ದಸರಾ ಹಬ್ಬದ ನಡುವೆ ಗಜರಾಜನ ರಂಪಾಟ
ಸಿಕ್ಕ ಸಿಕ್ಕ ಕಾರುಗಳನ್ನು ನುಜ್ಜುಗುಜ್ಜು ಮಾಡಿದ ಆನೆ
ಆನೆಯನ್ನ ನಿಯಂತ್ರಣಕ್ಕೆ ತರಲು ಹರಸಾಹಸಪಟ್ಟ ಮಾವುತರು
ದಸರಾ ಹಬ್ಬದ ನಡುವೆ ಮದವೇರಿದ ಒಂಟಿ ಸಲಗ ರಸ್ತೆಯಲ್ಲಿ ರಾಂಪಾಟ ಮಾಡಿರುವ ಘಟನೆ ಬಿಹಾರದ ಸಪ್ರ ಜಿಲ್ಲೆಯಲ್ಲಿ ನಡೆದಿದೆ. ಮಾನಸಿಕ ಸ್ಥಿಮಿತ ಕಳೆದಕೊಂಡ ಆನೆ, ರಸ್ತೆಯಲ್ಲಿ ಸಿಕ್ಕ ಸಿಕ್ಕ ಕಾರುಗಳನ್ನ ನಜ್ಜುಗುಜ್ಜು ಮಾಡಿ ಅಟ್ಟಹಾಸ ಮೆರೆದಿದೆ.
ಆನೆ ಸುಮಾರು ಎರಡು ಗಂಟೆಗಳ ಕಾಲ ಮಾರುಕಟ್ಟೆ ಪ್ರದೇಶದಲ್ಲಿ ಅವಾಂತರ ಸೃಷ್ಟಿಸಿತ್ತು. ಆನೆ ಮೇಲೆ ಕುಳಿತ ಮಾವುತರು ರಕ್ಕಸ ರೂಪ ತಾಳಿದ್ದ ಗಜರಾಜನನ್ನ ನಿಯಂತ್ರಣ ಮಾಡೋಕೆ ಹರಸಾಹಸ ಪಟ್ಟಿದ್ದಾರೆ.
Don’t mess with an Elephant #Elephant#Bihar pic.twitter.com/x1JOH3DKfH
— अजीत सोनी (@Ajit_Soni_) October 12, 2024
ಇದನ್ನೂ ಓದಿ: ವಿಮಾನ ಹಾರಾಟದ ವೇಳೆ ಪೈಲಟ್ಗೆ ಹೃದಯಾಘಾತ.. ನಿಯಂತ್ರಣಕ್ಕೆ ತೆಗೆದುಕೊಂಡು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ ಪತ್ನಿ
ಆನೆಯ ರೌದ್ರರೂಪಕ್ಕೆ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಮದವೇರಿದ ಗಜರಾಜನನ್ನು ನೋಡಿದ ಜನರು ದಿಕ್ಕಪಾಲಾಗಿ ಓಡಿದ್ದಾರೆ. ಕೊನೆಗೆ ಅಲ್ಲಿನ ಉದ್ಯಾನವನದತ್ತ ಸಾಗಿದ ಆನೆ ಮಾವುತನ ಸಹಾಯದಿಂದ ನಿಯಂತ್ರಣಕ್ಕೆ ಬಂದಿದೆ. ನಂತರ ಆನೆಯಲ್ಲಿ ಅಲ್ಲಿದ್ದ ಮರಕ್ಕೆ ಕಟ್ಟಿಹಾಕಲಾಗಿದೆ.
ಇದನ್ನೂ ಓದಿ: Traffic: ವಿಶ್ವದ ಅತ್ಯಂತ ಟ್ರಾಫಿಕ್ ಸಿಟಿ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ.. ಬೆಂಗಳೂರಿಗೆ ಎಷ್ಟನೇ ಸ್ಥಾನ?
ಇನ್ನು ಆನೆ ಸಿಕ್ಕ ಸಿಕ್ಕ ಕಾರುಗಳನ್ನು ನಜ್ಜುಗುಜ್ಜು ಮಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಸ್ತೆಯಲ್ಲಿ ಅಡ್ಡಾಡಿ ರೌದ್ರ ನರ್ತನ ತೋರಿರುವುದು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ