newsfirstkannada.com

RCB ಪೆರ್ರಿ ಬಾರಿಸಿದ ಸಿಕ್ಸರ್​ಗೆ ಕಾರಿನ ಗ್ಲಾಸ್​ ಪೀಸ್ ಪೀಸ್​.. ಹೇಗಿತ್ತು ಆ ಒಂದು ಬಿಗ್​ ಹಿಟಿಂಗ್​..? Video

Share :

Published March 5, 2024 at 8:13am

Update March 5, 2024 at 8:14am

    ಯುಪಿ ವಾರಿಯರ್ಸ್​ ವಿರುದ್ಧ ಎಲ್ಲಿಸ್ ಪೆರ್ರಿ ಭರ್ಜರಿ ಬ್ಯಾಟಿಂಗ್​

    ಕ್ರೀಸ್​ನಲ್ಲಿ ರೌದ್ರಾವಾತಾರ ತೋರಿದ ಸ್ಮೃತಿ ಮಂದಾನ, ಎಲ್ಲಿಸ್ ಪೆರ್ರಿ

    ಯುಪಿಯ ದೀಪ್ತಿ ಶರ್ಮಾ ಹಾಕಿದ ಬೌಲ್​ಗೆ ಎಲ್ಲಿಸ್ ಪೆರ್ರಿ ಹಿಟ್ಟಿಂಗ್ ​

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದೆ. ಎಲ್ಲಿಸ್ ಪೆರ್ರಿ ಮತ್ತು ಸ್ಮೃತಿ ಮಂದಾನ ಅವರ ಭರ್ಜರಿ ಬ್ಯಾಟಿಂಗ್​ನಿಂದ ಯುಪಿ ವಾರಿಯರ್ಸ್​ ವಿರುದ್ಧ 23 ರನ್​ಗಳ ಅಮೋಘ ಗೆಲುವು ಸಾಧಿಸಿದೆ. ಪಂದ್ಯದಲ್ಲಿ ಹೊಡಿಬಡಿ ಆಟಕ್ಕೆ ಮುಂದಾಗಿದ್ದ ಎಲ್ಲಿಸ್ ಪೆರ್ರಿ ಬಾರಿಸಿದ ಚೆಂಡು ಮೈದಾನದಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್​ಗೆ ಬಡಿದಿದೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಯುಪಿ ಟೀಮ್​, ಆರ್​ಸಿಬಿಯನ್ನು ಬ್ಯಾಟಿಂಗ್​ಗೆ ಆಹ್ವಾನಿಸಿ ದೊಡ್ಡ ತಪ್ಪು ಮಾಡಿತು. ಆರ್​ಸಿಬಿ ಪರ ಉತ್ತಮ ಆರಂಭದ ಬ್ಯಾಟಿಂಗ್ ಮಾಡಿದ ಮೇಘಾನ ಮತ್ತು ಸ್ಮೃತಿ ಮಂದಾನ ರನ್​ಗಳನ್ನ ಕೊಳ್ಳೆ ಹೊಡೆದರು.

ಮೇಘಾನ 28 ರನ್​ಗೆ ಔಟ್​ ಆದ ಮೇಲೆ ಕ್ರೀಸ್​ಗೆ ಬಂದ ಎಲ್ಲಿಸ್ ಪೆರ್ರಿ ಯುಪಿ ಬೌಲರ್ಸ್​​ಗೆ ಮನ ಬಂದಂತೆ ಚಚ್ಚಿದರು. ಪಂದ್ಯದ ವೇಳೆ 18.5 ಓವರ್​​ನಲ್ಲಿ ಆಡುತ್ತಿದ್ದ ಎಲ್ಲಿಸ್ ಪೆರ್ರಿ ಸಿಡಿಲಬ್ಬರದ ಸಿಕ್ಸರ್​ವೊಂದನ್ನು ಸಿಡಿಸಿದರು. ಆಗ ಚೆಂಡು ನೇರ ಹೋಗಿ ಮೈದಾನದ ಬೌಂಡರಿ ಹೊರಗೆ ನಿಲ್ಲಿಸಿದ್ದ ಗಿಫ್ಟ್​​ ಕಾರಿನ ಗ್ಲಾಸ್​ಗೆ ಬಡಿದಿದೆ. ಇದರಿಂದ ಕಾರಿನ ಗ್ಲಾಸ್ ಪುಡಿ, ಪುಡಿಯಾಗಿದೆ. ಕೇವಲ 37 ಎಸೆತಗಳನ್ನ ಎದುರಿಸಿದ ಪೆರ್ರಿ 4 ಫೋರ್, 4 ಭರ್ಜರಿ ಸಿಕ್ಸರ್​ ಸಮೇತ 58 ರನ್​ ಗಳಿಸಿದರು.

ಎಲ್ಲಿಸ್ ಪೆರ್ರಿ, ಮಂದಾನ ರೌದ್ರಾವಾತರಕ್ಕೆ ಯುಪಿ ಮಹಿಳಾ ಮಣಿಗಳು ಬೆಂಡ್ ಆಗಿ ಹೋದರು. ಮೈದಾನದ ಮೂಲೆ ಮೂಲೆಗೂ ಇಬ್ಬರು ಬಾಲ್ ಕಳುಹಿಸಿದರು. ಇದರಿಂದ ಗ್ಯಾಲರಿಯಲ್ಲಿ ಕುಳಿತ ಆರ್​ಸಿಬಿ ಅಭಿಮಾನಿಗಳೆಲ್ಲ ಕುಣಿದು ಕುಪ್ಪಳಿಸಿದರು. ಸ್ಮೃತಿ ಮಂದಾನ 50 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಮೇತ 80 ರನ್ ಗಳಿಸಿ ಆಡುವಾಗ ದೀಪ್ತಿ ಶರ್ಮಾ ಬೌಲಿಂಗ್​ನಲ್ಲಿ ಔಟ್ ಆದರು.

ಆರ್​​ಸಿಬಿ ನಗದಿತ 20 ಓವರ್​ಗಳಲ್ಲಿ ಕೇವಲ 3 ವಿಕೆಟ್​ ಕಳೆದುಕೊಂಡು 198 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನತ್ತಿದ್ದ ಯುಪಿ ವಾರಿಯರ್ಸ್​ 20 ಓವರ್​​ಗಳಲ್ಲಿ 8 ವಿಕೆಟ್​​ಗೆ 175 ರನ್​ ಮಾತ್ರ ಗಳಿಸಿ ಸೋಲೋಪ್ಪಿಕೊಂಡಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB ಪೆರ್ರಿ ಬಾರಿಸಿದ ಸಿಕ್ಸರ್​ಗೆ ಕಾರಿನ ಗ್ಲಾಸ್​ ಪೀಸ್ ಪೀಸ್​.. ಹೇಗಿತ್ತು ಆ ಒಂದು ಬಿಗ್​ ಹಿಟಿಂಗ್​..? Video

https://newsfirstlive.com/wp-content/uploads/2024/03/RCB_CAR_Ellyse_Perry.jpg

Load More