ಆನೆಗಳು ತಮ್ಮೊಳಗೆ ಹೆಸರು ಇಟ್ಟುಕೊಂಡಿರುತ್ತವೆ! ಮನುಷ್ಯರಂತೆ ಸಂವಹನ ಭಾಷೆಯನ್ನು ಹೊಂದಿವೆಯಂತೆ

author-image
AS Harshith
Updated On
ಆನೆಗಳು ತಮ್ಮೊಳಗೆ ಹೆಸರು ಇಟ್ಟುಕೊಂಡಿರುತ್ತವೆ! ಮನುಷ್ಯರಂತೆ ಸಂವಹನ ಭಾಷೆಯನ್ನು ಹೊಂದಿವೆಯಂತೆ
Advertisment
  • ನಿಮಗೆ ಗೊತ್ತಾ? ಮನುಷ್ಯ ಮಾತ್ರವಲ್ಲ, ಆನೆಗಳಿಗೂ ಭಾಷೆಗಳಿವೆ
  • ತಮ್ಮದೇ ಆದ ಭಾಷೆಗಳಲ್ಲಿ ಆನೆಗಳು ಮಾತನಾಡುತ್ತವೆಯಂತೆ!
  • ಆನೆಗಳು ತಮ್ಮೊಳಗೆ ಹೆಸರಿಟ್ಟುಕೊಂಡಿರುತ್ತವೆ ಎಂದರೆ ನಂಬ್ತೀರಾ?

ಮನುಷ್ಯನು ತನ್ನ ಸಂಗಾತಿ, ಸ್ನೇಹಿತ, ಸಂಬಂಧಿಕರನ್ನು ಆಯಾ ಭಾಷೆ ಮತ್ತು ಹೆಸರಿನಿಂದ ಕರೆಯುತ್ತಾನೆ. ಹಿರಿಯರು ಇಟ್ಟ ಹೆಸರಿನಿಂದಲೇ ಆತ ಗುರುತಿಸಿಕೊಂಡಿರುತ್ತಾನೆ. ಅದರಂತೆಯೇ ಕರೆದಾಗ ಪ್ರತಿಕ್ರಿಯುಸುತ್ತಾನೆ. ಅಚ್ಚರಿಯ ವಿಚಾರವೇನು ಗೊತ್ತಾ? ಆನೆಗಳು ತಮ್ಮ ಸಂಗಡದಲ್ಲಿರುವವರಿಗೆ ಹೆಸರಿಡುತ್ತವೆಯಂತೆ. ಧ್ವನಿಯ ಅನುಕರಣೆ ಮಾಡಿ ಕರೆಯುತ್ತವೆಯಂತೆ. ತಮ್ಮದೇ ಆದ ಸಂವಹನವನ್ನು ಹೊಂದಿವೆಯಂತೆ!.

ಗಿಳಿ, ಡಾಲ್ಫಿನ್​, ಶ್ವಾನ, ಆನೆಗಳು ಮನುಷ್ಯನ ಭಾಷೆಯನ್ನು ಕೇಳುತ್ತವೆ. ಅರ್ಥೈಸಿಕೊಳ್ಳುತ್ತವೆ. ಅದರಂತೆಯೇ ಪ್ರತಿಕ್ರಿಯಿಸುತ್ತವೆ. ಆದರೆ ಆನೆಗಳು ತಮ್ಮ ಸಂಗಡಗಳಲ್ಲಿ ತಮ್ಮದೇ ಆದ ಸಂವಹನವನ್ನು ಹೊಂದಿವೆ ಎಂದರೆ ಎಂಥಾ ಅಚ್ಚರಿಯಲ್ವಾ? ಅದರಲ್ಲೂ ಮನುಷ್ಯನಂತೆ ಪ್ರತಿ ಆನೆಗಳಿಗೂ ಹೆಸರಿವೆಯಂತೆ. ಅದರ ಮೂಲಕ ಧ್ವನಿ ಅನುಕರಣೆ ಮಾಡಿ ಕರೆಯುತ್ತಾ, ಪ್ರತಿಕ್ರಿಯಿಸುತ್ತವೆಯಂತೆ.

ಕೊಲರಾಡೊ ಸ್ಟೇಡ್​ ಯುನಿವರ್ಸಿಟಿಯ ಸಂಶೋಧಕರು ಈ ಸಂಗತಿಯನ್ನು ತೆರೆದಿಟ್ಟಿದ್ದಾರೆ. ಉತ್ತರ ಹಾಗೂ ದಕ್ಷಿಣ ಕೀನ್ಯಾದ ಅಭಯಾರಣ್ಯಗಳಲ್ಲಿರುವ ಆಫ್ರಿಕಾದ ಆನೆಗಳ ಮೇಲೆ ಸಂಶೋಧನೆ ನಡೆಸಿದ್ದಾರೆ. 1986ರಿಂದ 2022ರವರೆಗೆ ಅಧ್ಯಯನ ನಡೆಸಿದ್ದು, ಕೊನೆಗೆ ಅಚ್ಚರಿಯ ಸತ್ಯ ಬಯಲಾಗಿದೆ. ಮತ್ತೊಂದು ಸಂಗತಿ ಎಂದರೆ ಆನೆಗಳು ತಮ್ಮ ತಮ್ಮೊಳಗೆ ಹೆಸರಿಟ್ಟುಕೊಂಡಿರುತ್ತವೆ ಎಂಬ ಸಂಗತಿ ಕೃತಕ ಬುದ್ಧಿಮತೆಯಿಂದ ಕಂಡುಕೊಂಡಿದ್ದಾರೆ.

ಇದನ್ನೂ ಓದಿ: Reels​​ ಮಾಡಿ 1 ಲಕ್ಷ ಗೆಲ್ಲಿ! BBMP ನಿಮಗೆಂದೇ ತೆರೆದಿಟ್ಟಿದೆ ಹೀಗೊಂದು ಭರ್ಜರಿ ಆಫರ್​, ಮಿಸ್​ ಮಾಡ್ಬೇಡಿ

ಸಂಶೋಧಕರು ಆನೆಗಳ ಸುಮಾರು 469 ವಿಭಿನ್ನ ಕರೆಗಳನ್ನ ಗುರುತಿಸಿದ್ದಾರೆ. ಅದರಲ್ಲೂ ಸಂಗಾತಿಯು 50 ಮೀಟರ್​ಗಿಂತ ದೂರ ಹೋದಾಗ ಆನೆಗಳು ಅವುಗಳ ಹೆಸರಿನಿಂದ ಕರೆಯುತ್ತವೆಯಂತೆ. ಈ ವೇಳೆ ಸಂಗಾತಿ ಪ್ರತಿಕ್ರಿಯಿಸುವ ಪ್ರಕ್ರಿಯೆಯನ್ನು ಸಹ ಸಂಶೋಧಕರು ದಾಖಲಿಸಿಕೊಂಡಿದ್ದಾರೆ.

ಇವಿಷ್ಟು ಮಾತ್ರವಲ್ಲ, ಆನೆಗಳ ಈ ಸಂವಹನವನ್ನು ರೆಕಾರ್ಡ್​ ಮಾಡಿ ಅದನ್ನು ಪುನಃ ಬಳಸಿದಾಗ ಅವುಗಳು ಪ್ರತಿಕ್ರಿಯಿಸಿವೆ. ಮುನುಷ್ಯರಂತೆಯೇ ಆನೆಗಳು ಕೂಡ ಪರಸ್ಪರ ಸಂವಹನ ನಡೆಸುತ್ತವೆ ಎಂದರೆ ಎಂಥಾ ಅಚ್ಚರಿ.

ಇದನ್ನೂ ಓದಿ: KRS ಡ್ಯಾಂನ ನೀರಿನ ಮಟ್ಟ ಏರಿಕೆ.. ರಂಗನತಿಟ್ಟು ಹೋಗುವ ಪ್ರವಾಸಿಗಳಿಗೆ ಇಲ್ಲಿದೆ ಮಹತ್ವದ ಸುದ್ದಿ..

ಆನೆಗಳು ದೃಷ್ಟಿ, ವಾಸನೆ, ಸ್ಪರ್ಶದ ಬಗ್ಗೆ ಮನುಷ್ಯನಿಗೆ ತಿಳಿದಿತ್ತು. ಆದರೆ ಈಗ ಸಂವಹನ ನಡೆಸುವ ಬಗ್ಗೆ ಸಂಶೋಧನೆ ಮೂಲಕ ತಿಳಿದುಬಂದಿದೆ. ಆನೆಗಳ ಕರೆಗಳು ಗುರುತು, ವಯಸ್ಸು, ಲಿಂಗ, ಭಾವನಾತ್ಮಕ ಸ್ಥಿತಿ ಮತ್ತು ನಡವಳಿಕೆಯ ಸಂದರ್ಭವನ್ನು ಹೊಂದಿದೆ.

ವಿಶೇಷ ವರದಿ: ಹರ್ಷಿತ್​ ಅಚ್ರಪ್ಪಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment