/newsfirstlive-kannada/media/post_attachments/wp-content/uploads/2024/11/ELAN-MUSK-NET-WORTH-2.jpg)
ಟೆಸ್ಲಾ ಸಿಇಓ ಎಲಾನ್ ಮಸ್ಕ್​ ಭಾರತದ ಚುನಾವಣಾ ಪ್ರಕ್ರಿಯೆಯನ್ನು ಹಾಡಿ ಹೊಗಳಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಎಲಾನ್ ಮಸ್ಕ್. ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ಅದ್ಭುತವಾಗಿ ನಡೆಯುತ್ತದೆ. ಒಂದೇ ಒಂದು ದಿನದಲ್ಲಿ ಇಡೀ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯವನ್ನು ಮುಗಿಸುತ್ತಾರೆ. ಈ ಬಾರಿ ಬರೋಬ್ಬರಿ 64 ಕೋಟಿ ಮತಗಳನ್ನು ಒಂದೇ ದಿನದಲ್ಲಿ ಎಣಿಕೆ ಮಾಡಿದ ಶ್ರೇಯ ಭಾರತದ್ದು ಎಂದಿದ್ದಾರೆ.
ಕ್ಯಾಲಿಫೋರ್ನಿಯಾದಲ್ಲಿ ಚುನಾವಣೆಯ ಫಲಿತಾಂಶ ವಿಳಂಬಾಗಿದ್ದರ ವಿಚಾರವಾಗಿ ಎಲಾನ್ ಮಸ್ಕ್​ ತಮ್ಮ ಎಕ್ಸ್ ಖಾತೆಯಲ್ಲಿ ಈ ಒಂದು ಪೋಸ್ಟ್​ನ್ನು ಹಾಕಿದ್ದಾರೆ. ಅದರ ಅಡಿಬರಹದಲ್ಲಿ, ಭಾರತದಲ್ಲಿ ಚುನಾವಣೆ ಎಂದರೆ ವಂಚನೆಯೇ ಮೊದಲ ಗುರಿ ಇರುವಲ್ಲಿ ಒಂದೇ ಒಂದು ದಿನದಲ್ಲಿ 64 ಕೋಟಿ ಮತಗಳನ್ನು ಎಣಿಕೆ ಮಾಡಿದ್ದಾರೆ ಆದ್ರೆ ಕ್ಯಾಲಿಫೋರ್ನಿಯಾದಲ್ಲಿ ಇನ್ನೂ ಕೂಡ ಮತಗಳು ಎಣಿಕೆ ಆಗುತ್ತಲೇ ಇವೆ ಎಂದು ಹೇಳಿದ್ದಾರೆ.
ಕಳೆದ 18 ದಿನಗಳಿಂದ ಕ್ಯಾಲಿಫೋರ್ನಿಯಾದಲ್ಲಿ ಮತ ಎಣಿಕೆಯ ಕಾರ್ಯ ನಡೆಯುತ್ತಿದೆ. ಆದ್ರೆ ಇನ್ನೂ ಕೂಡ ಸಂಪೂರ್ಣಗೊಂಡಿಲ್ಲ. ಇದೇ ವಿಚಾರವಾಗಿ ಎಲಾನ್​ ಮಸ್ಕ್​ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.
/newsfirstlive-kannada/media/post_attachments/wp-content/uploads/2024/11/ELAN-MUSK.jpg)
ಕ್ಯಾಲಿಫೋರ್ನಿಯಾದಲ್ಲಿ ಮತ ಎಣಿಕೆ ಕಾರ್ಯ ಏಕೆ ವಿಳಂಬವಾಗುತ್ತಿದೆ ಎಂದು ನೋಡಿದರೆ. ಈ ಒಂದು ನಗರದಲ್ಲಿ 3 ಕೋಟಿ 90 ಲಕ್ಷ ಜನರು ವಾಸಿಸುತ್ತಾರೆ. ಅದರಲ್ಲಿ 1 ಕೋಟಿ 60 ಲಕ್ಷ ಜನರು ಮತದಾರರಿದ್ದಾರೆ. ಅವುಗಳಲ್ಲಿ ಇಂದಿಗೂ ಕೂಡ 3 ಲಕ್ಷಕ್ಕೂ ಅಧಿಕ ಮತಗಳ ಎಣಿಕೆ ಕಾರ್ಯ ಮುಗಿದಿಲ್ಲ ಎಂದು ಹೇಳಲಾಗುತ್ತಿದೆ. ಮತ್ತೊಂದು ವರದಿಯ ಪ್ರಕಾರ ಕ್ಯಾಲಿಫೋರ್ನಿಯಾದಲ್ಲಿ ಇನ್ನೂ 5 ಲಕ್ಷ 70 ಸಾವಿರ ಮತಗಳ ಎಣಿಕೆ ಕಾರ್ಯ ನಡೆಯಬೇಕಿದೆ ಎಂದು ಹೇಳಲಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಕ್ಯಾಲಿಫೋರ್ನಿಯಾದಲ್ಲಿ ಬರುವ ಮೇಲ್ ಇನ್ ವೋಟಿಂಗ್​ನಂತಹ ವ್ಯವಸ್ಥೆ.
ಇದನ್ನೂ ಓದಿ:ಭಾರತದ ಡ್ರೈವಿಂಗ್ ಲೈಸೆನ್ಸ್‌ನಲ್ಲಿ ನೀವು ಈ 7 ದೇಶಗಳಲ್ಲಿ ವಾಹನ ಚಲಾಯಿಸಬಹುದು; ಯಾವುವು ಗೊತ್ತಾ?
ಈ ರೀತಿಯ ಒಂದೊಂದು ಮೇಲ್ ವೋಟ್​ಗಳ ಎಣಿಕೆ ಮಾಡುವಾಗ ಅನೇಕ ರೀತಿಯ ಪ್ರಕ್ರಿಯೆಗಳನ್ನು ಮಾಡಿ ಮುಗಿಸಬೇಕಾಗುತ್ತದೆ ಇದೇ ಕಾರಣದಿಂದಾಗಿಯೇ ಎಣಿಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತದೆ. ಈ ಒಂದು ಸಮಸ್ಯೆಯನ್ನು ಅಮೆರಿಕಾ ಹಲವು ವರ್ಷಗಳಿಂದ ಅನುಭವಿಸುತ್ತಾ ಬಂದಿದೆ. ನಗರದ ಗಾತ್ರ ಹಾಗೂ ಬಂದು ಬೀಳುವ Mail Vote ಗಳು ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತದೆ.ಇದೇ ವಿಳಂಬ ನೀತಿಯನ್ನು ಟೀಕಿಸಿರುವ ಎಲಾನ್ ಮಸ್ಕ್ ಭಾರತದ ಉದಾಹರಣೆಯನ್ನು ಅಮೆರಿಕಾಗೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us