newsfirstkannada.com

ವೈರ್​​ಲೆಸ್​ ಚಾರ್ಜಿಂಗ್​ ರಸ್ತೆಯನ್ನೇ ನಿರ್ಮಿಸಿದ ಈ ದೇಶ.. ಇನ್ಮುಂದೆ ಚಾರ್ಜಿಂಗ್​ ಸ್ಟೇಷನ್​​ಗೆ ಹೋಗಬೇಕಾಗಿಲ್ಲ!

Share :

Published July 24, 2024 at 12:32pm

Update July 24, 2024 at 12:36pm

    ರಸ್ತೆಯಲ್ಲಿ ಚಲಿಸುವಾಗಲೇ ಎಲೆಕ್ಟ್ರಿಕ್​ ವಾಹನ ಚಾರ್ಜ್​ ಆಗುತ್ತದೆ

    ಚಾರ್ಜಿಂಗ್​ ಸ್ಟೇಷನ್​ ಬಳಿ ಗಂಟೆಗಟ್ಟಲೇ ಕಾಯೋ ಕಾಟ ತಪ್ಪಿತು ಗುರೂ

    ವೈರ್​​ಲೆಸ್​ ಚಾರ್ಜಿಂಗ್​ ರಸ್ತೆಯ ಅನ್ವೇಷಣೆ.. ಭಾರತದಲ್ಲೂ ಬರಲಿದೆಯಾ ಈ ಪರಿಕಲ್ಪನೆ

ವಿಶ್ವ ಎಲೆಕ್ಟ್ರಿಕ್​ ವಾಹನಗಳತ್ತ ಮೊರೆ ಹೋಗುತ್ತಿವೆ. ಬಹುತೇಕ ರಾಷ್ಟ್ರಗಳು ಎಲೆಕ್ಟ್ರಿಕ್​ ವಾಹನಗಳನ್ನು ಈಗಾಗಲೇ ಮಾರುಕಟ್ಟೆಗೆ ಪರಿಚಯಿಸಿ ಬಳಕೆ ಮಾಡುತ್ತಿವೆ. ಜೊತೆಗೆ ಎಲೆಕ್ಟ್ರಿಕ್​ ವಾಹನಗಳಿಗಾಗಿ ಚಾರ್ಜಿಂಗ್​ ಸ್ಟೇಷನ್​ ಕೂಡ ತೆರೆದಿವೆ. ಭಾರತದಲ್ಲೂ ಹಲವು ಕಂಪನಿಗಳು ಎಲೆಕ್ಟ್ರಿಕ್​ ವಾಹನಗಳನ್ನು ಪರಿಚಯಿಸಿದ್ದು, ಅವುಗಳ ಬಳಕೆಗೆ ಉತ್ತೇಜನ ನೀಡುತ್ತಿವೆ.

ಆದರೀಗ ಎಲೆಕ್ಟ್ರಿಕ್​ ವಾಹನಗಳ ಜಾರ್ಜಿಂಗ್​ ಸ್ಟೇಷನ್​ಗಳ ಮುಂದುವರೆದ ಭಾಗವಾಗಿ ವೈರ್​​ಲೆಸ್​ ಜಾರ್ಜಿಂಗ್​ ಮಾಡುವತ್ತ ಅನ್ವೇಷಣೆ ನಡೆಯುತ್ತಾ ಬಂದಿದೆ. ಅಚ್ಚರಿಯೆಂದರೆ ನಾರ್ವೆಯಲ್ಲಿ ಎಲೆಕ್ಟ್ರಿಕ್​ ವಾಹನಗಳ ಚಾರ್ಜಿಂಗ್​​​ಗಾಗಿ ವೈರ್​ಲೆಸ್​​ ಚಾರ್ಜಿಂಗ್​ ರಸ್ತೆಯನ್ನೇ ನಿರ್ಮಿಸಲಾಗಿದೆ.

ಚಾರ್ಜ್​ ಮಾಡುವ ರಸ್ತೆ

ಇಸ್ರೇಲಿ ಹೈಟೆಕ್​ ಕಂಪನಿಯಾದ ಎಲೆಕ್ಟ್ರಿಯಾನ್​​ ವೈರ್​ಲೆಸ್ ಇಂತಹದೊಂದು ಅನ್ವೇಷನೆ ನಡೆಸಿ ಚಾಲನೆಗೆ ತಂದಿದೆ. ಎಲೆಕ್ಟ್ರಿಕ್​ ವಾಹನ ಚಾಲಕರು​​ ಚಾಲನೆಯಲ್ಲಿಯೇ ವಾಹನಗಳನ್ನು ಚಾರ್ಜ್​ ಮಾಡಬಹುದಾದ ರಸ್ತೆಯನ್ನು ಈ ಕಂಪನಿ ನಿರ್ಮಿಸಿದೆ.

ರಸ್ತೆಯ ಮೇಲ್ಭಾಗದಲ್ಲಿ ವಿಶೇಷ ತಾಮ್ರದ ಪಟ್ಟಿಗಳನ್ನು ಬಳಸಿಕೊಂಡು ಅದರ ಮೂಲಕ ವಾಹನಗಳು ಚಲಿಸುವಾಗ ಚಾರ್ಜ್ ಆಗುತ್ತದೆ. 100 ಮೀಟರ್​ ಉದ್ದದ ಹೊಸ ತಂತ್ರಜ್ಞಾನವನ್ನು ಎಲೆಕ್ಟ್ರಿಯಾನ್​ ಕಂಪನಿ ಟ್ರೋಂಡ್​ಹೈಮ್​ನಲ್ಲಿ ನಿರ್ಮಿಸಿದೆ. ಮಾಹಿತಿ ಪ್ರಕಾರ ಒಂದು ವರ್ಷದವರೆಗೆ ಹೊಸ ತಂತ್ರಜ್ಞಾನದ ಬಗ್ಗೆ ನಿಗಾವಹಿಸಲಿದೆ.

ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಶಾಲಾ ವಾಹನ.. ನಾಲ್ವರು ವಿದ್ಯಾರ್ಥಿಗಳು ಗಂಭೀರ

ಚೀನಾದ ಯುಟಾಂಗ್​​ ಕಂಪನಿ ತಯಾರಿಸಿದ ಮೂರು ಎಲೆಕ್ಟ್ರಿಕ್​ ಬಸ್​​ ಮತ್ತು ಮತ್ತೊಂದು ತಯಾರಿಕ ಕಂಪನಿಯಾದ ಹೈಗರ್​ನಿಂದ ತಯಾರಿದ ಬಸ್ಸನ್ನು ಬಳಸಿಕೊಂಡು ಪ್ರಯೋಗ ನಡೆಸಲಾಗುತ್ತಿದೆ. ಒಂದು ವೇಳೆ ಈ ಪ್ರಯೋಗ ಸಕ್ಸಸ್​​ ಆದರೆ ವೈರ್​ಲೆಸ್​ ರಸ್ತೆ ಅಭಿವೃದ್ಧಿ ಪಡಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಡಿಕೆಶಿ ಭೇಟಿ ಮಾಡಲು ದಿನಕರ್​ ಜೊತೆ ಬಂದ ದರ್ಶನ್​ ಪತ್ನಿ.. ಡಿಸಿಎಂ ಭೇಟಿಗೆ ಕಾದು ಕುಳಿತ ವಿಜಯಲಕ್ಷ್ಮೀ

ವಾಯುಮಾಲಿನ್ಯ ಸಮಸ್ಯೆ, ಕಚ್ಚಾ ತೈಲಗಳ ಅಭಾವ ಪ್ರಪಂಚದಾದ್ಯಂತ ಕಾಡುತ್ತಿದೆ. ಈ ಸಮಸ್ಯೆ ಹೋಗಲಾಡಿಸಲು ಅನೇಕ ದೇಶಗಳು ಎಲೆಕ್ಟ್ರಿಕ್​ ವಾಹನಗಳ ಬಳಕೆಯತ್ತ ಉತ್ತೇಜನ ನೀಡುತ್ತಿವೆ. ಅದರ ಜಾರ್ಜಿಂಗ್​ಗಾಗಿ ಸ್ಟೇಷನ್​ಗಳನ್ನು ನಿರ್ಮಿಸಿ ಜಾರ್ಜ್​ ಮಾಡಲು ಅವಕಾಶ ಮಾಡಿಕೊಟ್ಟಿದೆ. ಆದರೀಗ ಸಮಯದ ಉಳಿಕೆಗಾಗಿ ವಾಹನ ಚಾಲನೆಯ ವೇಳೆಯೇ ಚಾರ್ಜ್​ ಆಗುವಂತೆ ರಸ್ತೆ ನಿರ್ಮಾಣ ಮಾಡಿರುವುದು ಜಗತ್ತಿಗೆ ಅಚ್ಚರಿಯ ವಿಚಾರಗಳಲ್ಲಿ ಒಂದಾಗಿದೆ.

ಭಾರತದಲ್ಲಿ ಎಲೆಕ್ಟ್ರಿಕ್​ ವಾಹನಗಳ ಬಳಕೆ

ಭಾರತದಲ್ಲಿ ಎಲೆಕ್ಟ್ರಿಕ್​ ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ಸ್ಟ್ಯಾಟಿಸ್ಟಾ ಹೇಳುವಂತೆ ಮಾರ್ಚ್​ 2023ರ ವೇಳೆಯಲ್ಲಿ 2.3 ಮಿಲಿಯನ್​ ಎಲೆಕ್ಟ್ರಿಕ್​ ವಾಹನಗಳು ಚಾಲ್ತಿಯಲ್ಲಿವೆ ಎಂದಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಬಳಕೆ ಭಾರತದಲ್ಲಿ ಹೆಚ್ಚಾಗಿದೆ. ಭಾರತದ ಎಲೆಕ್ಟ್ರಿಕ್​ ವಾಹನ ಮಾರುಕಟ್ಟೆಗೆ ವೇಗವಾಗಿ ಬದಲಾಗುತ್ತಿದೆ. 2035ರ ವೇಳೆ ಆಟೋ ಮೊಬೈಲ್​​ ಮಾರುಕಟ್ಟೆ ಸಂಪೂರ್ಣವಾಗಿ ಎಲೆಕ್ಟ್ರಿಕ್​ ಆಗಲಿದೆ ಎಂದು ಅಂದಾಜಿಸಲಾಗಿದೆ ಎಂದಿದೆ.

ಇದನ್ನೂ ಓದಿ: ವರದಕ್ಷಿಣೆ ಕಿರುಕುಳ.. 4 ತಿಂಗಳ ಗರ್ಭಿಣಿ ಸೊಸೆಯನ್ನು ಕೊಂದು ಸುಟ್ಟು ಹಾಕಿದ ಅತ್ತೆ-ಮಾವ

ಸರ್ಕಾರದ ವಾಹನ್​​ ವೆಬ್​ಸೈಟ್​ನಲ್ಲಿ ​ಆಗಸ್ಟ್​ 8, 2023ರಲ್ಲಿ ಭಾರತದ ರಸ್ತೆಗಳಲ್ಲಿ 2.8 ಮಿಲಿಯನ್​ ನೋಂದಾಯಿತ ಎಲೆಕ್ಟ್ರಿಕ್​ ವಾಹನಗಳು ಚಲಿಸುತ್ತಿವೆ ಎಂದು ಹೇಳಿತ್ತು. ಪ್ರಸ್ತುತ 2024ರಲ್ಲಿ ಬಳಕೆದಾರರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ.

ವಿಶೇಷ ವರದಿ: ಹರ್ಷಿತ್​ ಅಚ್ರಪ್ಪಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೈರ್​​ಲೆಸ್​ ಚಾರ್ಜಿಂಗ್​ ರಸ್ತೆಯನ್ನೇ ನಿರ್ಮಿಸಿದ ಈ ದೇಶ.. ಇನ್ಮುಂದೆ ಚಾರ್ಜಿಂಗ್​ ಸ್ಟೇಷನ್​​ಗೆ ಹೋಗಬೇಕಾಗಿಲ್ಲ!

https://newsfirstlive.com/wp-content/uploads/2024/07/Road.jpg

Load More