newsfirstkannada.com

ಆರ್​ಸಿಬಿ ಸ್ಟಾರ್ ಪೆರ್ರಿಗೆ ‘ಒಡೆದ ಗ್ಲಾಸ್​’ ಗಿಫ್ಟ್ ಕೊಟ್ಟ ಟಾಟಾ ಮೋಟರ್ಸ್..! ಯಾಕಿರಬಹುದು Guess

Share :

Published March 16, 2024 at 1:25pm

    ಅಂದು ಮೈದಾನದಲ್ಲಿ ಪೆರ್ರಿ ಏನ್ಮಾಡಿದ್ದರು ಗೊತ್ತಾ..? ವಿಡಿಯೋ

    ಮೊದಲ ಬಾರಿಗೆ ಫೈನಲ್ ಪ್ರವೇಶಿಸಿರುವ ಆರ್​ಸಿಬಿ ತಂಡ

    ಪೆರ್ರಿಯಿಂದ ಪ್ರತಿ ಪಂದ್ಯದಲ್ಲೂ ಆಲ್​ರೌಂಡರ್ ಆಟ ಪ್ರದರ್ಶನ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್​ ಆಟಗಾರ್ತಿ ಎಲ್ಲಿಸ್ ಪರ್ರಿ ಅವರು, ನಿನ್ನೆಯ ದಿನ ಟಾಟಾ ಮೋಟರ್ಸ್​ ಕಡೆಯಿಂದ ವಿಶೇಷ ಗಿಫ್ಟ್ ಪಡೆದುಕೊಂಡಿದ್ದಾರೆ. ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ವಿರುದ್ಧ ಆಲ್​ರೌಂಡರ್ ಆಟ ಪ್ರದರ್ಶಿಸಿದ ಪರ್ರಿಗೆ ಪ್ಲೇಯರ್ ಆಫ್​​ ದ ಮ್ಯಾಚ್ ಪ್ರಶಸ್ತಿ ನೀಡುವ ವೇಳೆ ವಿಶೇಷ ಗಿಫ್ಟ್ ನೀಡಲಾಗಿದೆ.

ಸ್ಪೆಷಲ್ ಗಿಫ್ಟ್​..?
ಪರ್ರಿಗೆ ನೀಡಿರುವ ಸ್ಪೆಷಲ್ ಗಿಫ್ಟ್​ ಬೇರೆ ಏನೂ ಅಲ್ಲ. ಅದು ಒಡೆದ ಗಾಜಿನ ಪ್ರೇಮ್ ಆಗಿದೆ. ಟಾಟಾ ಮೋಟರ್ಸ್​ ಕಂಪನಿಯು ಪರ್ರಿ ಅವರಿಗೆ ಪ್ರೀತಿಯಿಂದ ಗಿಫ್ಟ್ ನೀಡಿದೆ. ಈ ಉಡುಗೊರೆ ನೀಡಲು ವಿಶೇಷ ಕಾರಣ ಕೂಡ ಇದೆ. ಲೀಗ್ ಮ್ಯಾಚ್​​ನಲ್ಲಿ ಉತ್ತರ ಪ್ರದೇಶದ ವಿರುದ್ಧ ಆಡುವ ವೇಳೆ ಬಾರಿಸಿದ್ದ ಸಿಕ್ಸರ್​​, TATA Motors ಕಾರಿನ ಗ್ಲಾಸ್ ಪುಡಿಪುಡಿಯಾಗಿತ್ತು. ಅದೇ ಕಾರಣಕ್ಕೆ ಪರ್ರಿ ಅವರಿಗೆ ಈ ಉಡುಗೊರೆಯನ್ನು ನೀಡಲಾಗಿದೆ.

ಅಂದು ಏನಾಗಿತ್ತು..?
ಮಾರ್ಚ್​ 4 ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಯುಪಿ ಟೀಮ್​, ಆರ್​ಸಿಬಿಯನ್ನು ಬ್ಯಾಟಿಂಗ್​ಗೆ ಆಹ್ವಾನಿಸಿ ದೊಡ್ಡ ತಪ್ಪು ಮಾಡಿತು. ಆರ್​ಸಿಬಿ ಪರ ಉತ್ತಮ ಆರಂಭದ ಬ್ಯಾಟಿಂಗ್ ಮಾಡಿದ ಮೇಘಾನ ಮತ್ತು ಸ್ಮೃತಿ ಮಂದಾನ ರನ್​ಗಳನ್ನ ಕೊಳ್ಳೆ ಹೊಡೆದರು.

ಇದನ್ನೂ ಓದಿRCB ಪೆರ್ರಿ ಬಾರಿಸಿದ ಸಿಕ್ಸರ್​ಗೆ ಕಾರಿನ ಗ್ಲಾಸ್​ ಪೀಸ್ ಪೀಸ್​.. ಹೇಗಿತ್ತು ಆ ಒಂದು ಬಿಗ್​ ಹಿಟಿಂಗ್​..? Video

ಮೇಘಾನ 28 ರನ್​ಗೆ ಔಟ್​ ಆದ ಮೇಲೆ ಕ್ರೀಸ್​ಗೆ ಬಂದ ಎಲ್ಲಿಸ್ ಪೆರ್ರಿ ಯುಪಿ ಬೌಲರ್ಸ್​​ಗೆ ಮನ ಬಂದಂತೆ ಚಚ್ಚಿದರು. ಪಂದ್ಯದ ವೇಳೆ 18.5 ಓವರ್​​ನಲ್ಲಿ ಆಡುತ್ತಿದ್ದ ಎಲ್ಲಿಸ್ ಪೆರ್ರಿ ಸಿಡಿಲಬ್ಬರದ ಸಿಕ್ಸರ್​ವೊಂದನ್ನು ಸಿಡಿಸಿದರು. ಆಗ ಚೆಂಡು ನೇರ ಹೋಗಿ ಮೈದಾನದ ಬೌಂಡರಿ ಹೊರಗೆ ನಿಲ್ಲಿಸಿದ್ದ ಗಿಫ್ಟ್​​ ಕಾರಿನ ಗ್ಲಾಸ್​ಗೆ ಬಡಿದಿತ್ತು. ಇದರಿಂದ ಕಾರಿನ ಗ್ಲಾಸ್ ಪುಡಿ, ಪುಡಿಯಾಗಿತ್ತು. ಕೇವಲ 37 ಎಸೆತಗಳನ್ನ ಎದುರಿಸಿದ ಪೆರ್ರಿ 4 ಫೋರ್, 4 ಭರ್ಜರಿ ಸಿಕ್ಸರ್​ ಸಮೇತ 58 ರನ್​ ಗಳಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರ್​ಸಿಬಿ ಸ್ಟಾರ್ ಪೆರ್ರಿಗೆ ‘ಒಡೆದ ಗ್ಲಾಸ್​’ ಗಿಫ್ಟ್ ಕೊಟ್ಟ ಟಾಟಾ ಮೋಟರ್ಸ್..! ಯಾಕಿರಬಹುದು Guess

https://newsfirstlive.com/wp-content/uploads/2024/03/RCB-5-1.jpg

Load More