/newsfirstlive-kannada/media/post_attachments/wp-content/uploads/2025/01/BBK11-8.jpg)
ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಕನ್ನಡದ ಬಿಗ್ಬಾಸ್ ಕೊನೆಯ ಹಂತಕ್ಕೆ ಬಂದು ತಲುಪಿದೆ. ಈ ವಾರ ಮಿಡ್ ವೀಕ್ ಎಲಿಮಿನೇಶನ್ ಇದೆ ಎಂದು ಹೇಳಲಾಗಿತ್ತಾದರೂ ಆದ್ರೆ ಕೈ ಬಿಡಲಾಗಿದೆ. ಇದನ್ನು ಕೈ ಬಿಟ್ಟಿದ್ದು ಒಳ್ಳೆದಾಯಿತು ಎನ್ನುವಷ್ಟರಲ್ಲಿ ಡಬಲ್ ಎಲಿಮಿನೇಶನ್ ಇದೆ ಹೇಳಲಾಗುತ್ತಿದೆ. ಹೀಗಾಗಿ ಮನೆಯಲ್ಲಿರುವ ಸ್ಪರ್ಧಿಗಳು ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಈ ಆತಂಕವನ್ನು ದೂರ ಮಾಡಲು ಇದೇ ಸೀಸನ್ನಿಂದ ಎಲಿಮಿನೇಟ್ ಆಗಿದ್ದ ಕೆಲ ಸ್ಪರ್ಧಿಗಳು ಮತ್ತೆ ಮನೆಗೆ ರೀ ಎಂಟ್ರಿ ಕೊಟ್ಟಿದ್ದಾರೆ.
ಬಿಗ್ಬಾಸ್ ಸೀಸನ್ 11ರಲ್ಲಿ ಮತ್ತೆ ಆರಂಭದಲ್ಲಿದ್ದ ಖುಷಿ, ಸಂತೋಷ ಅದೇ ಸಡಗರ ಮರಳಿ ಬಂದಂತೆ ಆಗಿದೆ. ಇದಕ್ಕೆ ಮುಖ್ಯ ಕಾರಣ ಬಿಗ್ ಬಾಸ್ ಮನೆಗೆ ಈಗಾಗಲೇ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ಮತ್ತೆ ಮನೆಗೆ ಅತಿಥಿಗಳಾಗಿ ಆಗಮಿಸಿದ್ದಾರೆ. ಇದರಿಂದ ಸಖತ್ ಖುಷಿ ಪಟ್ಟಿರುವ ಹಾಲಿ ಸ್ಪರ್ಧಿಗಳು ಒಬ್ಬರನ್ನ ಒಬ್ಬರು ಎತ್ತಿಕೊಂಡು, ತಬ್ಬಿಕೊಂಡು ಸಖತ್ ಖುಷಿ ಪಟ್ಟಿದ್ದಾರೆ. ಮನೆಯಲ್ಲಿ ಆಗಿರುವ ಎಲಿಮಿನೇಶನ್ ಕುರಿತು ಮೆಲುಕು ಹಾಕಿದ್ದಾರೆ.
ಇದನ್ನೂ ಓದಿ:BBK11: ಮಿಡ್ ವೀಕ್ ಎಲಿಮಿನೇಷನ್‌ಗೆ ಮೆಗಾ ಟ್ವಿಸ್ಟ್.. ಬಿಗ್ ಬಾಸ್ ಮನೆಗೆ ಎಲಿಮಿನೇಟ್ ಆದವರು ಎಂಟ್ರಿ!
ಶಿಶಿರ್, ರಂಜಿತ್, ಗೋಲ್ಡ್ ಸುರೇಶ್, ಅನುಷಾ ರೈ, ಹಂಸ, ಯಮುನಾ, ಮಾನಸ ಅತಿಥಿಗಳಾಗಿ ಮನೆಗೆ ವಾಪಸ್ ಆಗಿದ್ದಾರೆ. ಕೂಡಿಟ್ಟ ನೆನಪುಗಳು, ಸಿಹಿ ಕಹಿ ಅನುಭವಗಳು, ಕೆಟ್ಟ ಘಟನೆಗಳು ಸಾಕಷ್ಟು ಇವೆ. ಸದ್ಯ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು ತಾವೆಲ್ಲಾ ಹೇಗೆಲ್ಲಾ ಆಡಿ, ಮನೆಯಿಂದ ಹೋಗಲು ಯಾರು ಕಾರಣ ಎಂದು ನೆನಪು ಮಾಡಿಕೊಂಡಿದ್ದಾರೆ.
ಸದ್ಯ ಮನೆಯೊಳಗೆ ಬಂದಿರುವ ಎಲಿಮಿನೇಟ್ ಸ್ಪರ್ಧಿಗಳು, ಈಗ ಉಳಿದಿರುವ ಸ್ಪರ್ಧಿಗಳಿಗೆ ಎನರ್ಜಿ ಬೂಸ್ಟ್ ಕೊಡಲಿದ್ದಾರೆ. ತಪ್ಪುಗಳನ್ನು ತಕ್ಷಣ ತಿದ್ದಿಕೊಳ್ಳುವಂತೆ, ಕೆಲವೇ ಕೆಲವು ದಿನಗಳು ಬಾಕಿ ಇರುವುದರಿಂದ ಸ್ಪರ್ಧಿಗಳು ಸಖತ್ ಚಾಣಕ್ಷತೆಯಿಂದ ಆಡಬೇಕು ಎಂದು ಮನವರಿಕೆ ಮಾಡಲಿದ್ದಾರೆ. ಇದೇ ವೇಳೆ ತಾವು ಮನೆಯಿಂದ ಹೊರ ಹೋಗಲು ಏನೆಲ್ಲಾ ಕುತಂತ್ರ ನಡೆಯಿತು ಎಂದು ಎಲಿಮಿನೇಟ್ ಆದ ಸ್ಪರ್ಧಿಗಳು ಬಾಯ್ಬಿಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ