ್ 20
ಫಲಿತಾಂಶ - ನವೆಂಬರ್ 23
ಉಪಚುನಾವಣೆಗೂ ದಿನಾಂಕ ಘೋಷಣೆ
ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾಗಿರೋ ಕ್ಷೇತ್ರಕ್ಕೆ ನವೆಂಬರ್ 13ಕ್ಕೆ ಮತದಾನ ನಡೆಯುತ್ತಿದ್ದ ನವೆಂಬರ್ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಇದೇ ವೇಳೆ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಉಪಚುನಾವಣಾ ಕ್ಷೇತ್ರಕ್ಕೂ ದಿನಾಂಕ ಘೋಷಣೆಯಾಗಿದೆ. ನವೆಂಬರ್ 13ಕ್ಕೆ ಕರ್ನಾಟದ 3 ವಿಧಾನಸಭೆ ಕ್ಷೇತ್ರಗಳಿಗೆ ಬೈ ಎಲೆಕ್ಷನ್ ನಡೆಯುತ್ತಿದೆ. ನವೆಂಬರ್ 23ರಂದು ಈ ಜಿದ್ದಾಜಿದ್ದಿನ ಚುನಾವಣೆಗಳ ಮೆಗಾ ರಿಸಲ್ಟ್ ಪ್ರಕಟವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us