/newsfirstlive-kannada/media/post_attachments/wp-content/uploads/2025/02/Tesla-Car-price-in-India.jpg)
ಭಾರತ ಅತಿ ದೊಡ್ಡ ಮಾರುಕಟ್ಟೆ ಉದ್ಯಮಿಗಳನ್ನ ಆಕರ್ಷಿಸುತ್ತಿದೆ. ಜಗತ್ತಿನ ಅತ್ಯಂತ ಸಿರಿವಂತ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಭಾರತಕ್ಕೆ ಎಂಟ್ರಿ ಕೊಡೋದು ಪಕ್ಕಾ ಆಗಿದೆ. ಇತ್ತೀಚಿಗೆ ಪ್ರಧಾನಿ ಮೋದಿ ಭೇಟಿಯಾದ ಬಳಿಕ ಟೆಸ್ಲಾ ಸಂಸ್ಥೆ ಭಾರತದಲ್ಲಿ ಹಲವು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಇದರ ಜೊತೆ ಟೆಸ್ಲಾ ಕಾರನ್ನು ಕೊಳ್ಳಲು ಭಾರತೀಯರು ಉತ್ಸುಕರಾಗಿದ್ದಾರೆ.
ಏಪ್ರಿಲ್‌ನಿಂದ ಭಾರತದಲ್ಲಿ ಟೆಸ್ಲಾ ಮಾರಾಟ ಆರಂಭ?
2 ಮಹಾನಗರಗಳಲ್ಲಿ ಮಾತ್ರ ಮೊದಲು ಟೆಸ್ಲಾ ಸೇಲ್!
ಭಾರತದ ರಸ್ತೆಗಳ ಮೇಲೆ ಇನ್ಮುಂದೆ ಟೆಸ್ಲಾ ಸದ್ದು ಕೇಳಲಿದೆ. ದೇಶದ ಕಾರು ಮಾರುಕಟ್ಟೆಯನ್ನು ಪ್ರವೇಶಿಸುವತ್ತ ಟೆಸ್ಲಾ ಮಹತ್ವದ ಹೆಜ್ಜೆ ಇಟ್ಟಿದೆ. ಬಹು ನಿರೀಕ್ಷಿತ ಅಮೆರಿಕದ ಎಲೆಕ್ಟ್ರಿಕ್ ವಾಹನ ದೈತ್ಯ ಟೆಸ್ಲಾ ಭಾರತದಲ್ಲಿ ಹಲ್‌ಚಲ್ ಎಬ್ಬಿಸಲು ಸಜ್ಜಾಗಿದೆ. ಸದ್ಯದಲ್ಲೇ ಭಾರತದಲ್ಲಿ ಟೆಸ್ಲಾ ಕಾರುಗಳ ತಯಾರಿಕೆ ಆರಂಭವಾಗಲಿದೆ. ಕೆಲವೇ ತಿಂಗಳಲ್ಲಿ ಮಾರ್ಕೆಟ್‌ಗೆ ಟೆಸ್ಲಾ ಕಾರುಗಳು ಲಗ್ಗೆ ಇಡಲಿವೆ. ಹಾಗಾದ್ರೆ ಯಾವಾಗ ಟೆಸ್ಲಾ ಮಾರುಕಟ್ಟೆಗೆ ಬರುತ್ತೆ? ಅದರ ಆನ್‌ರೋಡ್ ಪ್ರೈಸ್ ಎಷ್ಟು? ಎಲ್ಲೆಲ್ಲಿ ಲಭ್ಯ?
ಭಾರತದಲ್ಲಿ ‘ಟೆಸ್ಲಾ’ ಹವಾ!
ಭಾರತದಲ್ಲಿ ಇದೇ ವರ್ಷದ ಏಪ್ರಿಲ್‌ನಿಂದ ಟೆಸ್ಲಾ ಕಾರುಗಳು ಮಾರಾಟ ಪ್ರಾರಂಭ ಆಗುವ ನಿರೀಕ್ಷೆ ಇದೆ. ಆರಂಭದಲ್ಲಿ ಟೆಸ್ಲಾ ಕಾರುಗಳನ್ನ ಭಾರತಕ್ಕೆ ಆಮದು ಮಾಡಿಕೊಂಡು ಮಾರಾಟ ಮಾಡಲು ಕಂಪನಿ ಸಜ್ಜಾಗಿದೆ. ಮೊದಲು ಜರ್ಮನಿಯ ಬರ್ಲಿನ್‌ನಿಂದ ಟೆಸ್ಲಾ ಕಾರುಗಳನ್ನ ಆಮದು ಮಾಡಿಕೊಳ್ಳಲಾಗುತ್ತದೆ ಎಂಬ ಮಾಹಿತಿ ಇದೆ.
ಇದನ್ನೂ ಓದಿ: ಭಾರತಕ್ಕೆ ಬರ್ತಿದೆ ಟೆಸ್ಲಾ ಎಲೆಕ್ಟ್ರಿಕ್ ಕಾರು.. 13 ಹುದ್ದೆಗಳ ಭರ್ತಿಗೆ ಆಹ್ವಾನ; ಇಲ್ಲಿದೆ ಕಂಪ್ಲೀಟ್ ಮಾಹಿತಿ
ಅಮೆರಿಕದಲ್ಲಿ ಟೆಸ್ಲಾದ ಕಡಿಮೆ ಬೆಲೆ ಕಾರು ಅಂದ್ರೆ ಅದು ಮಾಡೆಲ್- 3. ವಿದ್ಯುತ್ ಚಾಲಿತ ಈ ಕಾರಿಗೆ ಭಾರತ ಆಮದು ಸುಂಕ ಝೀರೋ ಮಾಡಿದ್ರೆ ಇದರ ಬೆಲೆ ಇಂಡಿಯನ್ ಕರೆನ್ಸಿಯಲ್ಲಿ 30 ಲಕ್ಷ ರೂಪಾಯಿ ಆಗಿರಲಿದೆ. ರೋಡ್ ಟ್ಯಾಕ್ಸ್ , ಇನ್ಶೂರೆನ್ಸ್ ಸೇರಿ 35ರಿಂದ 40 ಲಕ್ಷ ರೂಪಾಯಿ ಬೆಲೆ ಆಗಿರಲಿದೆ.
ಸದ್ಯಕ್ಕೆ ಆಮದು ಬಳಿಕ ಟೆಸ್ಲಾ ಪ್ರೊಡಕ್ಷನ್ ಆರಂಭವಾಗಲಿದೆ. ಭಾರತದಲ್ಲಿ ಮೂರು ಘಟಕಗಳನ್ನ ತೆರೆಯಲು ಟೆಸ್ಲಾ ಕಂಪನಿ ನಿರ್ಧರಿಸಿದೆ. ಗುಜರಾತ್ & ಆಂಧ್ರ ಪ್ರದೇಶದಲ್ಲಿ ತಲಾ ಒಂದು ಘಟಕ ಓಪನ್ ಆಗಲಿದೆ.
ಟೆಸ್ಲಾ ಕಂಪನಿ ಮುಂಬೈ, ದೆಹಲಿ, ಹೈದರಾಬಾದ್ ಸೇರಿ 3-4 ನಗರಗಳಲ್ಲಿ ಶೋ ರೂಮ್ ತೆರೆಯಲಿದ್ದು, ಉದ್ಯೋಗವಕಾಶ ಸೃಷ್ಟಿ ಆಗಲಿದೆ. ಭಾರತದಲ್ಲಿ ಟೆಸ್ಲಾ ಆಗಮನ ಇತರೆ ಕಾರು ಉತ್ಪಾದನಾ ಕಂಪನಿಗಳ ಜೊತೆ ತೀವ್ರ ಪೈಪೋಟಿ ಏರ್ಪಡಲಿದೆ. ದರ ಸಮರ, ಕ್ವಾಲಿಟಿ, ಹೊಸ ತಂತ್ರಜ್ಞಾನ, ಸುರಕ್ಷತೆ ವಿಚಾರದಲ್ಲಿ ಕಾಂಪಿಟೇಷನ್ ತೀವ್ರಗೊಳ್ಳೋದು ಪಕ್ಕಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ