ಕೊರಳಿಗೆ ಚೈನ್.. ಸಿಬ್ಬಂದಿಗೆ ನಾಯಿಯಂತೆ ನೆಕ್ಕುವ, ಮೂತ್ರ ವಿಸರ್ಜಿಸುವ ಶಿಕ್ಷೆ ಕೊಟ್ಟ ಕ್ರೂರಿ ಬಾಸ್!

author-image
Gopal Kulkarni
Updated On
ಕೊರಳಿಗೆ ಚೈನ್.. ಸಿಬ್ಬಂದಿಗೆ ನಾಯಿಯಂತೆ ನೆಕ್ಕುವ, ಮೂತ್ರ ವಿಸರ್ಜಿಸುವ ಶಿಕ್ಷೆ ಕೊಟ್ಟ ಕ್ರೂರಿ ಬಾಸ್!
Advertisment
  • ಕಾರ್ಮಿಕನೊಂದಿಗೆ ಮನುಷ್ಯರಲ್ಲದವರು ನಡೆದುಕೊಳ್ಳುವಂತೆ ನಡೆದುಕೊಂಡ ಬಾಸ್​!
  • ನಾಯಿಯಂತೆ ಎಳೆದರು, ನಾಣ್ಯ ನೆಕ್ಕಿಸಿದರು, ಶ್ವಾನದಂತೆ ಮೂತ್ರ ವಿಸರ್ಜನೆ ಮಾಡಿಸಿದರು
  • ಮಾಲೀಕನ ಈ ನೀಚ ಕೃತ್ಯದ ದೃಶ್ಯ ವೈರಲ್, ಎಲ್ಲೆಲ್ಲೂ ಆಕ್ರೋಶ, ಕೂಡಲೇ ತನಿಖೆಗೆ ಆದೇಶ

ಮೂರು ಹೊತ್ತಿನ ಊಟಕ್ಕಾಗಿಯೇ ಪ್ರತಿಯೊಬ್ಬರು ಮನೆ, ಸಂಬಂಧಗಳನ್ನು ತೊರೆದು ದೂರದ ಊರಿಗೆ ದುಡಿಯಲು ಹೋಗುತ್ತಾರೆ. ತಿಂಗಳ ಸಂಬಳಕ್ಕಾಗಿ ತಮ್ಮ ಇಡೀ ದಿನ ನಮ್ಮ ಜೀವನವನ್ನು ಕೆಲಸಕ್ಕಾಗಿಯೇ ಮುಡಿಪಿಡುತ್ತಾರೆ. ಅವರು ಬೇಡುವುದು ಏನು? ಒಂದಿಷ್ಟು ಗೌರವ, ಸರಿಯಾದ ಸಮಯಕ್ಕೆ ಸಂಬಳ. ಆದ್ರೆ ಇಂದಿನ ವ್ಯಾಪಾರ ಸ್ಪರ್ಧೆಗೆ ಬಿದ್ದಿದೆ. ಟಾರ್ಗೆಟ್​ ಎನ್ನುವ ಪಡೆಂಭೂತವನ್ನು ಬೆನ್ನಿಗೆ ಕಟ್ಟಿಕೊಂಡೇ ಕೆಸಲಗಾರರು ಕೆಲಸ ಮಾಡಬೇಕಾಗುತ್ತದೆ. ಟಾರ್ಗೆಟ್ ಮುಟ್ಟದಿದ್ದರೆ ಅಬ್ಬಬ್ಬಾ ಅಂದ್ರೆ ಏನು ಮಾಡಬೇಕು. ನನ್ನ ಕಂಪನಿಯಲ್ಲಿ ನಿನಗೆ ಸ್ಥಾನವಿಲ್ಲ ಬೇರೆ ಕಡೆ ನಿನ್ನ ಬದುಕು ಕಟ್ಟಿಕೋ ಎಂದು ಹೇಳಬೇಕು.

ಆದರೆ ಕೇರಳದಲ್ಲಿ ಕಾರ್ಮಿಕನೊಬ್ಬ ತನ್ನ ಟಾರ್ಗೆಟ್ ತಲುಪಿಲ್ಲ ಎಂಬ ಕಾರಣಕ್ಕೆ ಏನೆಲ್ಲಾ ಮಾಡಲಾಗಿದೆ ಗೊತ್ತಾ? ಮನುಷ್ಯತ್ವ ಎನ್ನುವ ಒಂದಂಶವೂ ಇಲ್ಲದವರೂ ಹೇಗೆಲ್ಲಾ ಒಂದು ವ್ಯಕ್ತಿಯ ಜೊತೆ ನಡೆದುಕೊಳ್ಳುತ್ತಾರೋ ಅದೇ ರೀತಿ ನಡೆದುಕೊಂಡಿದ್ದಾರೆ. ಕಾರ್ಮಿಕನನ್ನು ಅಕ್ಷರಶಃ ಅವರ ಮನೆಯ ನಾಯಿಯಂತೆ ನಡೆಸಿಕೊಂಡಿದ್ದಾರೆ. ಸದ್ಯ ಕಾರ್ಮಿಕನೊಬ್ಬ ಅನುಭವಿಸಿದ ಅಪಾಮನದ ಪರಾಕಾಷ್ಠೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ:ಉಚಿತ ಸ್ಪಾ ಮತ್ತು *ಕ್ಸ್..! ಹೋಟೆಲ್​ ಆಚೆ ರಾರಾಜಿಸಿದ ಡಿಸ್​ಪ್ಲೇ ಬೋರ್ಡ್​​.. ಜನರು ಶಾಕ್​!

ಕಾರ್ಮಿಕನೊಬ್ಬ ನೀಡಿದ ಟಾರ್ಗೆಟ್​ ಮುಟ್ಟಲಲಿಲ್ಲ ಎಂಬ ಕಾರಣಕ್ಕೆ ಅವನ ಕೊರಳಿಗೆ ಚೈನ್ ಕಟ್ಟಿ, ಅಂಬೆಗಾಲಿನಲ್ಲಿ ನಾಯಿಗಳನ್ನು ನಡೆಸುವಂತೆ ನಡೆಸಲಾಗಿದೆ. ನೆಲದ ಮೇಲೆ ನಾಣ್ಯವನ್ನಿಟ್ಟು ಅದನ್ನು ನೆಕ್ಕಿಸಿದ್ದಾರೆ  ಅದಕ್ಕೂ ಸಮಾಧಾನಗೊಳ್ಳದ ಆ ಕ್ರೂರಿ ಬಾಸ್ ಕೆಲಸಗಾರನಿಗೆ ತನ್ನ ಸೊಂಟದ ಬೆಲ್ಟ್​ನ್ನು ಕೊರಳಿಗೆ ಕಟ್ಟಿಕೊಳ್ಳುವಂತೆ ಹೇಳಿದ್ದಾರೆ. ಕೊಳೆತ ಹಣ್ಣನ್ನು ನೀಡಿ ಒತ್ತಾಯದಿಂದ ತಿನ್ನಿಸಿದ್ದಾರೆ. ಇನ್ನು ನಾಯಿಯಂತೆ ನೀರನ್ನು ಕುಡಿಯಲು ಹೇಳಿದ್ದಾರೆ. ಅಸಹಾಯಕ ಕೆಲಸಗಾರ ಅದನ್ನೂ ಕೂಡ ಮಾಡಿದ್ದಾನೆ. ಇಷ್ಟಕ್ಕೆ ನಿಂತಿತಾ? ಇಲ್ಲ. ಅವನಿಗೆ ಬಲವಂತದಿಂದ ಶ್ವಾನಗಳು ಹೇಗೆ ಮೂತ್ರ ವಿಸರ್ಜನೆ ಮಾಡುತ್ತವೆಯೋ ಅದೇ ರೀತಿ ಮೂತ್ರ ವಿಸರ್ಜನೆ ಮಾಡುವಂತೆ ಮಾಡಿಸಿದ್ದಾರೆ.

ಇದನ್ನೂ ಓದಿ:ಟೆಕ್ಕಿಗೆ ಗಂಡಾಂತರ.. ಹೆಂಡತಿಗೆ ಸುತ್ತಿಗೆಯಿಂದ ಹೊಡೆದು ಪೊಲೀಸ್ ಠಾಣೆಗೆ ಹೋದ ಭೂಪ! ಆಗಿದ್ದೇನು?

ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆರಂಭದಲ್ಲಿ ಈ ಒಂದು ಘಟನೆ ಕಲೂರ್​ ಕಂಪನಿಯೊಂದರ ಆಫೀಸ್​​ನಲ್ಲಿ ನಡೆದಿದೆ ಎಂದು ನಂಬಲಾಗಿತ್ತು. ಕೂಡಲೇ ಆ ಕಂಪನಿಗೆ ಪೊಲೀಸರು ಧಾವಿಸಿದ್ದಾರೆ. ಆದರೆ ಆ ಕಂಪನಿಯ ಮಾಲೀಕ ಇದು ಇಲ್ಲಿ ನಡೆದ ಘಟನೆಯಲ್ಲ ಬಹುಶಃ ಪೇರಂಬವೂರ್​ನಲ್ಲಿ ಚಿತ್ರಿಸಲಾದ ದೃಶ್ಯಗಳು ಎಂದು ಹೇಳಿದ್ದಾರೆ.

publive-image

ಸದ್ಯ ಈ ಬಗ್ಗೆ ಮಾತನಾಡಿರುವ ಕೇರಳದ ಕಾರ್ಮಿಕ ಇಲಾಖೆ ಕೂಡಲೇ ತನಿಖೆ ಕೈಗೊಳ್ಳುವಂತೆ ಆದೇಶ ನೀಡಿದೆ. ಕಾರ್ಮಿಕ ಸಚಿವ ವಿ ಸಿವವನ್​ಕುಟ್ಟಿ ಕೂಡ ಕೂಡಲೇ ತನಿಖೆ ಕೈಗೊಂಡು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ. ಸದ್ಯ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಕ್ರೂರವಾಗಿ ನಡೆಸಿಕೊಂಡ ಕಾರ್ಮಿಕನಿಂದ ಹೇಳಿಕೆಯನ್ನು ಪಡೆದಿದ್ದಾರೆ. ಸಂತ್ರಸ್ತ ಕಾರ್ಮಿಕ ಡೋರ್ ಟು ಡೋರ್ ಮಾರ್ಕೆಂಟಿಂಗ್ ಕೆಲಸವನ್ನು ಮಾಡುತ್ತಿದ್ದನಂತೆ. ಅತನಿಗೆ ಕೆಲವೊಂದಿಷ್ಟು ಟಾರ್ಗೆಟ್​ ನೀಡಿ, ತಿಂಗಳಿಗೆ 6 ರಿಂದ 8 ಸಾವಿರ ರೂಪಾಯಿ ಸಂಬಳ ನೀಡುವುದಾಗಿ ಹೇಳಲಾಗಿತ್ತಂತೆ. ಅವನು ತನ್ನ ಟಾರ್ಗೆಟ್​ ತಲುಪದಿದ್ದಾಗ ಅವನೊಂದಿಗೆ ಹೀಗೆ ಹೀನಾಯವಾಗಿ ವರ್ತಿಸಲಾಗಿದೆ ಎಂದು ಸಂತ್ರಸ್ತ ಹೇಳಿದ್ದಾನೆ.


">April 6, 2025

ಇದನ್ನೂ ಓದಿ:ಸಾಲಗಾರರಿಗೆ ಗುಡ್‌ನ್ಯೂಸ್.. 5 ವರ್ಷಗಳ ಬಳಿಕ ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲದ ಬಡ್ಡಿ ದರ ಕಡಿತ!

ಇನ್ನು ಪೊಲೀಸರು ಹೇಳುವ ಪ್ರಕಾರ ನಾವು ಈಗಾಗಲೇ ಸಂತ್ರಸ್ತನಿಂದ ದೂರನ್ನು ಪಡೆದಿದ್ದೇವೆ. ಕಾರ್ಮಿಕನ ಮೇಲೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ ಬಗ್ಗೆ ದೂರು ದಾಖಲಾಗಿದೆ. ಕಾರ್ಮಿಕನನ್ನು ಈ ರೀತಿಯಾಗಿ ಕೀಳಾಗಿ ನಡೆಸಿಕೊಂಡ ಕಂಪನಿಯ ಮಾಲೀಕ ಈ ಹಿಂದೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಬಂಧಿತನಾಗಿ ಬೇಲ್ ಮೇಲೆ ಆಚೆ ಇದ್ದಾನೆ ಎಂದು ಹೇಳಿದ್ದಾರೆ.

ಇನ್ನು ಈ ಘಟನೆಯನ್ನು ಖಂಡಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಕಾರ್ಮಿಕನಿಗೆ ನ್ಯಾಯ ಒದಗಿಸುವಂತೆ ಕಾರ್ಮಿಕನಿಗೆ ಕಿರುಕುಳ ನೀಡಿದ ಕಚೇರಿಯ ಎದುರಿಗೆ ಪ್ರತಿಭಟನೆ ಮಾಡಿದ್ದಾರೆ. ಇನ್ನು ಕಾರ್ಮಿಕ ಇಲಾಖೆ ಸಚಿವ ಸಿವನ್​ಕುಟ್ಟಿ ಕೂಡಲೇ ಆರೋಪಿಯವ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment