ಡೊನಾಲ್ಡ್‌ ಟ್ರಂಪ್ ಪದಗ್ರಹಣದ ಜೋಶ್.. ಕುಣಿದು ಕುಪ್ಪಳಿಸಿದ ಎಲಾನ್ ಮಸ್ಕ್​; ವಿಡಿಯೋ ವೈರಲ್!

author-image
Gopal Kulkarni
Updated On
ಡೊನಾಲ್ಡ್‌ ಟ್ರಂಪ್ ಪದಗ್ರಹಣದ ಜೋಶ್.. ಕುಣಿದು ಕುಪ್ಪಳಿಸಿದ ಎಲಾನ್ ಮಸ್ಕ್​; ವಿಡಿಯೋ ವೈರಲ್!
Advertisment
  • ಟ್ರಂಪ್ ಪದಗ್ರಹಣ ಪೂರ್ವ ಱಲಿಯ ಜೋಶ್​​ನಲ್ಲಿ ಎಲಾನ್ ಮಸ್ಕ್
  • ನೆರೆದಿದ್ದ ಜನಸಮೂಹವನ್ನು ಹುರಿದುಂಬಿಸಲು ಡ್ಯಾನ್ಸ್ ಮಾಡಿದ ಮಸ್ಕ್
  • ವಿಶ್ವದ ಅತ್ಯಂತ ಶ್ರೀಮಂತ ಎಲಾನ್​ ಮಸ್ಕ್ ಡ್ಯಾನ್ಸ್ ವಿಡಿಯೋ ವೈರಲ್

ಟ್ರಂಪ್ ಗೆಲುವಿಗಾಗಿ ಹಂಬಲಿಸಿದ ವ್ಯಕ್ತಿಗಳಲ್ಲಿ ವಿಶ್ವದ ಅತ್ಯಂತ ಶ್ರೀಮಂತ ಎಲಾನ್ ಮಸ್ಕ್ ಕೂಡ ಒಬ್ಬರು. ಟ್ರಂಪ್ ಚುನಾವಣೆ ಪ್ರಚಾರದಲ್ಲಿಯೂ ಕೂಡ ಅಷ್ಟೇ ಕ್ರಿಯಾಶೀಲರಾಗಿ ಭಾಗವಹಿಸಿದ್ದರು. ಅವರ ಗೆಲುವಿಗಾಗಿ ಅವರ ಶಕ್ತಿಯಾಗಿ ನಿಂತಿದ್ದರು. ಸದ್ಯ ಟ್ರಂಪ್ ಗೆದ್ದಾಗಿದೆ. ಪ್ರಮಾಣ ವಚನವನ್ನೂ ಸ್ವೀಕಾರ ಮಾಡಿ ಆಗಿದೆ. ಇದರ ನಡುವೆ ಒಂದು ವಿಡಿಯೋ ಸದ್ಯ ದೊಡ್ಡದಾಗಿ ವೈರಲ್ ಆಗುತ್ತಿದೆ. ಪದಗ್ರಹಣದ ಬಳಿಕ ನಡೆದ ಱಲಿಯಲ್ಲಿ ಎಲಾನ್ ಮಸ್ಕ್ ಕುಣಿದು ಕುಪ್ಪಳಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ:ಒಬಾಮಾರಿಂದ ಬೇರೆಯಾದರಾ ಮಿಚೆಲ್?​: ಟ್ರಂಪ್ ಪ್ರಮಾಣ ವಚನಕ್ಕೆ ಏಕಾಂಗಿಯಾಗಿ ಬಂದಿದ್ದೇಕೆ ಮಾಜಿ ಅಧ್ಯಕ್ಷ?

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ನೆರೆದಿದ್ದ ಜನಸಮೂಹವನ್ನು ಚೀಯರ್​ ಅಪ್ ಮಾಡಲು ಸ್ಟೇಜ್​ ಮೇಲೆ ಬಂದು ಎರಡು ಕೈಗಳನ್ನು ಮುಷ್ಠಿ ಮಾಡಿ ಯೆಸ್ ಯೆಸ್ ಎಂದು ಚೀರುತ್ತಾ ಕುಣಿದರು. ಅವರ ಈ ಜೋಶ್ ನೋಡಿ ನೆರೆದಿದ್ದ ಜನರ ಸಂಭ್ರಮ ಮುಗಿಲು ಮುಟ್ಟಿತ್ತು.


">January 21, 2025

53 ವರ್ಷದ ಎಲಾನ್ ಮಸ್ಕ್​ ಅಮೆರಿಕಾದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು. ಟೆಸ್ಲಾದ ಮುಖ್ಯಸ್ಥ ಯುಎಸ್​​ನ ಅಧ್ಯಕ್ಷರಾಗಿ ಟ್ರಂಪ್ ಆಯ್ಕೆಯಾಗಿದ್ದಕ್ಕೆ ಖುಷಿ ಇಮ್ಮಡಿಯಾಗಿದೆ. ಟ್ರಂಪ್ ಗೆದ್ದ ದಿನದಿಂದಲೇ ಅವರ ಕಂಪನಿಗಳ ಶೇರ್​ ಮೌಲ್ಯ ಮುಗಿಲು ಮುಟ್ಟಿತ್ತು. ಏಕಾಏಕಿ ಆಸ್ತಿಯಲ್ಲಿ ಸಾವಿರಾರು ಪಟ್ಟು ಏರಿಕೆಯಾಗಿತ್ತು. ಅಂತಹ ಮಸ್ಕ್​ ಈಗ ಡೊನಾಲ್ಡ್​ ಟ್ರಂಪ್ ಕಾರ್ಯಕ್ರಮದಲ್ಲಿ ಜನರನ್ನು ಹುರಿದುಂಬಿಸಲು ಮಾಡಿದ ಡಾನ್ಸ್ ದೊಡ್ಡದಾಗಿ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment