Video: ಖಾಸಗಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟ ಕಾಡಾನೆ; ಎದ್ದು ಬಿದ್ದು ಓಡಿದ ಜನರು

author-image
Harshith AS
Updated On
Video: ಖಾಸಗಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟ ಕಾಡಾನೆ; ಎದ್ದು  ಬಿದ್ದು ಓಡಿದ ಜನರು
Advertisment
  • ಖಾಸಗಿ ಕಾರ್ಯಕ್ರಮಕ್ಕೆ ಕಾಡಾನೆ ಎಂಟ್ರಿ
  • ಆನೆ ನೋಡಿ ದಿಕ್ಕಾಪಾಲಾಗಿ ಓಡಿದ ಜನರು
  • ಗಜರಾಜನ ಖಾಸಗಿ ಕಾರ್ಯಕ್ರಮದ ಎಂಟ್ರಿ ದೃಶ್ಯ ಇಲ್ಲಿದೆ

ಅಸ್ಸಾಂನಲ್ಲಿ ನಡೆಯುತ್ತಿರುವ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಕಾಡಾನೆ ನುಗ್ಗಿ ರಾದ್ಧಾಂತ ಸೃಷ್ಟಿಸಿದೆ. ಅಸ್ಸಾಂನ ನಾರಂಗಿ ಸೇನಾ ಶಿಬಿರದಲ್ಲಿ ನಡೆಯುತ್ತಿದ್ದ ಖಾಸಗಿ ಕಾರ್ಯಕ್ರಮಕ್ಕೆ ಕಾಡಾನೆ ಎಂಟ್ರಿಯಾಗಿದೆ.

ಆನೆ ಬರುತ್ತಿದ್ದಂತೆ ಜನರೆಲ್ಲಾ ತಮ್ಮನ ತಾವು ರಕ್ಷಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಬಳಿಕ ಕಾರ್ಯಕ್ರಮದ ವೇದಿಕೆಗೆ ನುಗ್ಗಿದ ಕಾಡಾನೆ ಅಲ್ಲಿದ್ದ ವಸ್ತುಗಳನ್ನೆಲ್ಲಾ ಕೆಳಗೆ ಚೆಲ್ಲಿ ಚೆಲ್ಲಾಪಿಲ್ಲಿ ಮಾಡಿದೆ. ನಂತರ ಅಲ್ಲಿದ್ದ ಹಣ್ಣು, ಹಂಪಲ ಹಾಗೂ ಆಹಾರ ಪದಾರ್ಥಗಳನ್ನು ಸೇವನೆ ಮಾಡಿ ಅಲ್ಲಿಂದ ತೆರಳಿದೆ.

ಈ ದೃಶ್ಯವನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿಲಾಗಿದ್ದು , ಸದ್ಯ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment