/newsfirstlive-kannada/media/post_attachments/wp-content/uploads/2024/03/Elon-musk.jpg)
ಎಲೋನ್​ ಮಸ್ಕ್ ಒಡೆತನದ ನ್ಯೂರೋಟೆಕ್ನಾಲಜಿ​​ ಕಂಪನಿ ಎರಡನೇ ಬಾರಿಗೆ ಬ್ರೈನ್​ ಚಿಪ್​ ಅಳವಡಿಸುವ ಮೂಲಕ ಸಕ್ಸಸ್​​ ಕಂಡಿದೆ. ಪಾರ್ಶ್ವವಾಯು ಪೀಡಿತನಿಗೆ ನ್ಯೂರಾಲಿಂಕ್ ಚಿಪ್​ ಅಳವಡಿಸುವ ಮೂಲಕ ಆ ರೋಗಿಯನ್ನು ಸರಳವಾಗಿ ಯೋಚಿಸುವಂತೆ ಮಾಡಿದೆ.
ಮೊದಲ ಬಾರಿಗೆ ಬ್ರೈನ್​ ಚಿಪ್​ ಅಳವಡಿಸುವ ಮೂಲಕ ಸಕ್ಸಸ್​ ಕಂಡ ಎಲಾನ್​ ಮಸ್ಕ್​ ಒಡೆತನದ ಕಂಪನಿ ಎರಡನೇ ಬಾರಿಯೂ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ಮೊದಲ ರೋಗಿಯಂತೆ ಎರಡನೇ ರೋಗಿಗೂ ಬೆನ್ನುಹುರಿಯ ಗಾಯವಿತ್ತು ಎಂದು ಎಲಾನ್​ ಮಸ್ಕ್​ ಮಾಹಿತಿ ಹಂಚಿಕೊಂಡಿದ್ದಾರೆ.
ಡ್ರೈವಿಂಗ್​ ಅಪಘಾತದಲ್ಲಿ ವ್ಯಕ್ತಿ ಪಾರ್ಶ್ವವಾಯುಗೆ ಒಳಗಾಗಿದ್ದ ಮೊದಲ ರೋಗಿ ನೋಲ್ಯಾಂಡ್​​ ಅರ್ಬಾಗ್​​ ವಿಡಿಯೋ ಗೇಮ್​​ ಆಡಲು, ಇಂಟರ್​​​ನೆಟ್​​ ಬ್ರೌಸ್​ ಮಾಡಲು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಲು, ಲ್ಯಾಪ್​ಟಾಪ್​ ಒತ್ತಲು ಸಮರ್ಥರಾಗಿದ್ದಾರೆ.
ಇದನ್ನೂ ಓದಿ: ಇರೋದು ಒಂದೇ ಚಾನ್ಸ್​.. ಕ್ಯಾಪ್ಟನ್ ತಲೆಯಲ್ಲಿ ಹೊಸ ತಂತ್ರ.. ಆದರೂ ಕಾಡಿವೆ ಐದು ಪ್ರಶ್ನೆಗಳು..!
ಎರಡನೇ ರೋಗಿಗೆ ಇದೀಗ ಬ್ರೈನ್​ ಚಿಪ್​ ಅಳವಡಿಸಲಾಗಿದ್ದು, ಚಿಪ್​​ 400 ಎಲೆಕ್ಟ್ರೋಡ್​ಗಳಿಂದ ಕಾರ್ಯನಿರ್ವಹಿಸುತ್ತಿದೆಯಂತೆ. ಆದರೆ ನ್ಯೂರಾಲಿಂಕ್​​ ವೆಬ್​ಸೈಟ್ ಹೇಳಿರುವಂತೆ ಒಟ್ಟು 1,024 ಎಲೆಕ್ಟ್ರೋಡ್​​​​ಗಳನ್ನು ಬಳಸಲಾಗುತ್ತದೆ ಎಂದಿದೆ.
ಬ್ರೈನ್​ಚಿಪ್​ ಅಳವಡಿಸಿದ್ದ ಮೊದಲ ರೋಗಿ ಪಾಡ್​ಕಾಸ್ಟ್​ನಲ್ಲಿ ತನ್ನ ಅನುಭವವನ್ನು ಹಂಚಿಕೊಂಡಿದ್ದಾನೆ. ಇನ್ನು ಎರಡನೇ ರೋಗಿಯ ಶಸ್ತ್ರಚಿಕಿತ್ಸೆಯ ನಿಖರವಾದ ಮಾಹಿತಿಯನ್ನು ಎಲಾನ್​​ ಮಸ್ಕ್​ ಎಲ್ಲೂ ಬಹಿರಂಗ ಪಡಿಸಿಲ್ಲ. ಆದರೆ ಈ ಬಾರಿ ಸುಮಾರು 8 ರೋಗಿಗಳಿಗೆ ಬ್ರೈನ್​ ಚಿಪ್​ ಅಳವಡಿಸುವ ಯೋಚನೆಯನ್ನು ಎಲಾನ್​ ಮಸ್ಕ್​ ಕಂಪನಿ ಹೊಂದಿದೆ ಎಂದು ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us