/newsfirstlive-kannada/media/post_attachments/wp-content/uploads/2025/03/Shivon-Zilis-and-elon-musk.jpg)
ಎಲಾನ್ ಮಸ್ಕ್ ತಮ್ಮ ಬಾಹ್ಯಾಕಾಶ ಕ್ಷೇತ್ರ ಹಾಗೂ ಕೃತಕ ಬುದ್ಧಿಮತ್ತೆಯ ಬಗ್ಗೆ ದೊಡ್ಡ ಕನಸು ಇಟ್ಟುಕೊಂಡಿರುವ ಮಹತ್ವಾಕಾಂಕ್ಷಿ ಉದ್ಯಮಿ ಎಂತಲೇ ಎಲ್ಲರಿಗೂ ಗೊತ್ತು. ಆದರೆ ಅವರಿಗೆ ಇನ್ನೊಂದು ಹೆಸರು ಇದೆ ಅದು 14 ಮಕ್ಕಳ ಜನಕ ಎಂದು. ನ್ಯೂರಾಲಿಂಕ್ನ ಕಾರ್ಯದರ್ಶಿಯಾಗಿರುವ ಶಿವೊನ್ ಜಿಲಿಸ್ ಜೊತೆ ಈಗಾಗಲೇ ಮಸ್ಕ್ ಮೂರು ಮಕ್ಕಳನ್ನು ಹೊಂದಿದ್ದಾರೆ. ಈಗ ನಾಲ್ಕನೇ ಮಗು, ಗಂಡು ಬಂದಿದೆ ಎಂದು ಈ ಜೋಡಿ ಅಧಿಕೃತವಾಗಿ ಹೇಳಿಕೊಂಡಿದೆ.
ಆರ್ಕಾಡಿಯಾ ಹುಟ್ಟುಹಬ್ಬದ ದಿನದಂದು ನಾನು ಎಲಾನ್ ಮಸ್ಕ್ ಜೊತೆ ಮಿನುಗು ದೀಪಗಳ ಹೊಳೆಯುವ ಸಂಭ್ರಮದ ರಾತ್ರಿಯಲ್ಲಿ ಚರ್ಚೆ ಮಾಡಿದೆ. ನಾವು ನಮ್ಮ ಮನೆಗೆ ಬರುತ್ತಿರುವ ಮತ್ತೊಬ್ಬ ಮಗ ಸೆಲ್ಡಾನ್ ಲೈಕರ್ಗಸ್ ಬಂದಿರುವ ವಿಚಾರವನ್ನು ನೇರವಾಗಿ ಹೇಳುವುದಾಗಿ ನಿರ್ಧರಿಸಿದ್ದೇವು ಎಂದು ಜಿಲಿಸ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಈ ಒಂದು ಅಧಿಕೃತ ಹೇಳಿಕೆ ಎಲಾನ್ ಮಸ್ಕ್ನ ವೈಯಕ್ತಿಕ ಬದುಕಿನ ಮತ್ತೊಂದು ಅಧ್ಯಾಯವನ್ನು ತೆರೆದಿಟ್ಟಿದೆ. ಸಂತಾನಭಿವೃದ್ಧಿಯೆಂಬುವುದು ಸಾಮಾಜಿಕ ಕರ್ತವ್ಯ ಎಂಬ ಅವರ ನಂಬಿಕೆಯಂತೆ ಮಸ್ಕ್ ಕುಟುಂಬ ಬೆಳೆಯುತ್ತಲೇ ಇದೆ.
ಇದನ್ನೂ ಓದಿ:ಆಸ್ಕರ್ ಪ್ರಶಸ್ತಿ ವಿಜೇತ ಜೀನ್ ಹ್ಯಾಕ್ಮನ್ ನಿಗೂಢ ಸಾವು.. ಪತ್ನಿ, ನಾಯಿ ಜೊತೆ ಶವವಾಗಿ ಪತ್ತೆ; ಆಗಿದ್ದೇನು?
ಎಲಾನ್ ಮಸ್ಕ್ ಮತ್ತು ಜಿಲಿಸ್ ಮೊದಲ ಬಾರಿ 2021ರಲ್ಲಿ ಇನ್ ಫಿಟ್ರೋ ಫರ್ಟಿಲೈಜೆಷನ್ (IVF) ಮೂಲಕ ಅವಳಿ ಜವಳಿ ಮಕ್ಕಳನ್ನು ಸ್ವಾಗತಿಸಿದ್ದರು ಅವರ ಹೆಸರು ಸ್ಟ್ರೈಡರ್ ಮತ್ತು ಅಜ್ಯುರ್ ಎಂದು. ನಂತರ ಮೂರನೇ ಮಗು ಆರ್ಕಾಡಿಯಾ 2024ರಲ್ಲಿ ಜನಿಸಿತು. ಮಗು ಜನಿಸಿದ ಒಂದು ತಿಂಗಳ ಬಳಿಕ ಇದರ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದರು ಎಲಾನ್ ಮಸ್ಕ್.
ಜಿಲಿಸ್, ನ್ಯೂರಾಲಿಂಕ್ನ ಆರ್ಟಿಫಿಷಿಯಲ್ ಇಂಟಲಿಜೆನ್ಸ್ನ ಪ್ರಮುಖ ತಜ್ಞೆ. ಈಗಾಗಲೇ ಅವರು ನಾನು ಏಕೆ ಎಲಾನ್ ಮಸ್ಕ್ ಜೊತೆ ಸೇರಿ ಮಕ್ಕಳನ್ನು ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ವಾಲ್ಟರ್ ಐಸಾಕ್ಸನ್ ಅವರ ಆತ್ಮಕತೆಯಲ್ಲಿ ಅವರು ಹೇಳಿರುವ ಪ್ರಕಾರ. ಮಸ್ಕ್ ಮಕ್ಕಳನ್ನು ಹೊಂದಲು ಅತ್ಯಂತ ಸ್ಮಾರ್ಟ್ ಯುವತಿಯರನ್ನು ಹುಡುಕುತ್ತಾರಂತೆ. ಹೀಗಾಗಿ ಅವರೇ ನನ್ನಲ್ಲಿ ಧೈರ್ಯ ತುಂಬಿದರು. ವಿರ್ಯದಾನ ಮಾಡುವ ಅವರ ಆಯ್ಕೆಯನ್ನು ಇಡೀ ಜಗತ್ತೆ ಕೊಂಡಾಡುತ್ತದೆ. ಇದು ನನಗೆ ತುಂಬಾ ಸರಳವಾದ ನಿರ್ಧಾರ ಅಂತ ಅನಿಸುತ್ತೆ. ಇದರೊಂದಿಗೆ ಮತ್ತೊಂದು ಮಾತು ಹೇಳಿರುವ ಜಿಲಿಸ್ ನಾನು ನನಗೆ ವಂಶವಾಹಿ ಮಕ್ಕಳು ಇರಬೇಕು ಅಂತ ಎಂದಿಗೂ ಕೂಡ ಯೋಚನೆ ಮಾಡಿದವಳಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕ್ರೆಡಿಟ್ ಕಾರ್ಡ್ ಕದ್ದ ಕಳ್ಳರಿಗೆ ಹೊಡೀತು ಜಾಕ್ಪಾಟ್! ಕೋರ್ಟ್ ಮೆಟ್ಟಿಲೇರಿದ್ದೇಕೆ ಮಾಲೀಕ?
ಜಿಲಿಸ್ನ ಈ ಒಂದು ಹೇಳಿಕೆ ಇತ್ತೀಚೆಗೆ ಆಶ್ಲೇ ಎಸ್ ಕ್ಲೇರ್ ನನ್ನ ಮಗುವಿನ ತಂದೆ ಎಲಾನ್ ಮಸ್ಕ್ ಎಂದು ನೀಡಿದ ಹೇಳಿಕೆಯ ಎರಡು ವಾರದ ಬೆನ್ನಲ್ಲಿಯೇ ಬಂದಿದೆ. 14 ಫೆಬ್ರವರಿ 2025 ರಂದು ನನ್ನ ಮಗುವಿನ ತಂದೆ ಎಲಾನ್ ಮಸ್ಕ್ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದರು.
ಐದು ತಿಂಗಳ ಹಿಂದೆ ನಾನು ನನ್ನ ಮಗುವನ್ನು ವಿಶ್ವಕ್ಕೆ ಪರಿಚಯಿಸಿದ್ದೆ. ಈ ಮಗುವಿನ ತಂದೆ ಎಲಾನ್ ಮಸ್ಕ್, ಮಗುವಿನ ಖಾಸಗಿತನಕ್ಕೆ ಧಕ್ಕೆ ಬರಬಾರದು ಎಂಬ ಒಂದೇ ಕಾರಣಕ್ಕೆ ನಾನು ಇದುವರೆಗೂ ಈ ಬಗ್ಗೆ ಎಲ್ಲಿಯೂ ವಿಷಯವನ್ನು ಬಹಿರಂಗಪಡಿಸಿರಲಿಲ್ಲ. ಇತ್ತೀಚೆಗೆ ಟಾಬ್ಲಾಯ್ಡ್ ಮೀಡಿಯಾಗಳಲ್ಲಿ ಈ ಸುದ್ದಿ ಜೋರಾದ ಕಾರಣ ನಾನೇ ಇದರ ಬಗ್ಗೆ ಸ್ಪಷ್ಟನೆ ನೀಡಿದೆ ಎಂದು ಹೇಳಿಕೊಂಡಿದ್ದರು.
ಇದೇ ವಿಚಾರವಾಗಿ ಕ್ಲೈರ್ ಮಸ್ಕ್ ಕಾನೂನಾತ್ಮವಾಗಿ ಈ ಮಗುವಿನ ತಂದೆ ಎಂದು ಒಪ್ಪಿಕೊಳ್ಳಬೇಕು ಎಂದು ಕೋರ್ಟ್ನಲ್ಲಿ ಪೋಷಕ ಅಥವಾ ಪಿತೃತ್ವಕ್ಕೆ ಸಂಬಂಧಿಸಿದ ಅರ್ಜಿಯನ್ನು ಸಲ್ಲಿಸಿದ್ದರು. ಇದರ ಬಗ್ಗೆ ಮಾತನಾಡಿದ್ದ ಕ್ಲೈರ್ ಪ್ರತಿನಿಧಿ ಬ್ರೈನ್ ಗ್ಲಿಕ್ಲಿಚ್ ಆಶ್ಲೇ ಹಾಗೂ ಎಲಾನ್ ಮಸ್ಕ್ ಖಾಸಗಿಯಾಗಿ ತಮ್ಮ ಮಗುವನ್ನು ಬೆಳೆಸುವ ಕುರಿತು ಒಂದ ಒಪ್ಪಂದವನ್ನು ಮಾಡಿಕೊಂಡಿದ್ದರು. ಹೀಗಾಗಿ ನಾವು ಎಲಾನ್ ಮಸ್ಕ್ ಈ ಮಗು ನನ್ನದು ಎಂದು ಒಪ್ಪಿಗೆ ನೀಡುವುದಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದರು.
ಬೆಳೆಯುತ್ತಲೇ ಇದೆ ಎಲಾನ್ ಮಸ್ಕ್ನ ವಂಶವೃಕ್ಷ
ಎಲಾನ್ ಮಸ್ಕ್ನ ವಂಶವೃಕ್ಷವು ದಿನೇ ದಿನೇ ಅವನ ಉದ್ಯಮ ಸಾಮ್ರಾಜ್ಯದ ರೀತಿಯಲ್ಲಿಯೇ ಬೆಳೆಯುತ್ತಿದೆ. ಹಲವಾರು ಸಂಬಂಧಗಳೊಂದಿಗೆ ಮಸ್ಕನ ಕುಟುಂಬ ವೃಕ್ಷವು ವಿಸ್ತಾರಗೊಳ್ಳುತ್ತಿದೆ. ಮಸ್ಕ್ ಅವರ ಮೊದಲ ಪತ್ನಿ ಕೆನಡಿಯನ್ ಲೇಖಕಿ ಜಸ್ಟೈನ್ ವಿಲ್ಸನ್, ಇವರು ಎಲಾನ್ ಮಸ್ಕ್ನ ಒಟ್ಟು ಆರು ಮಕ್ಕಳಿಗೆ ಜನ್ಮ ನೀಡಿದ್ದರು. ಅದರಲ್ಲಿ ಒಂದು ಅವಳಿ ಜವಳಿ ಕೂಡ ಸೇರಿತ್ತು ಅವರ ಹೆಸರು ಗ್ರಿಫಿನ್ ಮತ್ತು ವಿವೈನ್ ಮತ್ತು ತ್ರಿವಳಿಗಳಾದ ಕಾಯ್, ಸೆಕ್ಸಾನ್ ಮತ್ತು ಡಮಿಯನ್. ಅವರ ಮೊದಲ ಮಗುವಿನ ಹೆಸರು ನೆವಡಾ. ಆದ್ರೆ ಆ ಮಗು 10 ವಾರದಲ್ಲಿದ್ದಾಗಲೇ ಮಾರಣಾಂತಿಕ ಕಾಯಿಲೆಗೆ ತುತ್ತಾಗಿ ಜೀವಬಿಟ್ಟಿತ್ತು.
ಇದರಾಚೆ ಮಸ್ಕ್ಗೆ ಜೈವಿಕವಾಗಿ ಅನೇಕ ಮಕ್ಕಳು ಇದ್ದಾರೆ. ಮಸ್ಕ್ ಅವರ ತತ್ವಶಾಸ್ತ್ರದ ಪ್ರಕಾರ ಸಂತಾನೋತ್ಪತ್ತಿ ಎಂಬುದು ಒಂದು ಅದ್ಭುತವಾದ ಕೆಲಸ ಎಂದು 2022ರಲ್ಲಿ ಹೇಳಿದ್ದರು. ಅದು ಮಾತ್ರವಲ್ಲ ನಾನು ಜನಸಂಖ್ಯಾ ಕುಸಿತ ಸಂಘರ್ಷಕ್ಕಾಗಿ ಸಹಾಯ ಮಾಡುತ್ತಿದ್ದೇನೆ. ಜನನ ಪ್ರಮಾಣ ಕಡಿಮೆಯಾಗುವುದು ಒಂದು ನಾಗರಿಕತೆಗೆ ಬಹುದೊಡ್ಡ ಅಪಾಯ ಎಂದು ಕೂಡ ಹೇಳಿದ್ದರು.
2020ರಲ್ಲಿ ಗಾಯಕಿ ಗ್ರಿಮ್ಸ್ ಜೊತೆ ಸೇರಿ ಮಸ್ಕ್ ಎರಡು ಮಕ್ಕಳಿಗೆ ತಂದೆಯಾಗಿದ್ದರು. ನಂತರ ಎಕ್ಸಾ ಡಾರ್ಕ್ ಸಿಡೆರಿಯಲ್ ಹಾಗೂ ಟೆಕ್ನೋ ಮೆಕ್ಯಾನಿಕಸ್ ಜೊತೆಗೆ ಬಾಡಿಗೆ ತಾಯ್ತನದ ಮೂಲಕ ಮತ್ತೆರಡು ಮಕ್ಕಳನ್ನು ಪಡೆದರು. ಇಂದಿಗೂ ಕೂಡ ಆ ಮಾಜಿ ಜೋಡಿಗಳು ಕಾನೂನು ಹೋರಾಟದಲ್ಲಿ ಮುಳುಗಿವೆ.
ಮುಂದೆ ಜಿಲಿಸ್ ಜೊತೆ ಸೇರಿ 2021ರಲ್ಲಿ ಸ್ಟ್ರೈಡರ್ ಸೆಖರ್ ಸಿರೈಸ್ ಮತ್ತು ಅಜ್ಯುರ್ ಎಂಬ ಅವಳಿಜವಳಿ ಮಕ್ಕಳನ್ನು ಪಡೆದರು. 2024ರಲ್ಲಿ ಆರ್ಕಾಡಿಯಾ ಜನನವಾಯ್ತು ಈಗ ಮತ್ತೊಂದು ಮಗು ಸೆಲ್ಡಾನ್ ಲೈಕರ್ಗಸ್ ಕೂಡ ಬಂದಿದ್ದಾನೆ. ಈ ಮೂಲಕ ಎಲಾನ್ ಮಸ್ಕ್ ಒಟ್ಟು 14 ಮಕ್ಕಳಿಗೆ ತಂದೆಯಾಗುವ ಮೂಲಕ 14 ಮಕ್ಕಳ ಜನಕ ಎಂಬ ಬಿರುದನ್ನು ತನ್ನದಾಗಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ