newsfirstkannada.com

×

ಸುನೀಲ್ ಕನುಗೋಳು ಸಿಎಂ ಮುಖ್ಯ ಸಲಹೆಗಾರ; ಲೋಕಸಭಾ ಚುನಾವಣೆ ಗೆಲ್ಲಲು ‘ಕೈ’ ಮಾಸ್ಟರ್ ಪ್ಲಾನ್‌

Share :

Published June 1, 2023 at 2:44am

Update September 27, 2023 at 10:37pm

    ಲೋಕಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ಸಿದ್ಧತೆ

    ಸಿಎಂ ಮುಖ್ಯ ಸಲಹೆಗಾರನಾದ ಮೇಲೆ ಹೊಸ ತಂತ್ರ

    ಸುನೀಲ್ ಟೀಂ ನಡೆಸಿದ್ದ ಸಮೀಕ್ಷೆಯೇ ನಿಜವಾಯ್ತು

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಕೈ ಹಿಡಿದಿದೆ. ಇದೀಗ ಸಿಎಂ ಸಿದ್ದರಾಮಯ್ಯ ಆ ಗ್ಯಾರಂಟಿ ಯೋಜನೆಗಳ ರೂವಾರಿ, ಚುನಾವಣಾ ತಂತ್ರಗಾರ ಸುನೀಲ್ ಕನುಗೋಳು ಅವರ ಕೈ ಹಿಡಿದಿದ್ದಾರೆ. ಸುನೀಲ್ ಕನುಗೋಳು ಅವರನ್ನೇ ಸಿಎಂ ಮುಖ್ಯ ಸಲಹೆಗಾರರಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.

ಕಾಂಗ್ರೆಸ್ ಪರ ಅಬ್ಬರದ ಚುನಾವಣಾ ಪ್ರಚಾರ, 5 ಗ್ಯಾರಂಟಿ ಸ್ಕೀಮ್‌ಗಳನ್ನು ಮತದಾರರಿಗೆ ತಲುಪಿಸುವಲ್ಲಿ ಸುನೀಲ್ ಕನುಗೋಳು ಬಹುಮುಖ್ಯ ಪಾತ್ರವಹಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿನ ಚುಕ್ಕಾಣಿ ಹಿಡಿಯಲು ಸುನೀಲ್ ಸಾಕಷ್ಟು ಶ್ರಮವಹಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಈ ಚುನಾವಣಾ ನಿಪುಣನಿಗೆ ಸಿಎಂ ಸಿದ್ದರಾಮಯ್ಯ ಮಣೆ ಹಾಕಿದ್ದು, ಸಿಎಂ ಮುಖ್ಯ ಸಲಹೆಗಾರನಾಗಿ ನೇಮಕ ಮಾಡಿದ್ದಾರೆ. ಅಷ್ಟೇ ಅಲ್ಲ ಸುನೀಲ್ ಕನುಗೋಳು ಅವರಿಗೆ ಕೂಡಲೇ ಕ್ಯಾಬಿನೆಟ್‌ನಲ್ಲಿ ಸಚಿವರಿಗೆ ಸಿಗುವ ಸಂಪುಟ ದರ್ಜೆಯ ಸ್ಥಾನಮಾನ ನೀಡುವಂತೆಯೂ ಆದೇಶಿಸಿದ್ದಾರೆ.

ಲೋಕಸಭಾ ಚುನಾವಣೆ ಗೆಲ್ಲಲು ಪ್ಲಾನ್
ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಸಿಗುವಂತೆ ಮಾಡಿದೆ. ಇದೀಗ ಕೈ ನಾಯಕರ ಕಣ್ಣು ಲೋಕಸಭಾ ಚುನಾವಣೆ ಮೇಲೆ ಬಿದ್ದಿದೆ. ಸುನೀಲ್ ಕನುಗೋಳು ಮಾಡಿದ ತಂತ್ರಗಾರಿಕೆಯೇ ಕಾಂಗ್ರೆಸ್ ಗೆಲುವಿನಲ್ಲಿ ಬಹುಮುಖ್ಯಪಾತ್ರ ವಹಿಸಿತ್ತು. ಇದೀಗ ಇದೇ ಪ್ಲಾನ್ ಅನ್ನು ಲೋಕಸಭಾ ಚುನಾವಣೆಗೂ ಮುಂದುವರಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ ಎಂದು ಕಾಂಗ್ರೆಸ್ ಮೂಲಗಳು ಮಾಹಿತಿ ನೀಡಿವೆ.

ಸುನೀಲ್ ಟೀಂ ಪಕ್ಕಾ​ ಸಮೀಕ್ಷೆ
ರಾಜ್ಯ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲೇ ಸುನೀಲ್ ಕನುಗೋಳು ಟೀಮ್ ಸಾಲು, ಸಾಲು ಸಮೀಕ್ಷೆಗಳನ್ನ ನಡೆಸಿತ್ತು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಸಮೀಕ್ಷೆ ನಡೆಸಿ ವರದಿ ಸಿದ್ದಪಡಿಸಲಾಗಿತ್ತು. ಆ ಸಮೀಕ್ಷಾ ವರದಿಯನ್ನ ಸುನೀಲ್ ಟೀಂ​ ಕೆಪಿಸಿಸಿ, ಎಐಸಿಸಿ ನಾಯಕರಿಗೆ ಹಸ್ತಾಂತರ ಮಾಡಲಾಗಿತ್ತು. ಸುನೀಲ್ ಟೀಂ ಸಮೀಕ್ಷೆಯ ದತ್ತಾಂಶ ಆಧರಿಸಿಯೇ ಕಾಂಗ್ರೆಸ್ ಪಕ್ಷ ಸಂಘಟನೆ ಚುರುಕಾಗಿತ್ತು. ಸುನೀಲ್ ಕನುಗೋಳು ಟೀಮ್ ಸಮೀಕ್ಷಾ ವರದಿಯಿಂದ ಕಾಂಗ್ರೆಸ್ ಪ್ರಚಾರ ತಂತ್ರ ಬದಲಾಗಿತ್ತು. ಇದೀಗ ಮುಂದಿನ ಲೋಕಸಭೆ ಚುನಾವಣೆಗೂ ಗೆಲ್ಲಲು ಕಾಂಗ್ರೆಸ್ ಪ್ಲಾನ್​ ಮಾಡಿದೆ. ಸಿಎಂ ಮುಖ್ಯ ಸಲಹೆಗಾರರಾಗಿ ಆಯ್ಕೆ ಮಾಡುವ ಮೂಲಕ ಲೋಕಸಭಾ ಚುನಾವಣೆಗೂ ಸುನೀಲ್‌ ಕನುಗೋಳು ಸಲಹೆ ಪಡೆಯಲು ತಂತ್ರ ಹೆಣೆಯಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುನೀಲ್ ಕನುಗೋಳು ಸಿಎಂ ಮುಖ್ಯ ಸಲಹೆಗಾರ; ಲೋಕಸಭಾ ಚುನಾವಣೆ ಗೆಲ್ಲಲು ‘ಕೈ’ ಮಾಸ್ಟರ್ ಪ್ಲಾನ್‌

https://newsfirstlive.com/wp-content/uploads/2023/06/Sunil-kannugolu.jpg

Load More