25 ವರ್ಷ ಜೊತೆಗಿದ್ದ ಜೀವದ ಗೆಳತಿ ಕಳೆದುಕೊಂಡ ಆನೆ ಕಣ್ಣೀರು; ಮನ ಮಿಡಿಯುತ್ತಿದೆ ಈ ವಿಡಿಯೋ!

author-image
admin
Updated On
25 ವರ್ಷ ಜೊತೆಗಿದ್ದ ಜೀವದ ಗೆಳತಿ ಕಳೆದುಕೊಂಡ ಆನೆ ಕಣ್ಣೀರು; ಮನ ಮಿಡಿಯುತ್ತಿದೆ ಈ ವಿಡಿಯೋ!
Advertisment
  • ಓ ಗೆಳೆಯ.. ಜೀವದ ಗೆಳೆಯ.. ನಿಂಗೆ ಶಾನೆ ಕ್ವಾಪ ಕಣೋ..
  • ಹಲವು ಗಂಟೆಗಳ ಕಾಲ ಆನೆ ಪಕ್ಕದಲ್ಲೇ ನಿಂತು ಗೋಳಾಡಿದ ದೃಶ್ಯ!
  • ಎಷ್ಟೇ ಪ್ರಯತ್ನ ಪಟ್ರು ಮೇಲೆ ಏಳದೇ ಇದ್ದಾಗ ಕಣ್ಣೀರಿಟ್ಟ ಆನೆ

ಓ ಗೆಳೆಯ.. ಜೀವದ ಗೆಳೆಯ.. ನಿಂಗೆ ಶಾನೆ ಕ್ವಾಪ ಕಣೋ. ಕ್ವಾಪಕು ಒಂದು ಕೈ ಪ್ರೀತಿ ಜಾಸ್ತಿ ಕಣೋ. ಇದು ದಿಗ್ಗಜರು ಸಿನಿಮಾದ ಹಾಡಿನ ಸಾಲು. ಈ 2 ಆನೆಯ ಕಣ್ಣೀರಿನ ದೃಶ್ಯ ನೋಡಿದ್ರೆ ಅಂಬರೀಶ್, ವಿಷ್ಣುವರ್ಧನ್ ಅಭಿನಯದ ಓ ಗೆಳೆಯ ಹಾಡಿನ ಭಾವುಕ ದೃಶ್ಯವೇ ಕಣ್ಮುಂದೆ ಬರುತ್ತೆ.

ಝೆನಿ ಮತ್ತು ಮಗ್ದಾ ಎಂಬ ಈ 2 ಆನೆಗಳು ಕಳೆದ 25ಕ್ಕೂ ಹೆಚ್ಚು ವರ್ಷ ಒಟ್ಟಿಗೆ ಸರ್ಕಸ್​ನಲ್ಲಿ ಭಾಗಿಯಾಗುತ್ತಿದ್ದವು. ರಷ್ಯಾದಲ್ಲಿ ಝೆನಿ ಮತ್ತು ಮಗ್ದಾ ಜೋಡಿಯ ಸರ್ಕಸ್ ಆಟಕ್ಕೆ ಬಹಳಷ್ಟು ಜನ ನಿಬ್ಬೆರಗಾಗಿದ್ದಾರೆ.

ಇದನ್ನೂ ಓದಿ: ಅಮ್ಮನ ಜೈಲಿಗೆ ಕಳುಹಿಸಲು ಫೋನ್ ಮಾಡಿ ಪೊಲೀಸರನ್ನ ಮನೆಗೆ ಕರೆಸಿದ 4 ವರ್ಷದ ಪೋರ..! 

ಆದರೆ ಒಂದು ದಿನ ಸರ್ಕಸ್‌​ಗೆ ತೆರಳಿದ್ದ ವೇಳೆ ಝೆನಿ ಆನೆ ಕುಸಿದು ಬಿದ್ದು ಗಾಯಗೊಂಡಿತ್ತು. ಇದೀಗ ಝೆನಿ ಆನೆ ಮೃತಪಟ್ಟಿದೆ. ಇದನ್ನ ಕಂಡ ಮಗ್ದಾ ತನ್ನ ಸ್ನೇಹಿತೆ ಝೆನಿಯನ್ನ ಎಬ್ಬಿಸೋಕೆ ಮತ್ತೆ, ಮತ್ತೆ ಪ್ರಯತ್ನ ಪಟ್ಟಿದೆ.

publive-image

ಕೊನೆಗೆ ಎಷ್ಟೇ ಪ್ರಯತ್ನ ಪಟ್ರು ಝೆನಿ ಆನೆ ಮೇಲೆ ಎದ್ದಿಲ್ಲ. ಸ್ನೇಹಿತೆಯನ್ನು ಕಳೆದುಕೊಂಡು ಮಗ್ದಾ ಕಣ್ಣೀರಿಟ್ಟಿದ್ದು, ತನ್ನ ಜೊತೆಗಾರ್ತಿ ಕಳೆದುಕೊಂಡು ಗೋಳಾಡುವ ದೃಶ್ಯಗಳು ಎಲ್ಲರ ಕಣ್ಣಂಚಲ್ಲಿ ನೀರು ತರಿಸುವಂತಿದೆ.


">March 14, 2025

ರಷ್ಯಾದ ಕ್ರಿಮಿಯನ್ ಪಾರ್ಕ್‌ನಲ್ಲಿ ಈ ಮನಮಿಡಿಯುವ ದೃಶ್ಯ ಸೆರೆಯಾಗಿದೆ. ಅನಾರೋಗ್ಯಕ್ಕೆ ತುತ್ತಾಗಿದ್ದ ಝೆನಿ ಪ್ರಾಣ ಬಿಟ್ಟಿದೆ. ಆ ಜಾಗದಲ್ಲಿದ್ದ ಗೆಳೆಯ ಮಗ್ದಾ ಝೆನಿಯನ್ನ ಬಿಟ್ಟು ಹೋಗಲು ಹಲವು ಗಂಟೆಗಳ ಕಾಲ ಸಂಕಟ ಅನುಭವಿಸಿದೆ. ಗೆಳೆಯನಿಗೆ ವಿದಾಯ ಹೇಳಲು ಕಣ್ಣೀರು ಹಾಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment