ಮತ್ತೆ ಸೋಲ್ತಿದ್ದಂತೆಯೇ ಜೋರಾಗಿ ಅತ್ತ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ..!

author-image
Ganesh
Updated On
Retired out! ತಿಲಕ್ ವರ್ಮಾಗೆ ದೊಡ್ಡ ಅವಮಾನ.. ಕ್ರೀಸ್​ನಿಂದ ವಾಪಸ್ ಕರೆಸಿದ ಮುಂಬೈ ಇಂಡಿಯನ್ಸ್..!
Advertisment
  • LSG ವಿರುದ್ಧ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೋಲು
  • ಸೋಲುತ್ತಿದ್ದಂತೆಯೇ ಭಾವುಕರಾದ ಹಾರ್ದಿಕ್ ಪಾಂಡ್ಯ
  • ಪಾಯಿಂಟ್ಸ್​ ಪಟ್ಟಿಯಲ್ಲೂ ಕುಸಿದ ಮುಂಬೈ ಇಂಡಿಯನ್ಸ್

ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ಮುಂಬೈ ಇಂಡಿಯನ್ಸ್ (MI) ಸೋಲುತ್ತಿದ್ದಂತೆಯೇ ನಾಯಕ ಹಾರ್ದಿಕ್ ಪಾಂಡ್ಯ ಜೋರಾಗಿ ಅತ್ತಿದ್ದಾರೆ. ಋತುವಿನ ಮೂರನೇ ಸೋಲಿನಿಂದ ನಿರಾಶೆಗೊಂಡ ಪಾಂಡ್ಯ, ಪಂದ್ಯ ಮುಗಿದ ನಂತರ ತುಂಬಾ ಭಾವುಕರಾಗಿದ್ದಾರೆ. ನಿರಾಶೆಯಿಂದ ಮುಖ ಕೆಳಗೆ ಮಾಡಿ ನಿಂತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆ ಫೋಟೋದಲ್ಲಿ ಅಳುತ್ತಿರುವಂತೆ ಕಾಣುತ್ತಿದೆ.

ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ, ಮುಂಬೈ ಇಂಡಿಯನ್ಸ್ ಗೆಲುವಿಗೆ 204 ರನ್​ಗಳ ಗುರಿ ನೀಡಿತ್ತು. ಮುಂಬೈ ಇಂಡಿಯನ್ಸ್ ಬ್ಯಾಟಿಂಗ್‌ನಲ್ಲಿ ಉತ್ತಮ ಆರಂಭ ಪಡೆಯಲಿಲ್ಲ. ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ಸೂರ್ಯ ಕುಮಾರ್ ಯಾದವ್ ಹಾಗೂ ನಮನ್ ಧೀರ್ ಉತ್ತಮ ಆಟವಾಡಿದರು. 24 ಎಸೆತಗಳಲ್ಲಿ 46 ರನ್ ಬಾರಿಸಿ ನಮನ್ ಧೀರ್ ಔಟಾದರು. ಸೂರ್ಯಕುಮಾರ್ ಯಾದವ್ 43 ಎಸೆತಗಳಲ್ಲಿ 67 ರನ್ ಗಳಿಸಿ ತಂಡವನ್ನು ಗೆಲುವಿನ ಹಂತಕ್ಕೆ ಕೊಂಡೊಯ್ದಿದ್ದರು.

ಇದನ್ನೂ ಓದಿ: ಪಾಂಡ್ಯಗೆ ಟಕ್ಕರ್ ಕೊಟ್ಟ ರಿಷಭ್​ ಪಂತ್.. ರೋಚಕ ಗೆಲುವು ಪಡೆದ ಲಕ್ನೋ ಟೀಮ್

publive-image

ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ತಿಲಕ್ ವರ್ಮಾ 25 ರನ್ ಗಳಿಸಿದರು. ಆದರೆ ಅದಕ್ಕಾಗಿ ಅವರು 23 ಎಸೆತಗಳನ್ನು ಎದುರಿಸಿದರು. ದೊಡ್ಡ ಹೊಡೆತಗಳನ್ನು ಹೊಡೆಯಲು ವಿಫಲರಾದರು. ನಂತರ 19ನೇ ಓವರ್‌ನಲ್ಲಿ ನಿವೃತ್ತರಾದರು. ಪಾಂಡ್ಯ 16 ಎಸೆತಗಳಲ್ಲಿ ಅಜೇಯ 28 ರನ್ ಗಳಿಸಿದರೂ ಗೆಲುವಿಗೆ ಕಾರಣವಾಗಲಿಲ್ಲ. ಕೊನೆಯಲ್ಲಿ ಐದು ವಿಕೆಟ್ ಕಳೆದುಕೊಂಡ ಮುಂಬೈ ಇಂಡಿಯನ್ಸ್, 191 ರನ್​ಗಳಿಸಿ ಸೋಲಿಗೆ ಶರಣಾಯ್ತು. ಈ ಸೋಲಿನಿಂದ ನಿರಾಶೆಗೊಂಡ ಪಾಂಡ್ಯ ಪಂದ್ಯದ ನಂತರ ಭಾವುಕರಾಗಿ ಕಾಣಿಸಿಕೊಂಡರು. ಇನ್ನು, ನಿನ್ನೆ ಪಾಂಡ್ಯ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ. ಐಪಿಎಲ್‌ನಲ್ಲಿ 5 ವಿಕೆಟ್ ಪಡೆದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪಾಯಿಂಟ್ ಪಟ್ಟಿಯಲ್ಲಿ ಕುಸಿತ..!

ಸೋಲಿನ ನಂತರ ಮುಂಬೈ ಇಂಡಿಯನ್ಸ್ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿದಿದೆ. ಲಕ್ನೋ 7ನೇ ಸ್ಥಾನದಿಂದ 6 ನೇ ಸ್ಥಾನಕ್ಕೇರಿದೆ. ಮುಂಬೈ ತಂಡ ಆಡಿದ 4 ಪಂದ್ಯಗಳಲ್ಲಿ ಮೂರರಲ್ಲಿ ಸೋಲನ್ನು ಕಂಡಿದೆ.

ಇದನ್ನೂ ಓದಿ: ಯೂನಿವರ್ಸಿಟಿಯ 400 ಎಕರೆ ಭೂಮಿಗೆ ಕೈ ಹಾಕಿ ಇಕ್ಕಟ್ಟಿಗೆ ಸಿಲುಕಿದ ಕಾಂಗ್ರೆಸ್​ ಸರ್ಕಾರ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment