ಮಹಾರಾಷ್ಟ್ರ, ಜಾರ್ಖಂಡ್​ ವಿಧಾನಸಭೆ ಫಲಿತಾಂಶ.. ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಆರಂಭ; ಸಮೀಕ್ಷೆ ನಿಜವಾಗುತ್ತಾ?

author-image
Bheemappa
Updated On
ಮಹಾರಾಷ್ಟ್ರ, ಜಾರ್ಖಂಡ್​ ವಿಧಾನಸಭೆ ಫಲಿತಾಂಶ.. ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಆರಂಭ; ಸಮೀಕ್ಷೆ ನಿಜವಾಗುತ್ತಾ?
Advertisment
  • ಅಭ್ಯರ್ಥಿಗಳ ಭವಿಷ್ಯ ಏನೆಂಬುದು ಇಂದು ತಿಳಿದು ಬರಲಿದೆ
  • ಎರಡು ರಾಜ್ಯಗಳಲ್ಲಿ ಗೆಲುವಿಗೆ ಎಷ್ಟು ಸ್ಥಾನಗಳು ಬೇಕು ಗೊತ್ತಾ?
  • ​ ಬೈ ಎಲೆಕ್ಷನ್ ಫಲಿತಾಂಶ ಕೂಡ ಇಂದೇ ಹೊರ ಬೀಳಲಿದೆ

ಮಹಾರಾಷ್ಟ್ರ ಹಾಗೂ ಜಾರ್ಖಂಡ್​ ವಿಧಾನಸಭಾ ಚುನಾವಣೆಗೆ ಮತದಾನ ನಡೆದಿದ್ದು ಇಂದು ಬೆಳಗ್ಗೆ 08 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಸದ್ಯ ಈ ಸಂಬಂಧ ಇಡೀ ದೇಶದ ಚಿತ್ತ ಈ 2 ರಾಜ್ಯಗಳ ವಿಧಾನಸಭಾ ಚುನಾವಣೆ ರಿಸಲ್ಟ್ ಮೇಲೆ ಇದೆ. ಅಲ್ಲದೇ ಬೈ ಎಲೆಕ್ಷನ್ ಫಲಿತಾಂಶ ಕೂಡ ಇಂದೇ ಹೊರ ಬೀಳಲಿದೆ.

ಮಹಾರಾಷ್ಟ್ರದಲ್ಲಿ ಒಂದು ಪಕ್ಷ ಸಂಪೂರ್ಣವಾಗಿ ಅಧಿಕಾರಕ್ಕೆ ಬರಬೇಕು ಎಂದರೆ 145 ಕ್ಷೇತ್ರಗಳಲ್ಲಿ ಅಭೂತಪೂರ್ವ ಗೆಲುವು ಪಡೆಯಬೇಕಿದೆ. ಅದರಂತೆ ಜಾರ್ಖಂಡ್​ನಲ್ಲಿ ಅಧಿಕಾರದ ಗದ್ದುಗೆ ಏರಬೇಕು ಎಂದರೆ 41 ಸ್ಥಾನಗಳಲ್ಲಿ ಜಯ ಸಾಧಿಸಬೇಕು. ಈ ಅದೃಷ್ಟ ಯಾರ ಪಾಲಾಗಲಿದೆ ಎಂಬುದು ಕುತೂಹಲ ಮೂಡಿದೆ.

publive-image

ಇದನ್ನೂ ಓದಿ:ಫಲಿತಾಂಶಕ್ಕೂ ಮೊದಲೇ CM ಕುರ್ಚಿ ಮೇಲೆ ಟವೆಲ್‌; ಮಹಾರಾಷ್ಟ್ರದಲ್ಲಿ ಕಿಂಗ್ ಮೇಕರ್‌ ಯಾರು?

ಇಂದು ಸಂಜೆ ವೇಳೆಗೆ ಮಹಾರಾಷ್ಟ್ರ ಹಾಗೂ ಜಾರ್ಖಂಡದ ಫಲಿತಾಂಶ ಏನೆಂಬುದು ಗೊತ್ತಾಗಲಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಒಟ್ಟು 288 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಸಲಾಗಿತ್ತು. ಅದರಂತೆ ಒಟ್ಟು 4,136 ಅಭ್ಯರ್ಥಿಗಳು ಸ್ಪರ್ರಧಿಸಿದ್ದು ಗೆಲುವಿಗಾಗಿ ಎದುರು ನೋಡುತ್ತಿದ್ದಾರೆ. ಇದರಲ್ಲಿ 2,086 ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿರುವುದು ವಿಶೇಷವಾಗಿದೆ.

ಈ ಎಲೆಕ್ಷನ್​​ನಲ್ಲಿ ಯಾರಿಗೆ ಮತದಾರರು ಒಲವು ತೋರಿದ್ದಾರೆ ಎಂದು ಸಂಜೆ ವೇಳೆಗೆ ಬಹುತೇಕವಾಗಿ ತಿಳಿದು ಬರಲಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ 149 ಸ್ಥಾನಗಳಲ್ಲಿ, ಶಿವಸೇನಾ 81, ಅಜಿತ್ ಪವರ್ ಅವರ ಎನ್​ಸಿಪಿ 59 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇನ್ನು ವಿರೋಧ ಪಕ್ಷಗಳಾದ ಕಾಂಗ್ರೆಸ್​ 101, ಶಿವಸೇನಾ (ಯುಬಿಟಿ) 95, ಎನ್​ಸಿಪಿ (ಎಸ್​ಪಿ) 86 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದವು.

ಜಾರ್ಖಂಡ್​​ನಲ್ಲಿ ಗೆಲುವು ಯಾರಿಗೆ?

ಉತ್ತರ ಭಾರತದ ರಾಜ್ಯವಾದ ಜಾರ್ಖಂಡ್​​ನಲ್ಲಿ ಒಟ್ಟು 81 ವಿಧಾನಸಭಾ ಕ್ಷೇತ್ರಗಳಿಗೆ 2 ಹಂತದಲ್ಲಿ ವೋಟಿಂಗ್ ನಡೆಸಲಾಗಿತ್ತು. ಮೊದಲ ಹಂತದಲ್ಲಿ 43 ಕ್ಷೇತ್ರಗಳಿಗೆ, ಎರಡನೇ ಹಂತದಲ್ಲಿ 38 ಕ್ಷೇತ್ರಗಳಿಗೆ ವೋಟಿಂಗ್ ನಡೆದಿತ್ತು. ಅಂತಿಮ ಫಲಿತಾಂಶ ಏನೆಂಬುದು ಇಂದು ಹೊರಬೀಳಲಿದೆ.

publive-image

ಎರಡು ರಾಜ್ಯಗಳಲ್ಲಿ ಹೊಸ ಮುಖ್ಯಮಂತ್ರಿಗಳು ಗದ್ದುಗೆ ಏರುತ್ತಾರಾ? ಇಲ್ವಾ ಆಡಳಿತ ಪಕ್ಷವನ್ನೇ ಜನರು ನೆಚ್ಚಿಕೊಂಡು ಗೆಲ್ಲಿಸುತ್ತಾರಾ ಎಂದು ಕಾದು ನೋಡಬೇಕಿದೆ. ಇನ್ನು ಚುನಾವಣೋತ್ತರ ಸಮೀಕ್ಷೆಗಳು ಎರಡು ರಾಜ್ಯದಲ್ಲೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ. ಆದರೆ ಅಂತಿಮವಾಗಿ ಮತದಾರರು ಯಾರಿಗೆ ಎಷ್ಟು ವೋಟ್ ನೀಡಿದ್ದಾರೆ ಇನ್ನೇನು ಕೆಲವೇ ಗಂಟೆಗಳಲ್ಲಿ ಎಲ್ಲವೂ ತಿಳಿದು ಬರಲಿದೆ.

ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಾದ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿಯಲ್ಲಿ ಉಪ ಚುನಾವಣೆ ನಡೆದಿತ್ತು. ಅಲ್ಲದೇ ದೇಶದ ಇತರೆ ಕಡೆ ನಡೆದ ಬೈ ಎಲೆಕ್ಷನ್ ಫಲಿತಾಂಶ ಕೂಡ ಇಂದು ಪ್ರಕಟವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment