/newsfirstlive-kannada/media/post_attachments/wp-content/uploads/2025/02/elvis.thompson-Predicts.jpg)
2012ರಲ್ಲಿ ಪ್ರಳಯ ಆಗುತ್ತೆ ಅನ್ನೋ ಪುಕಾರು ಎದ್ದಿತ್ತು. 2012 ಉರುಳಿ 2025 ಬಂದಾಯ್ತು. ಆದಾಗ್ಯೂ ಪ್ರಳಯ ಅನ್ನೋದು ಬರೀ ಬೊಗಳೆಯೇ ಆಯ್ತು. ಮಾಯನ್ ಕ್ಯಾಲೆಂಡರ್ ತಪ್ಪು ಭವಿಷ್ಯ ನುಡೀತು ಅಂತ ಕೆಲವರು ಹೇಳುತ್ತಿದ್ದಾರೆ. ಆದರೆ ಇದೀಗ ಮತ್ತೊಬ್ಬ ಬಾಬಾ ದಿಗ್ಗನೆದ್ದು ಕೂತು ಪ್ರಳಯದ ಹೊಸ ಡೇಟ್ಗಳನ್ನ ಹೇಳುತ್ತಿದ್ದಾನೆ.
ಅನ್ಯಗ್ರಹ ಜೀವಿಗಳು ಬರಲಿವೆಯೇ? ಕೆಲವರನ್ನಷ್ಟೇ ರಕ್ಷಿಸುತ್ತಾರಾ?
ಅಮೆರಿಕಾ ಮೂಲದ ಎಲ್ವಿಸ್ ಥಾಂಪ್ಸನ್ ಅನ್ನೋ ಇದೇ ವ್ಯಕ್ತಿಯೇ ಇದೀಗ ಹೊಸ ಪ್ರಳಯದ ದಿನಾಂಕವನ್ನು ಹೇಳುತ್ತಿದ್ದಾನೆ. ಟೈಮ್ ಟ್ರಾವೆಲ್ ಮಾಡಿ ಭವಿಷ್ಯವನ್ನು ನೋಡಿ ಬಂದಿದ್ದೀನಿ ಅಂತ ಹೇಳ್ತಿರೋ ಎಲ್ವಿಸ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಳಯದ ಮಾಹಿತಿ ಹಾಗೂ ಪ್ರಳಯದ ದಿನಾಂಕಗಳನ್ನೂ ದಾಖಲಿಸಿದ್ದಾರೆ. ಭವಿಷ್ಯವನ್ನೇ ನೋಡಿ ಬಂದಿರೋ ನನಗೆ ಪ್ರಳಯ ಹೇಗಾಗುತ್ತದೆ? ಎಲ್ಲೆಲ್ಲಿ ಸರ್ವನಾಶ ಎದುರಾಗುತ್ತದೆ? ಅನ್ನೋ ಸಂಪೂರ್ಣ ಮಾಹಿತಿ ಗೊತ್ತಿದೆ ಅಂತ ಹೇಳಿಕೊಂಡಿದ್ದಾರೆ.
ಪ್ರಳಯದ ಭವಿಷ್ಯ 1
ಗಂಟೆಗೆ 1046 ಕಿ.ಮೀ ವೇಗದಲ್ಲಿ ಸುಂಟರಗಾಳಿಯೊಂದು ಬರಲಿದೆ. ಇದೇ ಏಪ್ರಿಲ್ 6ರಂದು ಅಮೆರಿಕಾದ ಓಕ್ಲಾಹೋಮ್ಗೆ ಬಂದಪ್ಪಳಿಸಲಿದೆ. ಈ ಸುಂಟರಗಾಳಿ ಬಹುದೊಡ್ಡ ವಿನಾಶವನ್ನೇ ಸೃಷ್ಟಿಸಲಿದೆ ಎನ್ನುತ್ತಿದೆ ಎಲ್ವಿಸ್ ಭವಿಷ್ಯ.
ಪ್ರಳಯದ ಭವಿಷ್ಯ 2
ಮೇ 27ರಂದು ಅಮೆರಿಕಾದಲ್ಲಿ ಸಿವಿಲ್ ವಾರ್ ನಡೆಯಲಿದೆ. ಇದೇ ಯುದ್ಧ ವಿಶ್ವದ ವಿನಾಶಕ್ಕೆ ಮುನ್ನುಡಿ ಬರೆಯಲಿದೆ. ಬಹುಪಾಲು ದೇಶಗಳು ಅಣ್ವಾಸ್ತ್ರಗಳನ್ನು ಬಳಸಲಿದ್ದಾರೆ. ಮೂರನೇ ಮಹಾಯುದ್ಧ ನಡೆಯುವ ಮೂಲಕ ವಿನಾಶ ಎದುರಾಗಲಿದೆ ಎನ್ನುತ್ತಿದೆ ಎಲ್ವಿಸ್ ಪ್ರಳಯ ಭವಿಷ್ಯ.
ಪ್ರಳಯ ಭವಿಷ್ಯ 3
ಸೆಪ್ಟೆಂಬರ್ 1ರಂದು ಚಾಂಪಿಯನ್ ಅನ್ನೋ ಒಂದು ಅನ್ಯಗ್ರಹ ಜೀವಿ ಭೂಮಿಗೆ ಬರಲಿದೆ. ಸುಮಾರು 12 ಸಾವಿರ ಮಂದಿ ಮನುಷ್ಯರನ್ನ ಚಾಂಪಿಯನ್ ಸುರಕ್ಷಿತ ಗ್ರಹಕ್ಕೆ ಕೊಂಡೊಯ್ಯಲಿದೆ ಎನ್ನುತ್ತಿದೆ ಎಲ್ವಿಸ್ ಪ್ರಳಯ ಭವಿಷ್ಯ.
ಪ್ರಳಯ ಭವಿಷ್ಯ 4
ಇದೇ ಸೆಪ್ಟೆಂಬರ್ 19ರಂದು ಅಮೆರಿಕಾ ಕರಾವಳಿ ತೀರದಲ್ಲಿ ಬಹುದೊಡ್ಡ ಚಂಡಮಾರುತ ಕಾಣಿಸಿಕೊಳ್ಳಿದ್ದು ಇಡೀ ಅಮೆರಿಕಾವೇ ಕೊಚ್ಚಿಕೊಂಡು ಹೋಗಲಿದೆ. ಅಪಾರ ಸಾವು ನೋವುಗಳು ಸಂಭವಿಸಲಿದ್ದು, ವಿಶ್ವದ ಹಿರಿಯಣ್ಣನೇ ಹೇಳ ಹೆಸರಿಲ್ಲದೇ ಹೋಗುತ್ತಾನೆ ಎನ್ನುತ್ತಿದೆ ಎಲ್ವಿಸ್ ಪ್ರಳಯ ಭವಿಷ್ಯ.
ಇದನ್ನೂ ಓದಿ: 66 ಕೋಟಿ ಭಕ್ತರ ತೀರ್ಥಸ್ನಾನ.. 144 ವರ್ಷಗಳ ಮಹಾಕುಂಭಮೇಳಕ್ಕೆ ತೆರೆ; ಟಾಪ್ 10 ಫೋಟೋಗಳು ಇಲ್ಲಿದೆ
View this post on Instagram
ಪ್ರಳಯ ಭವಿಷ್ಯ 5
ನವೆಂಬರ್ 3ರಂದು ನೀಲಿ ತಿಮಿಂಗಿಲಕ್ಕಿಂತಲೂ 6 ಪಟ್ಟು ದೊಡ್ಡದಾದ ಜೀವಿಯೊಂದು ಫೆಸಿಫಿಕ್ ಸಮುದ್ರದೊಳಗಿನಿಂದ ಹುಟ್ಟಿ ಬರಲಿದೆ. ಈ ದೈತ್ಯ ಜೀವಿಯ ಹೆಸರು ಸೆರೆನಾ ಕ್ರೌನ್. ಈ ಮೃಗ ಭೂಮಿಗೆ ಕಾಲಿಟ್ಟ ಕೂಡಲೇ ಅಂತ್ಯದ ಅಧ್ಯಾಯ ಮುಗಿಯಲಿದೆ ಎನ್ನುತ್ತಿದೆ ಎಲ್ವಿಸ್ ಪ್ರಳಯ ಭವಿಷ್ಯ.
ಹೀಗೆ ಎಲ್ವಿಸ್ ನುಡಿದ ಪ್ರಳಯ ಭವಿಷ್ಯದ ವಿಡಿಯೋ ಡೌನ್ಲೋಡ್ ಮಾಡಿಕೊಂಡಿರೋ ಸಾಕಷ್ಟು ಮಂದಿ ಎಚ್ಚರಿಕೆ ನೀಡಿದ್ದಾರೆ. ನೀನು ಹೇಳಿದಂತೆ ಅದೇ ದಿನಾಂಕದಂದು ಏನೂ ನಡೆಯದೇ ಹೋದರೇ ನಿನ್ನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗ್ತೀವಿ ಅಂತ ವಾರ್ನಿಂಗ್ ಕಾಮೆಂಟ್ ಮಾಡಿದ್ದಾರೆ. ಇಂಥಾ ಪ್ರಳಯ ಭವಿಷ್ಯದ ಬಗ್ಗೆ ನೀವೇನಂತೀರಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ