newsfirstkannada.com

ಗ್ರಾಮ ಪಂಚಾಯತಿ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಬಾಲಕ ಸಾವು.. ಏನಾಯಿತು?

Share :

Published May 25, 2024 at 3:06pm

Update May 25, 2024 at 4:07pm

    ಮಗ ಹೊರಗೆ ಆಡುತ್ತಿದ್ದಾನೆ ಎಂದು ಮನೆಯಲ್ಲಿದ್ದ ತಂದೆ, ತಾಯಿ

    ಬೋರ್​ವೆಲ್ ಬಳಿ ಹೋಗಿದ್ದಾಗ ಬಾಲಕನಿಗೆ ಆಗಿರುವುದೇನು.?

    ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವು

ರಾಯಚೂರು: ಗ್ರಾಮ ಪಂಚಾಯತಿ ಸಿಬ್ಬಂದಿ ನಿರ್ಲಕ್ಷ್ಯದಿಂದ 2 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಲಿಂಗಸುಗೂರು ತಾಲೂಕಿನ ದೇವರಭೂಪುರ ಗ್ರಾಮದಲ್ಲಿ ನಡೆದಿದೆ.

ದೇವರಭೂಪುರ ಗ್ರಾಮದ ನಿವಾಸಿ ಬಸವರಾಜ್ ಎನ್ನುವರ ಮಗ ಶರಣಪ್ಪ (2) ಮೃತಪಟ್ಟ ಬಾಲಕ. ಗ್ರಾಮಪಂಚಾಯತಿಯ ಸಿಬ್ಬಂದಿ ಹಾಗೂ ಪಿಡಿಓ ಬೋರ್​ವೆಲ್​ ಬಳಿ ಅರ್ಧ ಕೆಲಸ ಮಾಡಿ ವಿದ್ಯುತ್​ ಕಾಮಗಾರಿಯನ್ನು ಹಾಗೆ ಬಿಟ್ಟಿದ್ದರು. ಇದನ್ನು ಗಮನಿಸದ ಬಾಲಕ ಬೋರ್​ವೆಲ್ ಬಳಿ ಕುಡಿಯುವ ನೀರು ತರಲು ಹೋಗಿದ್ದಾನೆ. ಈ ವೇಳೆ ವಿದ್ಯುತ್​ ತಗುಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದನು.

ಇದನ್ನೂ ಓದಿ: VIDEO: ರಾಕೇಶ್ ಸಿದ್ದರಾಮಯ್ಯ ಸಾವಿನ ರಹಸ್ಯ.. HDK ಮಾತಿಗೆ ಸಿಎಂ ಸಿದ್ದು ತಿರುಗೇಟು; ಏನಂದ್ರು?

ತಕ್ಷಣ ಪೋಷಕರು ನೋಡಿ ಮಗನನ್ನು ಲಿಂಗಸುಗೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಈ ವೇಳೆ ಬಾಲಕ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದನು. ಆದರೆ ಇಂದು ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದ್ದಾನೆ. ಸದ್ಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಪಂಚಾಯತಿ ಸಿಬ್ಬಂದಿ ಹಾಗೂ ಪಿಡಿಓ ಯಡವಟ್ಟಿನಿಂದ ಮಗ ಮೃತಪಟ್ಟಿದ್ದಾನೆ ಎಂದು ತಂದೆ, ತಾಯಿ ಹಾಗೂ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗ್ರಾಮ ಪಂಚಾಯತಿ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಬಾಲಕ ಸಾವು.. ಏನಾಯಿತು?

https://newsfirstlive.com/wp-content/uploads/2024/05/RCR_CURRENT.jpg

Load More