/newsfirstlive-kannada/media/post_attachments/wp-content/uploads/2024/08/Elon-Musk-1.jpg)
ಅಮೆರಿಕಾ ಸರ್ಕಾರದ ಡಿಪಾರ್ಟ್ಮೆಂಟ್ ಆಫ್ ಎಫಿಸಿಯನ್ಸ್ (DOGE) ಭಾರತದ ಚುನಾವಣೆ ಗಳಲ್ಲಿ ಮತದಾನ ಹೆಚ್ಚಿಸುಲು ನೀಡುತ್ತಿರುವ ಹಣವನ್ನು ತಡೆ ಹಿಡಿಯಲಾಗಿದೆ ಎಂಬ ಹೇಳಿಕೆ ಕೊಟ್ಟು ಹೊಸದೊಂದು ಬಾಂಬ್ ಎಸೆದಿದೆ.ಎಲಾನ್ ಮಸ್ಕ್ ನೇತೃತ್ವದ DOGE ತನ್ನ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಬರೆದಕೊಂಡಿದೆ
ಯುಎಸ್ನ ತೆರಿಗೆದಾರರ ದುಡ್ಡು ಕೆಲವು ವಿಷಯಗಳಿಗಾಗಿ ಅನವಶ್ಯಕವಾಗಿ ಹರಿದು ಹೋಗುತ್ತಿತ್ತು. ಅವುಗಳನ್ನು ತಡೆಹಿಡಿಯಲಾಗಿದೆ. 486 ಮಿಲಿಯನ್ ಡಾಲರ್ ಚುನಾವಣಾ ಮತ್ತು ರಾಜಕೀಯ ಪ್ರಕ್ರಿಯೆ ಬಲವರ್ಧನೆಗಾಗಿ, ಎರಡು 22 ಮಿಲಿಯನ್ ಡಾಲರ್ ಮಾಲ್ಡೊವಾದ ರಾಜಕೀಯ ಪ್ರಕ್ರಿಯೆಯಲ್ಲಿ ಒಳಗೊಳ್ಳುವ ಹಾಗೂ ಭಾಗವವಹಿಸುವುದಕ್ಕಾಗಿ ಮತ್ತು ಮೂರನೇಯದಾಗಿ 21 ಮಿಲಿಯನ್ ಡಾಲರ್ ಭಾರತದಲ್ಲಿ ಮತದಾನ ಹೆಚ್ಚಿಸುವುದಕ್ಕಾಗಿ. ಹೀಗೆ ಸುಖಾಸುಮ್ಮನೆ ಹರಿದು ಹೋಗಿತ್ತಿದ್ದ ನಮ್ಮ ತೆರಿಗೆದಾರರ ಹಣವನ್ನು ತಡೆಹಿಡಿಯಲಾಗಿದೆ ಎಂದು ಹೇಳಿದೆ.
ಈ ಒಂದು ಸುದ್ದಿ ಈಗ ಭಾರತದ ರಾಜಕೀಯ ಪಕ್ಷಗಳಿಗೆ ಶಾಕ್ ನೀಡಿದಂತೆ ಆಗಿದೆ. ಭಾರತದಲ್ಲಿ ಅಮೆರಿಕಾ ಏಕೆ ಮತದಾನ ಹೆಚ್ಚಳ ಮಾಡುವ ಬಯಕೆ ಹೊಂದಿದೆ. ಭಾರತದ ಚುನಾವಣೆಗೂ ಅಮೆರಿಕಾಗೂ ಏನು ಸಂಬಂಧ. ಅಷ್ಟಕ್ಕೂ ಈ ಹಣವನ್ನು ಪಡೆದವರು ಯಾರು ಎಂಬ ಪ್ರಶ್ನೆಗಳು ಮೂಡಿ ಬರುತ್ತಿವೆ.
ಗೆ ಹತ್ತಾರು ಪ್ರಶ್ನೆಗಳನ್ನು ಆಡಳಿತ ಪಕ್ಷದ ಬಿಜೆಪಿಯ ನಾಯಕರೇ ಕೇಳುತ್ತಿದ್ದಾರೆ. USAIDಯಿಮದ ವಿಶ್ವದ ಅತಿದೊಡ್ಡ ಹಗರಣ ನಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಹೇಳಿದ್ದಾರೆ.
ಇದನ್ನೂ ಓದಿ:Shocking news: ನಟಿ ಕಿಮ್ ಸೇ-ರಾನ್ ನಿಗೂಢ ಸಾವು.. 24 ವರ್ಷದ ಬ್ಯೂಟಿಗೆ ಏನಾಯ್ತು?
ಈ ಒಂದು ಪೋಸ್ಟ್ನಲ್ಲಿ ಭಾರತದ ಯಾವ ಸಂಸ್ಥೆ ಹಾಗೂ ಯಾವ ಘಟಕಗಳಿಗೆ ಇಷ್ಟು ಹಣ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿಲ್ಲ. ಇನ್ನು ಈ ಬಗ್ಗೆ ಮಾತನಾಡಿರದ ಬಿಜೆಪಿಯ ರಾಷ್ಟ್ರೀಯ ಐಟಿ ವಿಭಾಗದ ವಕ್ತಾರ ಅಮಿತ್ ಮಾಳವೀಯಾ ತಮ್ಮ ಎಕ್ಸ್ ಖಾತೆಯಲ್ಲಿ 21 ಮಿಲಿಯನ್ ಯುಎಸ್ ಡಾಲರ್ ಟರ್ನವರ್? ಇದು ನಿಜಕ್ಕೂ ಬಾಹ್ಯ ಶಕ್ತಿಗಳು ಭಾರತೀಯ ಚುನಾವಣಾ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶುತ್ತಿರವುಚುದಕ್ಕೆ ಉದಾಹರಣೆ. ಯಾರು ಇಷ್ಟು ಹಣವನ್ನು ಪಡದಿದ್ದಾರೆ. ಆಡಳಿತ ಪಕ್ಷವಂತೂ ಇದನ್ನು ಖಡಾಖಂಡಿತವಾಗಿ ಪಡೆದಿಲ್ಲ ಎಂದು ಹೇಳಿದ್ದಾರೆ.
ಇನ್ನು ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಪ್ರಜಾಪ್ರಭುತ್ವದಲ್ಲಿ ಬಾಹ್ಯಶಕ್ತಿಗಳ ಮಧ್ಯಪ್ರವೇಶಿಕೆಯ ದಟ್ಟವಾದ ಹೊಗೆಯೊಂದು ಕಂಡು ಬರುತ್ತಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ