/newsfirstlive-kannada/media/post_attachments/wp-content/uploads/2025/04/Shreyas_Iyer-5.jpg)
ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ 2025ರ ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿಗೆ ಸೋಲುಂಡಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ 50 ರನ್ಗಳಿಂದ ಪರಾಭವಗೊಂಡಿತು. ಪಂದ್ಯ ಮುಗಿದ ಮೇಲೆ ಮೈದಾನಕ್ಕೆ ಆಗಮಿಸಿದ ಬಾಲಿವುಡ್ ಬ್ಯೂಟಿ, ಪಂಜಾಬ್ ಕಿಂಗ್ಸ್ ಓನರ್ ಪ್ರೀತಿ ಝಿಂಟಾ, ಶ್ರೇಯಸ್ ಅಯ್ಯರ್ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡದ ಓನರ್ ಆಗಿರುವ ಬಾಲಿವುಡ್ ಬ್ಯೂಟಿ ಪ್ರೀತಿ ಝಿಂಟಾ ಅವರು ಕಳೆದ 2 ಪಂದ್ಯಗಳಲ್ಲಿ ಹೇಗೆ ಲವಲವಿಕೆಯಿಂದ ಇದ್ದರೋ ಅದೇ ತರ 3ನೇ ಪಂದ್ಯದ ವೇಳೆಯು ಇದ್ದರು. ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತರೂ ಪ್ರೀತಿ ಝಿಂಟಾ ಮೊಗದಲ್ಲಿ ನಗುವೆನೋ ಕಡಿಮೆ ಇರಲಿಲ್ಲ. ಮಂದಹಾಸ ಹಾಗೇ ಇತ್ತು. ಎಲ್ಲರನ್ನೂ ಸ್ನೇಹದಿಂದಲೇ ಕಂಡರು.
ಇದನ್ನೂ ಓದಿ: RCBಗೆ ಬಿಗ್ ಶಾಕ್; ವಿಡಿಯೋ ಶೇರ್ ಮಾಡಿ 𝑹𝑬𝑨𝑫𝒀 𝑻𝑶 𝑹𝑶𝑨𝑹 ಎಂದ ಫ್ರಾಂಚೈಸಿ..!
ಪಂದ್ಯ ಮುಗಿದ ಬಳಿಕ ಮೈದಾನಕ್ಕೆ ಆಗಮಿಸಿದ ಪ್ರೀತಿ ಝಿಂಟಾ ವೈಟ್ ಆಂಡ್ ವೈಟ್ನಲ್ಲಿ ಕಂಗೋಳಿಸುತ್ತಿದ್ದರು. ಶ್ರೇಯಸ್ ಅಯ್ಯರ್ ಇರುವಲ್ಲಿಗೆ ಬಂದ ಪ್ರೀತಿ ಝಿಂಟಾ ನೇರವಾಗಿ ಪ್ರೀತಿಯ ಅಪ್ಪಿಗೆ ಕೊಟ್ಟರು. ಬಳಿಕ ಪಂದ್ಯದ ಬಗ್ಗೆ ಅಯ್ಯರ್ ಜೊತೆ ಮಾತಕತೆ ನಡೆಸಿದರು. ಅಭಿಮಾನಿಗಳಿಗೂ ಫ್ಲೈಯಿಂಗ್ ಕಿಸ್ ಕೊಟ್ಟ ಹಾಯ್.. ಹೇಳಿದರು. ಇದಾದ ಮೇಲೆ ರಾಜಸ್ಥಾನ್ ಬೌಲರ್ ಜೊತೆಯೂ ಪ್ರೀತಿ ಝಿಂಟಾ ಚರ್ಚೆ ಮಾಡಿದ್ದಾರೆ.
ಚಂಡೀಗಢದ ಮುಲ್ಲನ್ಪುರದ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ರಾಜಸ್ಥಾನ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 4 ವಿಕೆಟ್ಗೆ 206 ರನ್ಗಳ ಟಾರ್ಗೆಟ್ ನೀಡಿತ್ತು. ಆದರೆ ಈ ಗುರಿ ಮುಟ್ಟವಲ್ಲಿ ವಿಫಲವಾಗಿದ್ದ ಪಂಜಾಬ್ 50 ರನ್ಗಳಿಂದ ಪಂದ್ಯ ಕೈಚೆಲ್ಲಿತು.
Preity Zinta and PBKS captain Shreyas Iyer after the match. ❤️ pic.twitter.com/H5ub8yC1ev
— Mufaddal Vohra (@mufaddal_vohra)
Preity Zinta and PBKS captain Shreyas Iyer after the match. ❤️ https://t.co/H5ub8yC1ev
— Mufaddal Vohra (@mufaddal_vohra) April 6, 2025
">April 6, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ