/newsfirstlive-kannada/media/post_attachments/wp-content/uploads/2025/04/Charmadi-ghat.jpg)
ಚಿಕ್ಕಮಗಳೂರು: ನೀವು ಚಾರ್ಮಾಡಿ ಘಾಟ್ ಮೂಲಕ ಪ್ರಯಾಣ ಮಾಡುತ್ತಿದ್ದರೆ, ಹುಷಾರಾಗಿರಿ. ವಾಹನ ಸವಾರರು ಜಾಗೃತೆಯಿಂದ ಪ್ರಯಾಣಿಸಬೇಕೆಂಬ ಸೂಚನೆ ಬಂದಿದೆ.
ಘಾಟ್ನಲ್ಲಿ ಏನಾಗಿದೆ..?
ಚಾರ್ಮಾಡಿ ಘಾಟ್ನಲ್ಲಿ ಸದ್ಯ ಗಾಳಿ, ಮಳೆ, ಭೂಕುಸಿತ ಯಾವುದೂ ಸಂಭವಿಸುತ್ತಿಲ್ಲ. ಬದಲಾಗಿ ಜೀವಭಯ ಶುರುವಾಗಿದ್ದು ದೈತ್ಯ ಆನೆಯಿಂದ. ಕಳೆದ ರಾತ್ರಿ ಸರ್ಕಾರಿ ಬಸ್ಸಿಗೆ ಒಂಟಿ ಸಲಗ ಅಡ್ಡ ಬಂದಿದೆ. ನಿನ್ನೆ ಸಂಜೆ ಕೂಡ ಘಾಟಿಯಲ್ಲಿ ಪ್ರತ್ಯಕ್ಷವಾಗಿದೆ. ವಾಹನಗಳಿಗೆ ಅಡ್ಡಲಾಗಿ ಸರಿಸುಮಾರು ಅರ್ಧ ಗಂಟೆಗೂ ಹೆಚ್ಚುಕಾಲ ನಿಂತಿದೆ.
ತಪ್ಪಿಸಿಕೊಳ್ಳೋದು ಕಷ್ಟ..
ಇದರಿಂದ ಘಾಟಿಯಲ್ಲಿ ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಆಗಿದೆ. ಘಾಟ್ ಒಂದೆಡೆ ಗುಡ್ಡ, ಮತ್ತೊಂದೆಡೆ ಪ್ರಪಾತ. ಆನೆ ದಾಳಿಗೆ ಮುಂದಾದ್ರೆ ತಪ್ಪಿಸಿಕೊಳ್ಳೋದು ಕಷ್ಟ. ನಿನ್ನೆಯ ದಿನ ಕಾರು ಚಾಲಕ ಜಸ್ಟ್ ಮಿಸ್ ಆಗಿದ್ದಾನೆ. ಆನೆಯನ್ನ ಸೆರೆ ಹಿಡಿದು ಸ್ಥಳಾಂತರಿಸುವಂತೆ ಸ್ಥಳೀಯರು, ಪ್ರವಾಸಿಗರು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ: RCB vs PBKS: ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮೊದಲೇ ಶಾಂಕಿಂಗ್ ನ್ಯೂಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ