ಸುನಿತಾ ವಿಲಿಯಮ್ಸ್ ಕರೆತರಲು NASA ಪ್ಲಾನ್; ಇಲ್ಲಿ ಎಲಾನ್ ಮಸ್ಕ್​ ಅವರ SpaceX ಕೆಲಸ ಏನು..?

author-image
Ganesh
Updated On
ಸುನಿತಾ ವಿಲಿಯಮ್ಸ್ ಕರೆತರಲು NASA ಪ್ಲಾನ್; ಇಲ್ಲಿ ಎಲಾನ್ ಮಸ್ಕ್​ ಅವರ SpaceX ಕೆಲಸ ಏನು..?
Advertisment
  • ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿರುವ ಗಗನಯಾನಿ ಸುನಿತಾ ವಿಲಿಯಮ್ಸ್
  • ಇಬ್ಬರು ಗಗನಯಾನಿಗಳ ವಾಪಸ್ ಭೂಮಿಗೆ ಕರೆತರಲು ಎಲ್ಲಿಲ್ಲದ ಪ್ರಯತ್ನ
  • NASAದ ಪ್ಲಾನ್​ಗಳು ವಿಫಲ, ಎಲಾನ್ ಮಸ್ಕ್ ಕಂಪನಿ ಜೊತೆ ಮಾತುಕತೆ

NASA.. ಹೇಳೋಕೆ ವಿಶ್ವದ ಅತಿದೊಡ್ಡ ಬಾಹ್ಯಾಕಾಶ ಸಂಸ್ಥೆ. ನಾಸಾದ ಸಾಧನೆಗಳು ಏನೇ ಇರಬಹುದು. ಒಪ್ಪಿಕೊಳ್ಳೋಣ! ಆದರೆ ಸುನಿತಾ ವಿಲಿಯಮ್ಸ್ ವಿಚಾರದಲ್ಲಿ ಸಂದಿಗ್ಧತೆಗೆ ಸಿಲುಕಿರುವ NASAಗೆ ಬೇರೆ ಉಪಾಯವೇ ಇಲ್ಲವೇ ಎಂಬ ಪ್ರಶ್ನೆ ಎದ್ದಿದೆ. ಬಾಹ್ಯಾಕಾಶ ನೌಕೆ ಬೋಯಿಂಗ್ ಸ್ಟಾರ್‌ಲೈನರ್​ಗೆ ಸಂಬಂಧಿಸಿ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ನೌಕೆಯು ಜೂನ್ 6 ರಂದು ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಹೊತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶಕ್ಕೆ (ISS) ತೆರಳಿತ್ತು. ಇದು ಒಂದು ವಾರದಲ್ಲಿ ಭೂಮಿಗೆ ಮರಳಬೇಕಿತ್ತು, ಆದರೆ ತಾಂತ್ರಿಕ ದೋಷದಿಂದಾಗಿ, ಬೋಯಿಂಗ್ ಸ್ಟಾರ್‌ಲೈನರ್ ಹಿಂತಿರುಗಲು ಸಾಧ್ಯವಾಗಲಿಲ್ಲ. ಪರಿಣಾಮ ಇಬ್ಬರು ಗಗನಯಾನಿಗಳು ಅಲ್ಲೇ ಸಿಲುಕಿಕೊಂಡಿದ್ದಾರೆ.

ಬಾಹ್ಯಾಕಾಶದಲ್ಲಿ ಸಿಲುಕಿರುವ ಇಬ್ಬರು ಗಗನಯಾತ್ರಿಗಳು
ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಐಎಸ್‌ಎಸ್‌ನಲ್ಲಿ ಸಿಲುಕಿಕೊಂಡು ಬರೋಬ್ಬರಿ 2 ತಿಂಗಳು ಕಳೆದಿದೆ. ತಾಂತ್ರಿಕ ದೋಷಕ್ಕೆ ಒಳಗಾಗಿರುವ ಬೋಯಿಂಗ್ ಸ್ಟಾರ್‌ಲೈನರ್ ಅನ್ನು ದುರಸ್ತಿ ಮಾಡೋದೇ ನಾಸಾಗೆ ದೊಡ್ಡ ತಲೆ ನೋವು ಆಗಿದೆ. ತನ್ನಲ್ಲಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡಿರುವ NASA, ಎಲಾನ್ ಮಸ್ಕ್​​​​​ ಅವರ ಕಾಲು ಹಿಡಿದಿದೆ. ಮಸ್ಕ್​​ಗೆ ಸೇರಿದ ಸ್ಪೇಸ್‌ಎಕ್ಸ್‌(Spacex) ನೊಂದಿಗೆ ಮಾತುಕತೆ ನಡೆಸ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ 2025, ಫೆಬ್ರವರಿಯಲ್ಲಿ ಭೂಮಿಗೆ ವಾಪಸ್ ಆಗಲಿದ್ದಾರೆ.

ಇದನ್ನೂ ಓದಿ:KL ರಾಹುಲ್ ಒಂದೇ ಅಲ್ಲ.. ಈ ಆಟಗಾರನೂ ಬಿಗ್ ಟಾರ್ಗೆಟ್.. ಟೀಂ ಇಂಡಿಯಾದಲ್ಲಿ ಭಾರೀ ಹುನ್ನಾರ..!

publive-image

NASA ಮೊದಲ ಯೋಜನೆ ಏನಾಗಿತ್ತು?
ಇಬ್ಬರು ಗಗನಯಾತ್ರಿಗಳ ತರಲು ಹೊಸ Starliner ಕ್ಯಾಪ್ಸುಲ್ ಅಂದರೆ Starliner Crew Flight Test (CFT) ಅನ್ನು ಬಳಸುವುದಾಗಿತ್ತು. ಆದರೆ ನಾಸಾದ ಮೊದಲ ಪ್ರಯತ್ನ ಫೇಲ್ ಆಗಿದೆ. ಬಾಹ್ಯಾಕಾಶ ನೌಕೆಯಲ್ಲಿ ಥ್ರಸ್ಟರ್ ವೈಪರೀತ್ಯಗಳು ಮತ್ತು ಹೀಲಿಯಂ ಸೋರಿಕೆಯಂತಹ ಅನೇಕ ತಾಂತ್ರಿಕ ಸಮಸ್ಯೆಗಳನ್ನು ಉಂಟಾದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕೈಬಿಟ್ಟಿದೆ. ಪರಿಣಾಮ ಹೊಸ ಪ್ಲಾನ್ ಮಾಡಬೇಕಾಗಿದೆ.

ನಾಸಾದ ಹೊಸ ಯೋಜನೆ ಏನು?
ಇತ್ತೀಚಿನ ವರದಿಯ ಪ್ರಕಾರ.. ನಾಸಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರನ್ನು ಸುರಕ್ಷಿತವಾಗಿ ಕರೆ ತರಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಕಳೆದ ಗುರುವಾರ ಮಾತನಾಡಿರುವ NASAದ ಅಧಿಕಾರಿ ಸ್ಟೀವ್ ಸ್ಟಿಚ್, ಸ್ಟಾರ್ಲೈನರ್ ಮೂಲಕ ಗಗನಯಾತ್ರಿಗಳನ್ನು ಮರಳಿ ಕರೆತರುವುದು ಪ್ರಾಥಮಿಕ ಯೋಜನೆ. ಜೊತೆಗೆ ಪರ್ಯಾಯ ತಂತ್ರಗಳನ್ನು ಸಹ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:Big Updates: ಸುನಿತಾ ವಿಲಿಯಮ್ಸ್​ಗೆ ಮತ್ತೊಂದು ಸಂಕಷ್ಟ.. ಮತ್ತೆ ಏನಾಯ್ತು..?

publive-image

ಎಲಾನ್ ಮಸ್ಕ್‌ನ ಸ್ಪೇಸ್‌ಎಕ್ಸ್ ಮೊರೆ..!
ನಾಸಾದ ಪ್ಲಾನ್​ನಲ್ಲಿ ಪ್ರಮುಖವಾಗಿ SpaceX ನ ಕ್ರ್ಯೂ 9 ಮಿಷನ್ ಬಳಸುವುದು ಕೂಡ ಒಂದು ಆಯ್ಕೆ. ಇದನ್ನು ಸೆಪ್ಟೆಂಬರ್ 25, 2024 ರಂದು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈ ಮಿಷನ್ ಆಗಸ್ಟ್ ಮಧ್ಯದಲ್ಲಿ ಉಡಾವಣೆ ಮಾಡಬೇಕಿತ್ತು. ಆದರೆ ಅದು ವಿಳಂಬವಾಗಿದೆ. ಇದು ನಾಲ್ಕು ಗಗನಯಾನಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಇದೆ. ಈ ಯೋಜನೆಯ ಸಿದ್ಧತೆ ಖಚಿತಪಡಿಸಿಕೊಳ್ಳಲು ನಾಸಾ ಸ್ಪೇಸ್‌ಎಕ್ಸ್‌ನೊಂದಿಗೆ ಸಮನ್ವಯ ಸಾಧಿಸಿದೆ. ಅದು ಫಲಪ್ರದ ಕೂಡ ಆಗಿದೆ ಎಂದು ವರದಿಗಳು ಹೇಳಿವೆ.

ವಾಪಸ್ ಯಾವಾಗ?
ನಾಸಾದ ಹೊಸ ಕಾರ್ಯತಂತ್ರದಲ್ಲಿ ಸ್ಪೇಸ್‌ಎಕ್ಸ್‌ನ ಕ್ರ್ಯೂ 9 ಡ್ರ್ಯಾಗನ್​​ ಇಲ್ಲಿಂದ ಹೋಗುವಾಗ ನಾಲ್ವರ ಬದಲಿಗೆ ಇಬ್ಬರನ್ನು ಮಾತ್ರ ಕಳುಹಿಸಲಿದೆ. ಅಲ್ಲಿ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್​ ಅವರನ್ನು ರಕ್ಷಣೆ ಮಾಡಿಕೊಂಡು, ಬರುವಾಗ ನಾಲ್ವರ ಜೊತೆ ಭೂಮಿಗೆ ವಾಪಸ್ ಆಗಲಿದೆ. ಫೆಬ್ರವರಿ 2025 ರಲ್ಲಿ ಹಿಂತಿರುಗಬಹುದು ಎನ್ನಲಾಗುತ್ತಿದೆ. ಅಂದರೆ ಮುಂದಿನ 6 ತಿಂಗಳ ಕಾಲ ಸುನಿತಾ ವಿಲಿಯಮ್ಸ್​ ಬಾಹ್ಯಾಕಾಶ ಕೇಂದ್ರದಲ್ಲಿ ಇರಬೇಕಾಗುತ್ತದೆ. ಆದರೆ ನಾಸಾದ ವಿಜ್ಞಾನಿಗಳು ಈ ಯೋಜನೆಯನ್ನೂ ಅಂತಿಮಗೊಳಿಸಿಲ್ಲ. ಮಾತುಕತೆಯಲ್ಲಿ ಇದೆ ಎಂದಷ್ಟೆ ಸ್ಟಿಚ್ ಹೇಳಿದ್ದಾರೆ.

ಇದನ್ನೂ ಓದಿ:ಡೇಂಜರ್​ ಝೋನ್​​ನಲ್ಲಿ ಸುನಿತಾ ವಿಲಿಯಮ್ಸ್​; NASA ಒಂದು ದಿನ ಲೇಟ್​ ಮಾಡಿದ್ರೂ ಅವರ ಪ್ರಾಣಕ್ಕೆ ಕಂಟಕ

publive-image

NASA ಮೊದಲ ಆದ್ಯತೆ ಏನು?
ಮೇಲಿನ ಪ್ಲಾನ್ ಹೊರತಾಗಿ NASAದ ಮೊದಲ ಆದ್ಯತೆ ತಾಂತ್ರಿಕ ದೋಷಕ್ಕೆ ಒಳಗಾಗಿರುವ ಬೋಯಿಂಗ್ ಸ್ಟಾರ್‌ಲೈನರ್‌ನ ಸರಿಮಾಡುವುದು. ಆ ಮೂಲಕ ಅವರನ್ನು ಸುರಕ್ಷಿತವಾಗಿ ಭೂಮಿಗೆ ವಾಪಸ್ ಬರುವಂತೆ ಮಾಡುವುದು. ಸ್ಟಾರ್‌ಲೈನರ್‌ನಲ್ಲಿ ಸಾಫ್ಟ್‌ವೇರ್ ಸರಿಪಡಿಸೋದೇ ನಾಸಾಗೆ ಸವಾಲ್ ಆಗಿದೆ. ಸಿಬ್ಬಂದಿ ಇಲ್ಲದೇ Starliner ಕ್ಯಾಪ್ಸುಲ್ ಡಾಕ್ ಮಾಡುವುದು ಹೇಗೆ ಎಂದು NASA ಪರಿಗಣಿಸುತ್ತಿದೆ. ಇದಕ್ಕೆ ಸಾಫ್ಟ್‌ವೇರ್ ಕಾನ್ಫಿಗರ್ ಮಾಡುವ ಅಗತ್ಯ ಇರುತ್ತದೆ.

Spacex ಏನು..?
SpaceX ಇದು ಏರೋಸ್ಪೇಸ್​ ಮತ್ತು ಬಾಹ್ಯಾಕಾಶ ವೆಹಿಕಲ್ ಸೇವೆಗಳನ್ನು ಒದಗಿಸುವ ಅಮೆರಿಕದ ಖಾಸಗಿ ಕಂಪನಿ ಆಗಿದೆ. ಸರಕು ಹಾಗೂ ಗಗನಯಾನಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತಲುಪಿಸಲು ನಾಸಾ ಜೊತೆಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಭೂಮಿಯ ಕಕ್ಷೆಗೆ ಉಪಗ್ರಹಗಳನ್ನು ಉಡಾವಣೆ ಮಾಡುತ್ತದೆ. SpaceX ಮತ್ತು NASA ನಡುವಿನ ವ್ಯತ್ಯಾಸ ಏನೆಂದರೆ SpaceX ಮರುಬಳಕೆ ಮಾಡಬಹುದಾದ ಲಾಂಚರ್​​ಗಳನ್ನು ನಿರ್ಮಿಸಿ ಬಳಸುತ್ತಿದೆ. ಕ್ಯಾಲಿಫೋರ್ನಿಯಾದ ಹಾಥಾರ್ನ್‌ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. 2002ರಲ್ಲಿ ಉದ್ಯಮಿ ಎಲೋನ್ ಮಸ್ಕ್ ಬಾಹ್ಯಾಕಾಶ ಸಾರಿಗೆ ವೆಚ್ಚವನ್ನು ಕಡಿಮೆ ಮಾಡುವ ಮತ್ತು ಮಂಗಳ ಗ್ರಹದ ಮೇಲೆ ವಸಾಹತುಶಾಹಿ ಸ್ಥಾಪಿಸುವ ಉದ್ದೇಶದಿಂದ SpaceX ಹುಟ್ಟುಹಾಕಿದರು.

ಇದನ್ನೂ ಓದಿ:ಆಘಾತಕಾರಿ ಸುದ್ದಿ.. ಸುನಿತಾ ವಿಲಿಯಮ್ಸ್ ಭೂಮಿಗೆ ಈ ವರ್ಷ ಬರಲ್ಲ.. ಮತ್ತೊಂದು ಅಪ್​​ಡೇಟ್ಸ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment