Advertisment

ಕರೆಂಟ್ ಬಿಟ್ಟಿಲ್ಲ ಎಂದು ಶಾಪ ಹಾಕೋ ಜನಗಳೇ ಇಲ್ನೋಡಿ.. ನಿಮ್ಮ ಮನೆ ಬೆಳಗಲು ಜೀವವನ್ನೇ ಒತ್ತೆಯಿಟ್ಟು ಕೆಲಸ..!

author-image
Ganesh
Updated On
ಕರೆಂಟ್ ಬಿಟ್ಟಿಲ್ಲ ಎಂದು ಶಾಪ ಹಾಕೋ ಜನಗಳೇ ಇಲ್ನೋಡಿ.. ನಿಮ್ಮ ಮನೆ ಬೆಳಗಲು ಜೀವವನ್ನೇ ಒತ್ತೆಯಿಟ್ಟು ಕೆಲಸ..!
Advertisment
  • ಮಳೆಗಾಲದಲ್ಲಿ ಲೈನ್​ಮ್ಯಾನ್​ಗಳ ಪಾಡು ಯಾರಿಗೂ ಬೇಡ..!
  • ಧಾರಾಕಾರ ಮಳೆಯ ನಡುವೆಯೂ ಸಿಬ್ಬಂದಿ ಸೇವೆಗೆ ಸೆಲ್ಯೂಟ್
  • ಮೆಸ್ಕಾಂ ಸಿಬ್ಬಂದಿ ಕೆಲಸಕ್ಕೆ ಜನರಿಂದ ಭಾರೀ ಮೆಚ್ಚುಗೆ

ಮಳೆ ಮಾಡುತ್ತಿರುವ ಅವಾಂತರ ಅಷ್ಟಿಷ್ಟಲ್ಲ. ಕರಾವಳಿ ಭಾಗದಲ್ಲಿ ಕಳೆದ ಒಂದು ವಾರದಿಂದ ಭಯಂಕರವಾಗಿ ಜಾಂಡಾ ಹೂಡಿರುವ ವರುಣದೇವನಿಗೆ ಜನ ಕೈಮುಗಿದು ಕೇಳಿಕೊಳ್ತಿದ್ದಾರೆ. ‘ಸಾಕಪ್ಪ ನಿನ್ನ ಲೀಲೆ, ಸ್ವಲ್ಪನಾದರೂ ಕರುಣೆ ತೋರಬಾರದೇ’ ಎಂದು ಬೇಡಿಕೊಳ್ತಿದ್ದಾರೆ. ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಅದೆಷ್ಟೋ ಜೀವಗಳು ನೀರಲ್ಲಿ ಮುಳುಗಿ ಹೋಗಿವೆ. ಮಣ್ಣಲ್ಲಿ ಬದುಕು ಕುಸಿದು ಹೋಗಿವೆ.  ಮನೆ, ಮಠ, ಹೊಲ, ಗದ್ದೆಗಳನ್ನು ಕಳೆದುಕೊಂಡವರ ಕಥೆ ಒಂದು ಕಡೆಯಾದರೆ, ಇಲ್ಲಿ ಒಬ್ಬರದ್ದು ಒಂದೊಂದು ರೀತಿಯ ಗೋಳು..!

Advertisment

ಇದನ್ನೂ ಓದಿ:ಗಂಭೀರ್​​ ಆಡಿದ ಗೇಮ್​ಗೆ ಬೆಂಡ್​ ಆದ ಕೊಹ್ಲಿ.. ಆರಂಭದಲ್ಲೇ ಜುಟ್ಟು ಹಿಡಿದು ಬಿಗಿಗೊಳಿಸಿದ ಗೌತಿ..!

ಎಷ್ಟೇ ಮಳೆ ಬಂದರೂ, ಎಲ್ಲಿಯೇ ಪ್ರವಾಹ ಬಂದರೂ, ಯಾರದ್ದೇ ಜೀವ ಹೋದರೂ ನಮಗೂ ಅದಕ್ಕೂ ಸಂಬಂಧ ಇಲ್ಲ. ನಮ್ಮ ಮನೆ ಮಾತ್ರ ಬೆಳಗಬೇಕು ಅನ್ನೋ ಜನರಿಗೇನೂ ಕಮ್ಮಿ ಇಲ್ಲ. ನೈಸರ್ಗಿಕ ವಿಕೋಪಗಳಿಂದಾಗಿ ಮಳೆ ಬಂದು, ಮರ ಬಿದ್ದು, ಧರೆ ಕುಸಿದು ಕರೆಂಟ್ ಕಂಬಗಳು ಮುರಿದು ಬಿದ್ದರೆ, ಅದಕ್ಕೆ ಲೈನ್​ಮ್ಯಾನ್​​ಗಳು, ಅಧಿಕಾರಿಗಳೇ ಕಾರಣ ಅನ್ನೋ ಮನಸ್ಥಿತಿಗಳಿಗೇನೂ ಕಮ್ಮಿ ಇಲ್ಲ. ಐದು ನಿಮಿಷ ಕರೆಂಟ್ ಹೋಯ್ತು ಅಂದರೆ ಲೈನ್​ಮ್ಯಾನ್​​ಗಳಿಗೆ ಫೋನ್ ಹಾಕ್ತಾರೆ, ಅಧಿಕಾರಿಗಳಿಗೆ ತರಾಟೆ ತೆಗೆದುಕೊಳ್ತಾರೆ.

ಪರಿಸ್ಥಿತಿ ಹೀಗಿರುವಾಗ ರಣ ಭಯಂಕರ ಮಳೆಯ ನಡುವೆಯೂ ವಿದ್ಯುತ್ ಇಲಾಖೆಯ ಪ್ರಾಮಾಣಿಕ ಸಿಬ್ಬಂದಿ ಬೆಳಕು ನೀಡುವ ಕೆಲಸ ಮಾಡುತ್ತಿದ್ದಾರೆ. ಬದುಕನ್ನು ತಂತಿಯ ಮೇಲಿನ ನಡುಗೆಯಂತೆ ಇಟ್ಟು, ಜೀವದ ಹಂಗು ತೊರೆದು ಲೈನ್​ಗಳಲ್ಲಿ ಸುಗಮ ವಿದ್ಯುತ್ ಪ್ರಸರಣಕ್ಕೆ ಕಷ್ಟ ಪಡುತ್ತಿದ್ದಾರೆ. ಅಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿವೆ.

Advertisment

ನೆರೆಪೀಡಿತ ಪ್ರದೇಶಗಳಲ್ಲಿ, ಭಯಾನಕ ಮಳೆಯಲ್ಲಿ ಜೀವವನ್ನೇ ಅಡವಿಟ್ಟು ಮರದ ಕೊಂಬೆಗಳನ್ನು ತೆರವು ಮಾಡುತ್ತಿರುವ ವಿಡಿಯೋಗಳು ಅದಾಗಿವೆ. ಧಾರಾಕಾರ ಮಳೆಯ ನಡುವೆಯೂ ಸಿಬ್ಬಂದಿ ಮಾಡ್ತಿರುವ ಸೇವೆಗೆ ಜನ ಸೆಲ್ಯೂಟ್ ಹೊಡೆಯುತ್ತಿದ್ದಾರೆ. ಅಂದ್ಹಾಗೆ ಈ ವಿಡಿಯೋ ಉಡುಪಿ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳದ್ದಾಗಿವೆ.

ಇದನ್ನೂ ಓದಿ:ಲಂಕಾ ಟೂರ್ನಿಗೆ ಟೀಂ ಇಂಡಿಯಾ.. ODI, T20 ಎರಡೂ ಸರಣಿಗಳಿಗೆ ಆಯ್ಕೆಯಾದ ಆಟಗಾರರು ಯಾರೆಲ್ಲ ಗೊತ್ತೇ..?

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment