ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಿದ ಎಲಾನ್ ಮಸ್ಕ್​​.. ಡೊನಾಲ್ಡ್ ಟ್ರಂಪ್​ಗೆ ದೊಡ್ಡ ಪೆಟ್ಟು..!

author-image
Ganesh
Updated On
‘ನನ್ನ ಅವಧಿ ಮುಗಿದಿದೆ..’ ಡೊನಾಲ್ಡ್​ ಟ್ರಂಪ್​ಗೆ ಬಿಗ್ ಶಾಕ್ ಕೊಟ್ಟ ಎಲೊನ್ ಮಸ್ಕ್​..!
Advertisment
  • ಅಮೆರಿಕ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿ ಆಗಿದೆ
  • ಟ್ರಂಪ್ ಜೊತೆ ಮುನಿಸಿಕೊಂಡು ಹೊರ ಬಂದಿರುವ ಮಸ್ಕ್
  • ಮಸ್ಕ್ ಹೊಸ ಪಕ್ಷ ಘೋಷಣೆಯಿಂದ ಏನೆಲ್ಲ ಪರಿಣಾಮ ಬೀರುತ್ತೆ

ಡೊನಾಲ್ಡ್ ಟ್ರಂಪ್ (Donald Trump)​ ಜೊತೆಗಿನ ಮುನಿಸಿನ ಬೆನ್ನಲ್ಲೇ ಬಿಲಿಯನೇರ್ ಉದ್ಯಮಿ ಎಲಾನ್​ ಮಸ್ಕ್ ( Elon Musk)​ ಹೊಸ ರಾಜಕೀಯ ಪಕ್ಷ ಘೋಷಿಸಿದ್ದಾರೆ. ಅಮೆರಿಕ ಪಾರ್ಟಿ (America Party) ಎಂಬ ಹೊಸ ಪಕ್ಷವನ್ನ ಘೋಷಿಸಿ ಟ್ರಂಪ್ ವಿರುದ್ಧ ಸಮರಕ್ಕೆ ಮುನ್ನಡಿ ಬರೆದಿದ್ದಾರೆ.

ಅಮೆರಿಕದಲ್ಲಿ ಏಕಪಕ್ಷ ವ್ಯವಸ್ಥೆ ಮುಕ್ತಗೊಳಿಸೋಣ. ಈಗಿರುವ 2 ಪಕ್ಷಗಳಿಂದ ಜನತೆಗೆ ಸ್ವಾತಂತ್ರ್ಯ ಬೇಕಿದೆ. ನಿಮ್ಮ ಸ್ವಾತಂತ್ರ್ಯ ಮರಳಿ ಪಡೆಯಲು ಹೊಸ ಪಕ್ಷ ಘೋಷಿಸಿರೋದಾಗಿ ಎಲಾನ್​ ಮಸ್ಕ್​ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.
ಮಸ್ಕ್ ಅವರ ಪಕ್ಷವು ತಂತ್ರಜ್ಞಾನ ಸ್ನೇಹಿ, ಸ್ವಾತಂತ್ರ್ಯ-ಪರ ಮತ್ತು ಸ್ಥಾಪನೆ-ವಿರೋಧಿ ಮತದಾರರ ಆಕರ್ಷಿಸಬಹುದು. ಟ್ರಂಪ್‌ಗೆ ಸ್ವಲ್ಪಮಟ್ಟಿಗೆ ಬೆಂಬಲ ನೀಡೋರು ಮಸ್ಕ್​ ಜೊತೆ ಕೈಜೋಡಿಸಲಿದ್ದಾರೆ. ಸಾಂಪ್ರದಾಯಿಕ ರಾಜಕೀಯದಿಂದ ದೂರ ಸರಿದು ಹೊಸದು ಮಾಡುವ ಭರವಸೆ ನೀಡುವ ನಾಯಕನೆಂದು ಮಸ್ಕ್ ಅವರ ಇಮೇಜ್ ಸೃಷ್ಟಿಯಾಗುತ್ತಿದೆ. ಇದು ಅಸ್ತಿತ್ವದಲ್ಲಿರುವ ರಾಜಕೀಯ ಅತೃಪ್ತರನ್ನ ಆಕರ್ಷಿಸಬಹುದು ಎನ್ನಲಾಗಿದೆ.

publive-image

ಮಸ್ಕ್​ ಹೊಸ ಪಕ್ಷ ಘೋಷಣೆಯಿಂದ ಆಗುವ ಸಾಧ್ಯತೆಗಳು..

ಮಸ್ಕ್ ಪಕ್ಷವು ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ರಿಪಬ್ಲಿಕನ್ ಪಕ್ಷದ ಮತಬ್ಯಾಂಕ್ ವಿಭಜನೆ ಆಗಲಿದೆ. ಡೆಮಾಕ್ರಾಟಿಕ್ ಪಕ್ಷಕ್ಕೆ ಮತ ಹಾಕಲು ಇಷ್ಟಪಡದ, ರಿಪಬ್ಲಿಕನ್​​ರ ಬಗ್ಗೆ ಅತೃಪ್ತರಾಗಿರುವ ಮತದಾರರನ್ನ ಸಹಜವಾಗಿಯೇ ಅಮೆರಿಕ ಪಕ್ಷ ಸೆಳೆಯಲಿದೆ. ಇದರಿಂದ ಟ್ರಂಪ್​ಗೆ ಹೊಡೆತ ಬೀಳಲಿದೆ.

ಇದನ್ನೂ ಓದಿ: ಸೀರಿಯಲ್​ನಲ್ಲಿ ಪೆದ್ದ ಹುಡುಗ.. ರಿಯಲ್​ ಲೈಫ್​ನಲ್ಲಿ ಸ್ಟೈಲಿಶ್ ಹೀರೋ; ಯಾರು ಈ ತೇಜಸ್ ಗೌಡ?

ಮಸ್ಕ್ ತನ್ನ ಕಂಪನಿಗಳ ಮೂಲಕ ರಾಜಕೀಯಕ್ಕೆ ಇಳಿಯಬಹುದು. ಇದರಲ್ಲಿ AI ಆಧಾರಿತ ಮತದಾರರ ವಿಶ್ಲೇಷಣೆ, ಡಿಜಿಟಲ್ ಪ್ರಚಾರ ತಂತ್ರಗಳ ಬಳಕೆ , ಕ್ರೌಡ್‌ಫಂಡಿಂಗ್ ಮಾದರಿಗಳ ವಿಕೇಂದ್ರೀಕರಣ ಮತ್ತು ಪರಿಶೀಲನೆ ಮತ್ತು ಬ್ಲಾಕ್‌ಚೈನ್ ಆಧಾರಿತ ಮತದಾನ ಪ್ರಕ್ರಿಯೆಗಳು ಸೇರುವ ಸಾಧ್ಯತೆ ಇದೆ. ಮಸ್ಕ್ ಹೊಸ ರಾಜಕೀಯ ತಂತ್ರಗಳನ್ನು ಯಶಸ್ವಿಯಾಗಿ ಪ್ರಯತ್ನಿಸಿದರೆ, ಟ್ರಂಪ್ ತಮ್ಮ ಪಕ್ಷಕ್ಕೂ ಅದನ್ನೇ ಬಳಸಿಕೊಳ್ಳುವಂತೆ ಒತ್ತಾಯಿಸಬಹುದು. ಇದು ಅಮೆರಿಕ ರಾಜಕೀಯ ವ್ಯವಸ್ಥೆ ಮೇಲೆ ದೊಡ್ಡ ಪರಿಣಾಮ ಬೀರಲಿದೆ.

ಇದನ್ನೂ ಓದಿ: ದ್ವಿಭಾಷಾ ಸೂತ್ರಕ್ಕೆ ಜೈ ಎಂದ ಸಿದ್ದರಾಮಯ್ಯ; ದೇಶದಲ್ಲಿ ಹಿಂದಿ ವಿರುದ್ಧ ಹೊಸ ಅಲೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment