/newsfirstlive-kannada/media/post_attachments/wp-content/uploads/2025/02/MODI_US-2.jpg)
ವಿಶ್ವದ ಬಲಿಷ್ಠ ರಾಷ್ಟ್ರಗಳಾಗಿರುವ ಅಮೆರಿಕ ಹಾಗೂ ಫ್ರಾನ್ಸ್ ಪ್ರವಾಸ ಕೈಗೊಂಡಿರೋ ಪ್ರಧಾನಿ ಮೋದಿ ಹೊಸ ಬಾಂಧವ್ಯಕ್ಕೆ ಭಾಷ್ಯ ಬರೆದಿದ್ದಾರೆ. ಆಪ್ತಮಿತ್ರ ಡೊನಾಲ್ಡ್ ಟ್ರಂಪ್ ಭೇಟಿಯಾದ ಪ್ರಧಾನಿ ಮೋದಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ. ಅಲ್ಲದೇ ವಿಶ್ವದ ನಂ.01 ಶ್ರೀಮಂತ ಎಲಾನ್ ಮಸ್ಕ್ ಜೊತೆಯೂ ಮೋದಿ ಚರ್ಚೆ ನಡೆಸಿದ್ದಾರೆ.
ಎರಡು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಡೊನಾಲ್ಡ್ ಟ್ರಂಪ್ರನ್ನ ಭೇಟಿಯಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ 2ನೇ ಬಾರಿಗೆ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಪ್ರಧಾನಿ ಮೋದಿ, ಟ್ರಂಪ್ರನ್ನ ಭೇಟಿಯಾಗಿ ಆಲಂಗಿಸಿದ್ದಾರೆ. ಇನ್ನೂ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರನ್ನ ಭೇಟಿಯಾದ 4ನೇ ವಿದೇಶಿ ನಾಯಕ ಮೋದಿಯವರಾಗಿದ್ದಾರೆ.
ಡೊನಾಲ್ಡ್ ಟ್ರಂಪ್ ಭೇಟಿಯಾಗಿ ಉಭಯ ಕುಶಲೋಪರಿ ವಿಚಾರಿಸಿದ ಮೋದಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ವಲಸಿಗರ ಗಡಿಪಾರು, ದ್ವಿಪಕ್ಷೀಯ ಒಪ್ಪಂದ, ಎಐ ತಂತ್ರಜ್ಞಾನದ ಬಗ್ಗೆ ಟ್ರಂಪ್ ಜೊತೆ ಮೋದಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಭೇಟಿ ಬಳಿಕ ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ ಇಬ್ಬರೂ ನಾಯಕರು ಮಾತನಾಡಿದ್ದು, ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ.
ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಭೇಟಿಯಾದ ಮೋದಿ!
ಟ್ರಂಪ್ ಭೇಟಿಗೂ ಮುನ್ನ ಪ್ರಧಾನಿ ಮೋದಿ ವಾಷಿಂಗ್ಟನ್‌ನಲ್ಲಿರುವ ಬ್ಲೇರ್ ಹೌಸ್‌ನಲ್ಲಿ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಅವರನ್ನ ಭೇಟಿಯಾದರು. ಕುಟುಂಬ ಸಮೇತರಾಗಿ ಮೋದಿ ಅವರನ್ನ ಭೇಟಿಯಾದ ಎಲಾನ್ ಮಸ್ಕ್, ವಿಶೇಷ ಉಡುಗೊರೆಯೊಂದನ್ನ ಮೋದಿಗೆ ನೀಡಿದರು. ಈ ಭೇಟಿಯ ಸಮಯದಲ್ಲಿ ಮೋದಿ-ಮಸ್ಕ್ ಇಬ್ಬರೂ ಸ್ಟಾರ್‌ಲಿಂಕ್‌ನ ಭಾರತದಲ್ಲಿ ಪ್ರವೇಶದ ಬಗ್ಗೆ ಚರ್ಚಿಸಿದ್ದಾರೆ.
ಇದನ್ನೂ ಓದಿ:BREAKING: ಆರ್ಸಿಬಿಯಿಂದ ಅಧಿಕೃತ ಘೋಷಣೆ.. ಕೊಹ್ಲಿ ಆಪ್ತನಿಗೆ ಕ್ಯಾಪ್ಟನ್ಸಿ ಪಟ್ಟ..!
ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರನ ಭೇಟಿಯಾದ ನಮೋ!
ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಜ್ ಜೊತೆಯೂ ಮೋದಿ ಸಭೆ ನಡೆಸಿದರು. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಫೋಸ್ಟ್ ಮಾಡಿರುವ ಮೋದಿ, ಮೈಕ್ ವಾಲ್ಟ್ಜ್ ಅವರೊಂದಿಗೆ ಭೇಟಿ ಫಲಪ್ರದವಾಗಿದೆ. ಅವರು ಯಾವಾಗಲೂ ಭಾರತದ ಉತ್ತಮ ಸ್ನೇಹಿತರಾಗಿದ್ದಾರೆ. ರಕ್ಷಣೆ, ತಂತ್ರಜ್ಞಾನ ಮತ್ತು ಭದ್ರತೆಯು ಭಾರತ-ಯುಎಸ್ಎ ಸಂಬಂಧಗಳ ಪ್ರಮುಖ ಅಂಶಗಳಾಗಿವೆ. ಈ ವಿಷಯಗಳ ಬಗ್ಗೆ ಉತ್ತಮವಾದ ಚರ್ಚೆಯನ್ನು ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಫ್ರಾನ್ಸ್ ಹಾಗೂ ಅಮೆರಿಕ ಭೇಟಿ ಮೂಲಕ ಎರಡು ಬಲಿಷ್ಠ ರಾಷ್ಟ್ರಗಳ ನಡುವಿನ ಬಾಂಧವ್ಯಕ್ಕೆ ಮೋದಿ ಹೊಸ ಭಾಷ್ಯ ಬರೆದಿದ್ದಾರೆ. ಅಮೆರಿಕ ಮತ್ತು ಫ್ರಾನ್ಸ್ ಭೇಟಿ ಮೂಲಕ ವಿಶ್ವದ ಗಮನ ಸೆಳೆದಿರುವ ಮೋದಿ ಭಾರತದ ಶತ್ರುಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ