ಎಲಾನ್ ಮಸ್ಕ್ ಸಂಪತ್ತು ಈಗ ಭಾರತದ ಅರ್ಧ ಬಜೆಟ್‌.. ಡೊನಾಲ್ಡ್​ ಟ್ರಂಪ್​ ಬೆಂಬಲಿಸಿದ್ದಕ್ಕೆ ಖುಲಾಯಿಸಿದ ಅದೃಷ್ಟ!

author-image
Gopal Kulkarni
Updated On
ಎಲಾನ್ ಮಸ್ಕ್ ಸಂಪತ್ತು ಈಗ ಭಾರತದ ಅರ್ಧ ಬಜೆಟ್‌.. ಡೊನಾಲ್ಡ್​ ಟ್ರಂಪ್​ ಬೆಂಬಲಿಸಿದ್ದಕ್ಕೆ ಖುಲಾಯಿಸಿದ ಅದೃಷ್ಟ!
Advertisment
  • ಟ್ರಂಪ್​ ಗೆಲುವಿನ ಬಳಿಕ ಎಲಾನ್​ ಮಸ್ಕ್ ಸಂಪತ್ತಿನಲ್ಲಿ ಭಾರೀ ಏರಿಕೆ
  • ಶೇಕಡಾ 28 ರಷ್ಟು ಏರಿಕೆ ಕಂಡ ಟೆಸ್ಲಾ ಕಂಪನಿಯ ಷೇರುಗಳ ಮೌಲ್ಯ
  • ಟ್ರಂಪ್ ಗೆದ್ದ ಕೆಲವೇ ದಿನಗಳಲ್ಲಿ 50 ಬಿಲಿಯನ್ ಡಾಲರ್​ನಷ್ಟು ಸಂಪತ್ತು ಏರಿಕೆ

ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ವೇಳೆ ಡೊನಾಲ್ಡ್​ ಟ್ರಂಪ್​ಗೆ ದೊಡ್ಡ ಬೆಂಬಲವಾಗಿ ನಿಂತಿದ್ದು ಎಲಾನ್ ಮಸ್ಕ್​. ಅಧ್ಯಕ್ಷೀಯ ಚುನಾವಣೆ ಮುಗಿದು ಡೊನಾಲ್ಡ್​ ಟ್ರಂಪ್ ಗೆದ್ದಿದ್ದೆ ಗೆದ್ದಿದ್ದು, ಎಲಾನ್ ಮಸ್ಕ್ ಅದೃಷ್ಟ ಭಾರೀ ಖುಲಾಯಿಸಿದೆ. ಎಲಾನ್ ಮಸ್ಕ್ ಸಂಪತ್ತಿನಲ್ಲಿ ಭಾರಿ ಪ್ರಮಾಣದಲ್ಲಿ ದಿಢೀರ್ ಏರಿಕೆ ಆಗಿದೆ. ಟೆಸ್ಲಾ ಕಂಪನಿಯ ಷೇರು ಮೌಲ್ಯ ಬುಧವಾದರಿಂದ ಶೇ.28 ರಷ್ಟು ಏರಿಕೆಯಾಗಿದೆ. ಬುಧವಾರದಿಂದ ಎಲಾನ್ ಮಸ್ಕ್​ ಸಂಪತ್ತಿನಲ್ಲಿ 50 ಬಿಲಿಯನ್ ಡಾಲರ್ ಏರಿಕೆಯಾಗಿದೆ.

ಒಟ್ಟಾರೆಯಾಗಿ 313 ಬಿಲಿಯನ್ ಕೋಟಿಯಷ್ಟು ಮುಟ್ಟಿದೆ ಎಲಾನ್ ಮಸ್ಕ್​ನ ಸಂಪತ್ತು ಅಂದ್ರೆ ಭಾರತೀಯ ರೂಪಾಯಿಗಳಲ್ಲಿ ಒಟ್ಟು 24.07 ಲಕ್ಷ ಕೋಟಿ ರೂಪಾಯಿಗಳಷ್ಟು ಸಂಪತ್ತು ಎಲಾನ್​ ಮಸ್ಕ್​ದಿದೆ. ಇದು ಭಾರತ ಸರ್ಕಾರ ಕೊನೆಯದಾಗಿ ಮಂಡಿಸಿದ ಬಜೆಟ್​​ನ ಅರ್ಧದಷ್ಟು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಟ್ರಂಪ್​ ಗೆಲುವಿಗೆ ಎಲಾನ್​ ಮಸ್ಕ್ ಪ್ರಮುಖ ಪಾತ್ರವಹಿಸಿದ್ದು ಹೇಗೆ? ಯುಎಸ್​​ ಅಧ್ಯಕ್ಷನ ಬಗ್ಗೆ ಟೆಸ್ಲಾ ಸಂಸ್ಥಾಪಕ ಅಂದು ಹೇಳಿದ್ದೇನು?

publive-image

ಟ್ರಂಪ್ ಚುನಾವಣೆಗೂ ಮುನ್ನ ನನ್ನನ್ನು ಬೆಂಬಲಿಸಿದ್ದರಿಂದ ಎಲಾನ್​ ಮಸ್ಕ್ ಬ್ಯುಸಿನೆಸ್​ಗೆ ಲಾಭವಾಗಲಿದೆ ಎಂದು ಹೇಳಿದ್ದರು. ಅದರಂತೆ ಟ್ರಂಪ್ ಚುನಾವಣೆ ಗೆದ್ದ ಕೆಲವೇ ದಿನಗಳಲ್ಲಿ ಮಸ್ಕ್​ ಸಂಪತ್ತಿನಲ್ಲಿ ಭಾರೀ ಏರಿಕೆಯಾಗಿದೆ. ಎಲಾನ್ ಮಸ್ಕ್ ಈಗ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪ್ರಾರಂಭದಲ್ಲಿ ಡೊನಾಲ್ಡ್ ಟ್ರಂಪ್ ಎಲೆಕ್ಟ್ರಿಕ್ ಕಾರ್​ಗಳಿಗೆ ವಿರುದ್ಧ ನಿಲುವು ಹೊಂದಿದ್ದರು. ಎಲಾನ್​ ಮಸ್ಕ್​, ಟ್ರಂಪ್ ಬೆಂಬಲಿಸಲು ಪ್ರಾರಂಭಿಸಿದ ಮೇಲೆ ಎಲೆಕ್ಟ್ರಿಕ್ ಕಾರ್​ ಪರ ತಮ್ಮ ನಿಲುವು ಘೋಷಿಸಿಕೊಂಡರು.

publive-image

ಇದನ್ನೂ ಓದಿ:ಟ್ರಂಪ್ ಮುಗಿಸಲು ಇರಾನ್​​ ಸಂಚು ರೂಪಿಸಿತ್ತು..! ಅಮೆರಿಕದಲ್ಲಿ ಹೊಸ ಸಂಚಲನ

ಇದರಿಂದಾಗಿ ಟೆಸ್ಲಾ ಕಂಪನಿಯ ಷೇರುಗಳ ಬೆಲೆ ಭಾರೀ ಏರಿಕೆಕಂಡಿದೆ. ಸದ್ಯ ಟೆಸ್ಲಾ ಕಂಪನಿಯ ಮಾರುಕಟ್ಟೆಯ ಮೌಲ್ಯ 1 ಟ್ರಿಲಿಯನ್ ಡಾಲರ್ ದಾಟಿದೆ ಎಂದು ಹೇಳಲಾಗುತ್ತಿದೆ. ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್​ ಟ್ರಂಪ್ ಪ್ರಚಾರ ಮಾಡಿದ್ದ ಎಲಾನ್ ಮಸ್ಕ್, ಚುನಾವಣೆ ಪ್ರಚಾರಕ್ಕಾಗಿ 130 ಮಿಲಿಯನ್ ಡಾಲರ್ ಅಂದ್ರೆ 10 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ದುಡ್ಡನ್ನು ಖರ್ಚು ಮಾಡಿದ್ದಾರೆ. ಅಮೆರಿಕಾದ ಅಧ್ಯಕ್ಷೀಐ ಚುನಾವಣೆಯಲ್ಲಿ ಟ್ರಂಪ್ ಗೆದ್ದ ಮೇಲೆ ಅಮೆರಿಕಾದಲ್ಲಿ ಹೊಸ ಸ್ಟಾರ್ ಉದಯವಾಗಿದ್ದಾರೆ ಎಂದೆಲ್ಲಾ ಟ್ರಂಪ್​ರನ್ನು ಮಸ್ಕ್ ಕೊಂಡಾಡಿದ್ದರು. ಸದ್ಯ ಟ್ರಂಪ್ ಕ್ಯಾಬಿನೆಟ್​ನಲ್ಲಿ ಎಲಾನ್​ ಮಸ್ಕ್​ಗೂ ಕೂಡ ಸ್ಥಾನ ಸಿಗುವ ನಿರೀಕ್ಷೆಯೂ ಕೂಡ ಇದೆ. ಇವರಿಬ್ಬರ ಬಾಂಧವ್ಯ ಈಗ ಆ ಮಟ್ಟಕ್ಕೆ ಹೋಗಿ ನಿಂತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment