ದಿನಕ್ಕೆ 2 ರಿಂದ 3 ಬಾಟಲ್​ ಲಾಫಿಂಗ್​ ಗ್ಯಾಸ್ ಸೇವನೆ.. ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ ವಿದ್ಯಾರ್ಥಿನಿ

author-image
Bheemappa
Updated On
ದಿನಕ್ಕೆ 2 ರಿಂದ 3 ಬಾಟಲ್​ ಲಾಫಿಂಗ್​ ಗ್ಯಾಸ್ ಸೇವನೆ.. ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ ವಿದ್ಯಾರ್ಥಿನಿ
Advertisment
  • ಕಳೆದ 2 ವಾರ ಅನಾರೋಗ್ಯದಿಂದ ಬೆಡ್​ನಲ್ಲಿಯೇ ಸಮಯ ಕಳೆದಿದ್ದಳು
  • ಒಂದು ಹೆಜ್ಜೆಯನ್ನಿಟ್ಟು ನಡೆಯಲು ಪ್ರಯತ್ನಿಸಿದರೆ ಕೆಳಗೆ ಬೀಳುತ್ತಿದ್ದ ಯುವತಿ
  • ಆಸ್ಪತ್ರೆಯ ಐಸಿಯುನಲ್ಲಿ ಕೊನೆಯುಸಿರೆಳೆದಿರುವ 24 ವರ್ಷದ ವಿದ್ಯಾರ್ಥಿನಿ

ಅಮೆರಿಕದಲ್ಲಿ ವಿದ್ಯಾರ್ಥಿನಿಯೊಬ್ಬರು ದಿನಕ್ಕೆ 2 ರಿಂದ 3 ಬಾಟಲ್​ ಲಾಫಿಂಗ್​ ಗ್ಯಾಸ್ (ನಗುವ ಅನಿಲ) ಅನ್ನು ಸೇವನೆ ಮಾಡಿದ್ದರಿಂದ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ್ದಾರೆ. ಅತಿಯಾಗಿ ಲಾಫಿಂಗ್​ ಗ್ಯಾಸ್ ಬಳಕೆ ಮಾಡಿದ್ದರಿಂದ ಶ್ವಾಸಕೋಶದಲ್ಲಿ ಅಪಧಮನಿಯ ಅಡಚಣೆ ಉಂಟಾಗಿ ಯುವತಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ರಾವಣನ ಪಾತ್ರದಲ್ಲಿ ಯಶ್ ನಟಿಸುತ್ತಿಲ್ಲ, ಆದರೆ.. ಬಾಲಿವುಡ್​​ನ ರಾಮಾಯಣ ಚಿತ್ರದಲ್ಲಿ ಯಶ್ ಪಾತ್ರ ಏನು..?

ಅಮೆರಿಕದ ಬಕಿಂಗ್‌ಹ್ಯಾಮ್‌ಶೈರ್‌ನ ಗೆರಾರ್ಡ್ಸ್ ಕ್ರಾಸ್‌ನಲ್ಲಿನ ನಿವಾಸಿ ಎಲ್ಲೆನ್ ಮರ್ಸರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ವೆಕ್ಸ್‌ಹ್ಯಾಮ್ ಪಾರ್ಕ್ ಆಸ್ಪತ್ರೆಯ ಐಸಿಯುಗೆ ದಾಖಲು ಮಾಡಲಾಗಿತ್ತು. ಮರ್ಸರ್ ನಡೆಯಲು ಪ್ರಯತ್ನಿಸಿದ್ರೆ ಒಂದು ಹೆಜ್ಜೆ ಇಡುವಷ್ಟರಲ್ಲಿ ಕೆಳಗೆ ಬೀಳುತ್ತಿದ್ದರು. ಹೀಗಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಮರ್ಸರ್ ಅವರು ನೈಟ್ರಸ್ ಆಕ್ಸೈಡ್ ಅನ್ನು ದೀರ್ಘಾವಾಗಿ ಬಳಕೆ ಮಾಡಿದ್ದರಿಂದ 2 ಶ್ವಾಸಕೋಶಗಳಲ್ಲಿ ಥ್ರಂಬೋಎಂಬೊಲಿಸಮ್ (ಶ್ವಾಸಕೋಶದಲ್ಲಿ ಅಪಧಮನಿಯ ಅಡಚಣೆ) ಉಂಟಾಗಿದೆ. ಅಲ್ಲದೇ ರಕ್ತದಲ್ಲೂ ಥ್ರಂಬೋಸಿಸ್ ಉಂಟಾಗಿದೆ. ಆದರೆ ವಿದ್ಯಾರ್ಥಿನಿಯನ್ನು ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರು ಆಕೆ ಉಳಿಯಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಆ 3 ಕ್ಷೇತ್ರಗಳನ್ನ ಗೆದ್ದುಕೊಂಡು ಬರಲೇಬೇಕು.. ಕಾರಣ?

ನೈಟ್ರಸ್ ಆಕ್ಸೈಡ್ ಅಥವಾ ಲಾಫಿಂಗ್​ ಗ್ಯಾಸ್ ಉಪಯೋಗಿಸುವುದು ಎಷ್ಟೊಂದು ಅಪಾಯಕಾರಿ ಎನ್ನುವುದು ಈ ಘಟನೆಯಿಂದ ಗೊತ್ತಾಗುತ್ತದೆ. ನೈಟ್ರಸ್ ಆಕ್ಸೈಡ್ ಅನ್ನು ಅಪರಿಚಿತ ವ್ಯಕ್ತಿಯಿಂದ ನಿರಂತರವಾಗಿ ಖರೀದಿಸಿ ಉಪಯೋಸಿದ್ದಾಳೆ. ಆಕೆಯ ಗೆಳೆಯ ಮನೆಗೆ ಭೇಟಿಕೊಟ್ಟಾಗ ಲಾಫಿಂಗ್​ ಗ್ಯಾಸ್ ಬಾಟಲ್​ಗಳನ್ನು ತೋರಿಸಿ 600 ಗ್ರಾಂಗಳಿವೆ ಎಂದು ಹೇಳಿದ್ದಳು. ಆಸ್ಪತ್ರೆಗೆ ದಾಖಲಾಗುವುದಕ್ಕೂ ಮೊದಲು 2 ವಾರ ಬೆಡ್​ ಮೇಲೆಯೇ ಮಲಗಿದ್ದರು. ಈ ವೇಳೆ ನಡೆಯಲು ಪ್ರಯತ್ನಿದ್ದಾಗ ಕೆಳಗೆ ಬಿದ್ದಿದ್ದರು. ಹೀಗಾಗಿ ಆಕೆಯ ಸ್ನೇಹಿತರೆಲ್ಲ ಬಂದು ನೋಡಿಕೊಂಡು ಹೋಗಿದ್ದರು ಎಂದು ಸ್ನೇಹಿತ ಹೇಳಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಲಾಫಿಂಗ್ ಗ್ಯಾಸ್ ಅನ್ನು ಹೆಚ್ಚು ಬಳಕೆ ಮಾಡುವುದನ್ನು ಸರ್ಕಾರ ನಿಷೇಧ ಮಾಡಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment