/newsfirstlive-kannada/media/post_attachments/wp-content/uploads/2025/03/ELON-MUSK-1.jpg)
ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್ ಶನಿವಾರ ಒಂದು ಮಹತ್ವದ ಘೋಷಣೆ ಮಾಡಿದ್ದಾರೆ. ಅವರ ಸ್ಟಾರ್ಶಿಪ್ನ ರಾಕೆಟ್ 2026ರಲ್ಲಿ ಮಂಗಳ ಗ್ರಹಕ್ಕೆ ಪ್ರಯಾಣ ಬೆಳಸಲಿದೆ ಎಂದು ಹೇಳಿದ್ದಾರೆ. ಈ ಒಂದು ಬಾಹ್ಯಾಕಾಶ ನೌಕೆ ಟೆಸ್ಲಾದ ಹುಮನಾಯ್ಡ್ ರೋಬೋಟ್ ಆಪ್ಟಿಮಸ್ಗಳನ್ನು ಕೂಡ ಹೊತ್ತೊಯ್ಯಲಿದೆ ಎಂದು ಮಸ್ಕ್ ಘೋಷಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಎಲಾನ್ ಮಸ್ಕ್ ನಮ್ಮ ಸ್ಟಾರ್ಶಿಪ್ ಮುಂದಿನ ವರ್ಷದ ಅತ್ಯಂತದಲ್ಲಿ ಮಾರ್ಸ್ ಅಂಗಳಕ್ಕೆ ನೆಗೆಯಲಿದೆ. ಇದಾದ ಬಳಿಕ ಮಾನವಸಹಿತ ಮಂಗಳಯಾನ ಬಹುಶಃ 2029 ಇಲ್ಲವೇ 2030ರಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಫೋನ್ ನೀರಿಗೆ ಬಿದ್ದಾಗ ಈ ತಪ್ಪು ಮಾಡಿದ್ರೆ ಗೋವಿಂದ.. ಫಸ್ಟ್ ಏನು ಮಾಡಬೇಕು ಗೊತ್ತಾ?
ಸ್ಪೇಸ್ ಎಕ್ಸ್ ಮಾರ್ಚ್ 14,2002ರಂದು ಸ್ಥಾಪನೆಯಾಗಿದೆ. ಇತ್ತೀಚೆಗಷ್ಟೇ ತನ್ನ 23ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ. ಈ ಹಿಂದೆ ನಡೆಸಿದ ಸ್ಟಾರ್ಶಿಪ್ನ ಎಂಟು ಉಡಾವಣೆಗಳು ವಿಫಲಗೊಂಡಿವೆ. ಇತ್ತೀಚೆಗಷ್ಟೇ ಅಂದ್ರೆ ಮಾರ್ಚ್ 7 ರಂದು ಉಡಾಯಿಸಲಾದ ಸ್ಟಾರ್ಶಿಪ್ನ ರಾಕೆಟ್ ಸ್ಫೋಟಗೊಂಡು ಧ್ವಂಸವಾಯಿತು. ಲಾಂ್ ಆದ ಕೆಲವೇ ನಿಮಿಷಗಳಲ್ಲಿ ಬಾಹ್ಯಾಕಾಶ ನೌಕೆ ಸ್ಫೋಟಗೊಂಡಿತ್ತು.
ಈ ಎಲ್ಲಾ ವಿಫಲತೆಗಳ ಮಧ್ಯೆಯೂ ಮತ್ತೆ ಎಫ್ಎಫ್ಎ ದಿಂದ ಪರವಾನಿಗೆ ಪಡೆದುಕೊಂಡಿರುವ ಸ್ಪೇಸ್ ಎಕ್ಸ್ ಹಲವು ಬಾಹ್ಯಾಕಾಶದಲ್ಲಿ ಹಲವು ಪರೀಕ್ಷೆಗಳನ್ನು ನಡೆಸಲು ಮುಂದಾಗಿದೆ. ಸದ್ಯ ಈಗ ಮಂಗಳಯಾನದ ಮೇಲೆ ಕಣ್ಣಿಟ್ಟಿರುವ ಸ್ಪೇಸ್ ಎಕ್ಸ್ 2026 ಅಂತ್ಯಕ್ಕೆ ಉಪಗ್ರಹವನ್ನು ಕಳುಹಹಿಸಲಿದ್ದು. ಮಾನವಸಮೇತ ಮಂಗಳಯಾನವನ್ನು 2029 ಇಲ್ಲವೇ 2030ರಲ್ಲಿ ನಡೆಸಲು ಸಿದ್ಧತೆ ಆರಂಭಿಸಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ