ರೂಲ್ಸ್​​ ಬ್ರೇಕ್..​ ಬೇಕಾಬಿಟ್ಟಿ ಸಂಚಾರ.. ಆಟೋಗಳ ಕಳ್ಳಾಟ ಕಂಡು ಆರ್​ಟಿಓ ಅಧಿಕಾರಿಗಳೇ ಶಾಕ್..!

author-image
Veena Gangani
Updated On
ಬೆಂಗಳೂರು ನಗರ ಪ್ರಯಾಣಿಕರಿಗೆ ಬಿಗ್ ಶಾಕ್​.. ಆಟೋ ಮೀಟರ್ ದರ ಏರಿಕೆ, ಎಷ್ಟು ರೂಪಾಯಿ?
Advertisment
  • EV ಆಟೋ ಹಿಡಿದ ಆರ್​​​ಟಿಓ ಅಧಿಕಾರಿಗಳಿಗೆ ಬಿಗ್​ ಶಾಕ್
  • ಕಳೆದ 3 ದಿನದಲ್ಲಿ 250ಕ್ಕೂ ಹೆಚ್ಚು ಆಟೋಗಳ ವಿರುದ್ಧ ಕ್ರಮ
  • ಕಳ್ಳಾಟಕ್ಕೆ ಮುಂದಾಗಿದ್ದ ಕೆಲವು ಅಗ್ರಿಗೇಟರ್ ಕಂಪನಿಗಳು

ಬೆಂಗಳೂರು: ರೂಲ್ಸ್​​ ಬ್ರೇಕ್​ ಮಾಡಿ ಬೇಕಾ ಬಿಟ್ಟಿಯಾಗಿ ಓಡಾಡ್ತಿದ್ದ ಆಟೋಗಳ ವಿರುದ್ಧ ಸಾರಿಗೆ ಇಲಾಖೆ ಸಮರ ಸಾರಿದೆ. ಆಟಾಟೋಪ ಮಾಡ್ತಿದ್ದೋರ ಆಟಕ್ಕೆ ಬ್ರೇಕ್ ಹಾಕ್ತಿದೆ. ಈ ಮಧ್ಯೆ ಸಾರಿಗೆ ಇಲಾಖೆ ಚಾಪೆ ಕೆಳಗೆ ತೂರಿದ್ರೆ, ಕೆಲ ಅಗ್ರಿಗೇಟರ್ ಕಂಪನಿಯ ಇವಿ ಆಟೋಗಳು ರಂಗೋಲಿ ಕೆಳಗೆ ತೂರುವ ಪ್ರಯತ್ನ ಮಾಡಿ ತಗ್ಲಾಕೊಂಡಿದೆ.

ಇದನ್ನೂ ಓದಿ: ಡಾ.ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಯಶ್ ತಾಯಿ; ಅಣ್ಣಾವ್ರ ಆಶೀರ್ವಾದ ಪಡೆದು ಹೇಳಿದ್ದೇನು..?

publive-image

ಬೆಂಗಳೂರಿನಲ್ಲಿ ಕಳೆದ ಮೂರು ದಿನದಿಂದ ನಿಯಮ ಪಾಲನೆ ಮಾಡದೇ, ಬೇಕಾ ಬಿಟ್ಟಿಯಾಗಿ ವಸೂಲಿ ಮಾಡುವ ಆಟೋ ಚಾಲಕರ ವಿರುದ್ಧ ಆರ್​ಟಿಓ ಸಮರ ಮುಂದುವರಿಸಿದೆ. ಕಳೆದ ಮೂರು ದಿನದಲ್ಲಿ 250ಕ್ಕೂ ಹೆಚ್ಚು ಆಟೋಗಳ ವಿರುದ್ಧ ಕ್ರಮವೂ ಆಗಿದೆ. ಅತ್ತ ಆರ್​ಟಿಓ ಅಧಿಕಾರಿಗಳು ತಂಡ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿದ್ರೆ, ಇತ್ತ ಕೆಲ ಅಗ್ರಿಗೇಟರ್ ಕಂಪನಿಗಳು ಕಳ್ಳಾಟಕ್ಕೆ ಮುಂದಾಗಿದ್ದು, ಆರ್​ಟಿಓ ಅಧಿಕಾರಿಗಳ ಕೈಯಲ್ಲಿ ತಗ್ಲಾಕೊಂಡಿದ್ದಾರೆ. ಆದರೆ ಇವರ ಕಳ್ಳಾಟ ಕಂಡು ಆರ್​ಟಿಓ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ನಿನ್ನೆಯಷ್ಟೇ ಆಟೋಗಳನ್ನ ಸೀಜ್​ ಮಾಡಿದಾಗ ಕೆಲ ಆಟೋ ಡ್ರೈವರ್ಸ್​​​ ನಮ್ಮನ್ನ ಮಾತ್ರ ಯಾಕೆ ಟಾರ್ಗೆಟ್​ ಮಾಡ್ತೀರಾ? ಇವಿ ಅಂದ್ರೆ ಎಲೆಕ್ಟ್ರಿಕ್​ ಆಟೋ ರಿಕ್ಷಾಗಳನ್ನೂ ಸೀಜ್​ ಮಾಡಿ ಅನ್ನೋ ಕೂಗು ಕೇಳಿಬಂದಿತ್ತು. ಅದ್ರಂತೆ ಖುದ್ದು ಆಟೋ ಚಾಲಕರೇ RTO ಅಧಿಕಾರಿಗಳಿಗೆ ಹಿಡಿದು ಕೊಟ್ಟಾಗ ಕೆಲ ಅಗ್ರಿಗೇಟರ್ ಕಂಪನಿಗಳ ಕಳ್ಳಾಟ ಬಯಲಾಗಿದೆ.

publive-image

ಅಗ್ರಿಗೇಟರ್ ಕಂಪನಿಗಳ ಹೆಸರಲ್ಲಿ ರಸ್ತೆಗಿಳಿದು ಓಡಾಡ್ತಿರೋ ಬಹುತೇಕ ಇವಿ ಆಟೋಗಳಿಗೆ ದಾಖಲೆಗಳೇ ಇಲ್ಲ. ಪ್ರಮುಖವಾಗಿ ಪರ್ಮಿಟ್, ಫಿಟ್​​ನೆಸ್​ ಸರ್ಟಿಫಿಕೇಟ್​​, ಇನ್ಸೂರೆನ್ಸ್, ಎಫ್ ಸಿ, ಮೀಟರ್, ಸೇಫ್ಟಿ ಯಾವುವು ಇಲ್ಲ. ಅನೇಕ ಆಟೋಗಳು ಅವಧಿ ಮೀರಿದ ದಾಖಲೆಗಳಲ್ಲೇ ಓಡಾಡ್ತಿವೆ. ಇನ್ನೂ ಈ ಆಟೋಗಳು ಯಾವುವು ಚಾಲಕರ ಸ್ವಂತ ಆಟೋ ಅಲ್ವಂತೆ. ಖಾಸಗಿ ಕಂಪನಿಯೊಂದು ಅನೇಕ ಆಟೋಗಳನ್ನ ಖರೀದಿಸಿ, ಚಾಲಕರನ್ನ ನೇಮಿಸಿಕೊಂಡು ಆಟೋಗಳನ್ನ ರಸ್ತೆಗಿಳಿಸುತ್ತಿವೆ. ಇಂತಹ ಅನೇಕ ಆಟೋಗಳು ಸಾರಿಗೆ ನಿಯಮ ಪಾಲಿಸ್ತಿಲ್ಲ. ಅಲ್ಲದೇ ಬೇರೆ ರಾಜ್ಯದ ಅನೇಕ ಚಾಲಕರನ್ನ ಕರೆತಂದು, ಸರಿಯಾದ ದಾಖಲಾತಿಗಳಿಲ್ಲದಿದ್ದರು ರಸ್ತೆಗಿಳಿಸಿ ಓಡಾಡಿಸುತ್ತಿದ್ದಾರೆಂದು ಅನೇಕ ಇತರೆ ಆಟೋ ಚಾಲಕರು ಗಂಭೀರ ಆರೋಪ ಮಾಡಿದ್ದಾರೆ.

ಒಟ್ಟಾರೆ ಈಗಲಾದರೂ ಇಂತಹ ಕಳ್ಳಾಟದ ವಿರುದ್ಧ ಆರ್​ಟಿಓ ಅಧಿಕಾರಿಗಳು ಅಲರ್ಟ್ ಆಗಿರೋದು ಒಳ್ಳೇಯ ವಿಚಾರವೇ. ಆದರೆ ಇದು ನಿರಂತರವಾಗಿ ಮುಂದುವರೆದರಷ್ಟೇ ನಿಯಮ ಉಲ್ಲಂಘನೆ ಮಾಡೋರಿಗೆ ಬ್ರೇಕ್ ಹಾಕೋಕೆ ಸಾಧ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment