13ನೇ ಮಗುವಿಗೆ ತಂದೆಯಾದ ವಿವಾದದಲ್ಲಿ ಮಸ್ಕ್​; ಕೊನೆಗೂ ಮೌನ ಮುರಿದ ಟೆಸ್ಲಾ CEO

author-image
Ganesh
Updated On
13ನೇ ಮಗುವಿಗೆ ತಂದೆಯಾದ ವಿವಾದದಲ್ಲಿ ಮಸ್ಕ್​; ಕೊನೆಗೂ ಮೌನ ಮುರಿದ ಟೆಸ್ಲಾ CEO
Advertisment
  • ಎಲಾನ್ ಮಸ್ಕ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ
  • ಮಸ್ಕ್​ ವಿರುದ್ಧ ಆರೋಪ ಮಾಡಿದ ಮಹಿಳೆ ಯಾರು?
  • ಎಲಾನ್ ಮಸ್ಕ್ ಅಧಿಕೃತವಾಗಿ 12 ಮಕ್ಕಳ ತಂದೆ

ಟೆಸ್ಲಾ ಸಿಇಓ ಎಲಾನ್ ಮಸ್ಕ್ (Tesla CEO Elon Musk) 13ನೇ ಮಗುವಿನ ವಿವಾದದಲ್ಲಿ ಸಿಲುಕಿದ್ದಾರೆ. ಬರಹಗಾರ್ತಿ ಆಶ್ಲೇ ಸೇಂಟ್ ಕ್ಲೇರ್​​ ‘ನನ್ನ ಐದು ತಿಂಗಳ ಮಗುವಿನ ತಂದೆ ಎಲಾನ್ ಮಸ್ಕ್​​’ ಎಂದಿದ್ದಾರೆ. ಆಶ್ಲೇ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗ್ತಿದ್ದಂತೆಯೇ ಮಸ್ಕ್​​ ಮೌನ ಮುರಿದಿದ್ದಾರೆ. ಟ್ವಿಟರ್​​ನಲ್ಲಿ ಪ್ರತಿಕ್ರಿಯೆ ನೀಡಿರುವ ಮಸ್ಕ್​ Whoa ಎಂದು ಪ್ರತಿಕ್ರಿಯಿಸಿದ್ದಾರೆ.

ಆಶ್ಲೇ ಆರೋಪ ಏನು..?

‘ಐದು ತಿಂಗಳ ಹಿಂದೆ, ನಾನು ಹೊಸ ಮಗುವನ್ನು ಜಗತ್ತಿಗೆ ಸ್ವಾಗತಿಸಿದೆ. ಎಲಾನ್ ಮಸ್ಕ್ ಅವರೇ ಅದರ ತಂದೆ. ಮಗುವಿನ ಸುರಕ್ಷತೆಗಾಗಿ ಈ ವಿಚಾರವನ್ನು ಖಾಸಗಿಯಾಗಿಟ್ಟಿದ್ದೆ. ‘ಮಗುವಿನ ಗೌಪ್ಯತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಬಹಿರಂಗಪಡಿಸಿರಲಿಲ್ಲ. ಮುಂದೆ ಆಗುವ ಅಪಾಯ ಅರಿತು ಈಗ ಎಲ್ಲರ ಮುಂದೆ ಹೇಳುತ್ತಿದ್ದೇನೆ. ಯಾಕೆಂದರೆ ಕೆಲವು ಮಾಧ್ಯಮಗಳು ಸುದ್ದಿ ಪ್ರಕಟಿಸಲು ತಯಾರಿ ನಡೆಸುತ್ತಿವೆ ಅಂತಾ ಘೋಷಣೆ ಮಾಡಿದ್ದರು.

ಈ ಆರೋಪ ಬೆನ್ನಲ್ಲೇ ಬಳಕೆದಾರನೊಬ್ಬ, ಎಲಾನ್ ಮಸ್ಕ್​ ಅವರನ್ನು ಬಲೆಗೆ ಬೀಳಿಸಿಕೊಳ್ಳಲು ಅರ್ಧ ದಶಕಗಳಿಂದ ಆಶ್ಲೆ ಸೇಂಟ್ ಕ್ಲೇರ್ ಪ್ಲಾನ್ ಮಾಡಿದ್ದರು ಅಂತಾ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದ. ಅದಕ್ಕೆ ಪ್ರತಿಕ್ರಿಯಿಸಿರುವ ಮಸ್ಕ್ ‘ವಾವ್ಹ್’ ಎಂದಿದ್ದಾರೆ.

ಇದನ್ನೂ ಓದಿ:  ರಾಜ್ಯದಲ್ಲಿ 3 ಪ್ರತ್ಯೇಕ ಅಪಘಾತ; ದುರಂತದಲ್ಲಿ 7 ಕಾರುಗಳು ಜಖಂ, ಕಣ್ಮುಚ್ಚಿದ ಬೈಕ್ ಸವಾರರು

ಮಸ್ಕ್​ ಅವರ Whoa ಎಂಬ ಪ್ರತಿಕ್ರಿಯೆ ಬೆನ್ನಲ್ಲೇ, ಆಶ್ಲೇ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಪೋಸ್ಟ್ ಮಾಡಿ ಡಿಲೀಟ್ ಮಾಡಿದ್ದಾರೆ. ಎಲಾನ್ ಅವರೇ, ಕಳೆದ ಹಲವು ದಿನಗಳಿಂದ ನಿಮ್ಮ ಜೊತೆ ಸಂವಹನ ನಡೆಸಲು ಪ್ರಯತ್ನಿಸುತ್ತಿದ್ದೇವೆ. ನೀವು ಪ್ರತಿಕ್ರಿಯಿಸಿಲ್ಲ. ಅಂದು ನನ್ನ ಆಕ್ಷೇಪಾರ್ಹ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ವ್ಯಕ್ತಿಯ ನಿಂದನೆಗಳಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸುವ ಬದಲು ನೀವು ಯಾವಾಗ ಉತ್ತರ ನೀಡುತ್ತೀರಿ ಎಂದು ಬರೆಯಲಾಗಿತ್ತು.

ಕೊನೆಗೆ ತಮ್ಮ ಪ್ರತಿನಿಧಿ ಬ್ರಿಯಾನ್ ಗ್ಲಿಕ್ಲಿಚ್ (Brian Glicklich) ಮೂಲಕ ಪ್ರತಿಕ್ರಿಯಿಸಿರುವ ಆಶ್ಲೇ, ಮಸ್ಕ್ ಖಾಸಗಿಯಾಗಿ ಸಹ-ಪೋಷಕತ್ವದ (co-parenting) ಕುರಿತು ಒಪ್ಪಂದದಲ್ಲಿ ಕೆಲಸ ಮಾಡುತ್ತಿದ್ದೇವೆ ಅನ್ನೋದನ್ನು ದೃಢಪಡಿಸಿದ್ದಾರೆ. ‘ಅನಗತ್ಯ ಊಹಾಪೋಹ ಕೊನೆಗೊಳಿಸಲು, ಆಶ್ಲೇ ಜೊತೆಗಿನ ಪೋಷಕರ ಪಾತ್ರವನ್ನು ಮಸ್ಕ್ ಸಾರ್ವಜನಿಕವಾಗಿ ಒಪ್ಪಿಕೊಳ್ಳಲು ಕಾಯುತ್ತಿದ್ದೇವೆ. ಮಸ್ಕ್ ಹಂಚಿಕೊಳ್ಳುವ ಮಗುವಿನ ಯೋಗಕ್ಷೇಮ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ತುರ್ತು ಅಗ್ರಿಮೆಂಟ್​ಗೆ ನಿರ್ಧರಿಸಿರುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ. 52 ವರ್ಷದ ಮಸ್ಕ್, ಮೂವರು ಮಹಿಳೆಯರಿಂದ 12 ಮಕ್ಕಳನ್ನು ಹೊಂದಿದ್ದಾರೆ.

ಇದನ್ನೂ ಓದಿ: ಟೀಕೆಗೆ ಒಳಗಾದ ಡಾಲಿ.. ಮದ್ವೆಗಾಗಿ ಆಚರಿಸಿದ ಸಂಪ್ರದಾಯದ ಬಗ್ಗೆ ಉತ್ತರ ಕೊಟ್ಟ ಧನಂಜಯ..

ಆಶ್ಲೇ ಸೇಂಟ್ ಕ್ಲೇರ್ ಯಾರು?

ಸೇಂಟ್ ಕ್ಲೇರ್ ಒಬ್ಬ ಬರಹಗಾರ್ತಿ ಮತ್ತು ಅಂಕಣಕಾರ. ರಾಜಕೀಯ ಕಮೆಂಟ್ ಮತ್ತು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳೋದ್ರಲ್ಲಿ ಹೆಸರುವಾಸಿ. ಸಂಪ್ರದಾಯವಾದಿ ಮಕ್ಕಳ ಪುಸ್ತಕಗಳ ಸರಣಿಯನ್ನು ಪ್ರಕಟಿಸುತ್ತಾರೆ. ವಿವೇಕ್ ರಾಮಸ್ವಾಮಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಾಶ್ ಪಟೇಲ್ ಸೇರಿದಂತೆ ಪ್ರಮುಖ ವ್ಯಕ್ತಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಇತ್ತೀಚೆಗೆ 2017ರ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣವಚನ ಸಮಾರಂಭದ ಹಳೆಯ ಫೋಟೋ ಹಂಚಿಕೊಂಡು ಸುದ್ದಿಯಾಗಿದ್ದರು.

ಇದನ್ನೂ ಓದಿ: 22 ದಿನಗಳ ಕಾಲ ನಿರಂತರ ಪತ್ನಿಗಾಗಿ ಹುಡುಕಾಟ; ಕೊನೆಗೂ ಸಿಕ್ಕ ಹೆಂಡತಿ ಪರಿಸ್ಥಿತಿ ಕಂಡು ಕಂಗಾಲಾದ ಗಂಡ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment