newsfirstkannada.com

ನ್ಯೂಸ್​​ ಫಸ್ಟ್​​ಗೆ ‘ENBA’ ಹೆಮ್ಮೆಯ ಗರಿ; ವಿವಿಧ ವಿಭಾಗಗಳಲ್ಲಿ 12 ಪ್ರಶಸ್ತಿಯ ಸುರಿಮಳೆ

Share :

Published March 30, 2024 at 10:56pm

Update March 31, 2024 at 6:07pm

  ನ್ಯೂಸ್​ ಫಸ್ಟ್​ಗೆ ಹರಿದು ಬಂತು ಪ್ರಶಸ್ತಿಗಳ ಸುರಿಮಳೆ

  ಬೆಸ್ಟ್ ಕವರೇಜ್, ಚೈತ್ರಾ ಕೇಸ್​​ ವರದಿಗೆ ಚಿನ್ನದ ಪ್ರಶಸ್ತಿ

  ದೆಹಲಿಯಲ್ಲಿ ನಡೀತಿರೋ ಪ್ರಶಸ್ತಿ ಪ್ರದಾನ ಸಮಾರಂಭ

ನವದೆಹಲಿ: ಈ ಬಾರಿಯೂ ಕನ್ನಡಿಗರ ನೆಚ್ಚಿನ ನ್ಯೂಸ್‌ಫಸ್ಟ್‌ ಸುದ್ದಿ ವಾಹಿನಿ ಪ್ರತಿಷ್ಠಿತ 12 ENBA ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದೆ. ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನ್ಯೂಸ್‌ಫಸ್ಟ್‌ ವಾಹಿನಿಗೆ ಪ್ರಶಸ್ತಿಗಳ ಮಳೆಯೇ ಹರಿದು ಬಂದಿದೆ.

ಇದನ್ನೂ ಓದಿ: ರಂಗಭೂಮಿ ಕಲಾವಿದ, ಸಂತ, ಕಲ್ಪನಾ 2 ಚಿತ್ರದ ಖಳ ನಾಯಕ ಪ್ರಕಾಶ್ ಹೆಗ್ಗೋಡು ಇನ್ನಿಲ್ಲ

ಚಿನ್ನ
1. ಚೈತ್ರಾ ಕೇಸ್​​ ವಿಸ್ತೃತ ವರದಿ
2. ನಾನು ಮುಖ್ಯಮಂತ್ರಿ
3. ಬೆಂಗಳೂರು ಫಸ್ಟ್
4. ಬೆಸ್ಟ್ ಆ್ಯಂಕರ್ : ವಿದ್ಯಾಶ್ರೀ
5. ‘ಇಸ್ರೇಲ್​​ ವಾರ್​​ ಇಂಪ್ಯಾಕ್ಟ್ ಆನ್​​​​​ ಕನ್ನಡಿಗಾಸ್’
6. ಮತದಾನ ಜಾಗೃತಿ ವಿಭಾಗದಲ್ಲಿ ‘ಡ್ರಾಮಾಕ್ರಸಿ’ ವಿಶೇಷ ಕಾರ್ಯಕ್ರಮಕ್ಕೆ ಪ್ರಶಸ್ತಿ

ಬೆಳ್ಳಿ :
7. ಏನ್​​ ಸಮಾಚಾರ
8. ಇಂಡಿಯಾ ಫಸ್ಟ್
9. ಸ್ಪೆಷಲ್​​ ರಿಪೋರ್ಟ್

ಕಂಚು :
10. ಬೆಸ್ಟ್ ಆ್ಯಂಕರ್​​​ : ರಕ್ಷತ್​ ಶೆಟ್ಟಿ
11. ಮೈಕ್ರೋಸೈಟ್ : NewsFirstLive
12. ಸ್ಯಾಂಟ್ರೋ ರವಿ ಕೇಸ್

ಬರೋಬ್ಬರಿ ಆರು ‘ಸ್ವರ್ಣ’ ಪ್ರಶಸ್ತಿ

ಬೆಸ್ಟ್ ಕವರೇಜ್ ವಿಭಾಗದಲ್ಲಿ ಕುಂದಾಪುರ ಮೂಲದ ಚೈತ್ರಾ ಕೇಸ್​​ ವಿಸ್ತೃತ ವರದಿಗೆ ಚಿನ್ನದ ಪ್ರಶಸ್ತಿ ಬಂದಿದ್ದು, ನ್ಯೂಸ್​​ಫಸ್ಟ್​​ ನ್ಯೂಸ್​ ಕೋ-ಆರ್ಡಿನೇಟರ್ ಮೋಹನ್​​​ಕುಮಾರ್.ಕೆ.ಪಿ ಪ್ರಶಸ್ತಿ ಸ್ವೀಕರಿಸಿದರು. ಜೊತೆಗೆ ಬೆಸ್ಟ್ ಅರ್ಲಿ ಪ್ರೈಂ ಶೋ ವಿಭಾಗದಲ್ಲಿ ನ್ಯೂಸ್​​ಫಸ್ಟ್​​​ನ ವಿಶೇಷ ಕಾರ್ಯಕ್ರಮ ‘ನಾನು ಮುಖ್ಯಮಂತ್ರಿ’ ಕಾರ್ಯಕ್ರಮಕ್ಕೆ ಪ್ರಶಸ್ತಿ ಬಂದಿದೆ. ಬೆಸ್ಟ್ ಲೇಟ್ ಪ್ರೈಂ ಟೈಂ ಶೋ ವಿಭಾಗದಲ್ಲಿ ಪ್ರತಿದಿನ ರಾತ್ರಿ 10 ಗಂಟೆಗೆ ಪ್ರಸಾರವಾಗುವ ‘ಬೆಂಗಳೂರು ಫಸ್ಟ್’​ ಕಾರ್ಯಕ್ರಮಕ್ಕೆ ಚಿನ್ನದ ಪ್ರಶಸ್ತಿ ಬಂದಿದ್ದು, ಬಿಸಿನೆಸ್ ಹೆಡ್ ಎಸ್​​. ದಿವಾಕರ್ ಪ್ರಶಸ್ತಿ ಸ್ವೀಕರಿಸಿದರು. ಇನ್ನು, ಬೆಸ್ಟ್ ಆ್ಯಂಕರ್ ವಿಭಾಗದಲ್ಲಿ ವಿದ್ಯಾಶ್ರೀ ಉಜಿರೆಗೆ ಚಿನ್ನದ ಪ್ರಶಸ್ತಿ ಸಂದಿದೆ. ವಿದ್ಯಾಶ್ರೀ ಪರವಾಗಿ ನ್ಯೂಸ್​​ಫಸ್ಟ್​​ನ ಕ್ರಿಯೇಟಿವ್ ಹೆಡ್ ಹೆಚ್​​ಪಿ ಸಿದ್ದೇಶ್​​​ಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ಹಾಗೆಯೇ ‘ಇಸ್ರೇಲ್​​ ವಾರ್​​ ಇಂಪ್ಯಾಕ್ಟ್ ಆನ್​​​​​ ಕನ್ನಡಿಗಾಸ್’ ವಿಸ್ತೃತ ವರದಿಗೆ ಚಿನ್ನದ ಪ್ರಶಸ್ತಿ ಬಂದಿದ್ದು, ಅಸೋಸಿಯೇಟ್ ಎಡಿಟರ್ ಅನಂತ್​ ಸಾಯಿ ಪ್ರಶಸ್ತಿ ಸ್ವೀಕರಿಸಿದರು.

‘ರಜತ’ ಪ್ರಶಸ್ತಿ ಜೊತೆ ವಿಶೇಷ ಪ್ರಶಸ್ತಿ

ಬೆಸ್ಟ್​ ಪ್ರೈಂ ಟೈಂ ಶೋ ವಿಭಾಗದಲ್ಲಿ ಪ್ರತಿದಿನ ರಾತ್ರಿ 8 ಗಂಟೆಗೆ ಪ್ರಸಾರವಾಗುವ ‘ಇಂಡಿಯಾ ಫಸ್ಟ್’​ ಕಾರ್ಯಕ್ರಮಕ್ಕೆ ಬೆಳ್ಳಿ ಪ್ರಶಸ್ತಿ ಬಂದಿದ್ದು, ಕ್ರಿಯೇಟಿವ್ ಹೆಡ್ ಹೆಚ್​​ಪಿ ಸಿದ್ದೇಶ್​​​ಕುಮಾರ್​ ಪ್ರಶಸ್ತಿ ಸ್ವೀಕರಿಸಿದರು. ​ಜೊತೆಗೆ ಚಿನ್ನದ ಪ್ರಶಸ್ತಿಗಳ ಜೊತೆಗೆ ಬೆಸ್ಟ್ ಬ್ರೇಕ್​ ಫಾಸ್ಟ್ ಶೋ ವಿಭಾಗದಲ್ಲಿ ಪ್ರತಿದಿನ ಬೆಳಗ್ಗೆ 7 ಗಂಟೆಗೆ ಪ್ರಸಾರವಾಗುವ ‘ಏನ್​​ ಸಮಾಚಾರ’ ಕಾರ್ಯಕ್ರಮಕ್ಕೆ ಬೆಳ್ಳಿ ಪ್ರಶಸ್ತಿ ಬಂದಿದ್ದು, ಕ್ರಿಯೇಟಿವ್ ಹೆಡ್ ಹೆಚ್​​ಪಿ ಸಿದ್ದೇಶ್​​​ಕುಮಾರ್​​ ಪ್ರಶಸ್ತಿ ಸ್ವೀಕರಿಸಿದರು. ಇನ್ನು ದಕ್ಷಿಣ ಭಾರತದ ಬೆಸ್ಟ್ ಕರೆಂಟ್ ಅಫೇರ್ಸ್​ ವಿಭಾಗದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗುವ ‘ಸ್ಪೆಷಲ್​​ ರಿಪೋರ್ಟ್’​ ಕಾರ್ಯಕ್ರಮಕ್ಕೆ ಬೆಳ್ಳಿ ಪ್ರಶಸ್ತಿ ಬಂದಿದ್ದು, ನ್ಯೂಸ್​​ಫಸ್ಟ್​​​ ಬಿಸಿನೆಸ್ ಹೆಡ್ ಎಸ್​​. ದಿವಾಕರ್ ಪ್ರಶಸ್ತಿ ಸ್ವೀಕರಿಸಿದರು. ಹಾಗೆಯೇ ನ್ಯೂಸ್​​ಫಸ್ಟ್​​ನ ರಕ್ಷತ್​ ಶೆಟ್ಟಿಗೆ ಬೆಸ್ಟ್ ಆ್ಯಂಕರ್​​​ ಪ್ರಶಸ್ತಿ, ‘NewsFirstLive’ಗೆ ಬೆಸ್ಟ್ ಮೈಕ್ರೋಸೈಟ್​ ಅವಾರ್ಡ್ ಹಾಗೂ ಸ್ಯಾಂಟ್ರೋ ರವಿ ಕೇಸ್​​ನ ವಿಸ್ತೃತ ವರದಿಗೆ ಪ್ರಶಸ್ತಿಗಳು ಸಂದಿದೆ. ಮತದಾನ ಜಾಗೃತಿ ವಿಭಾಗದಲ್ಲಿ ‘ಡ್ರಾಮಾಕ್ರಸಿ’ ವಿಶೇಷ ಕಾರ್ಯಕ್ರಮಕ್ಕೆ ಚಿನ್ನದ ಪ್ರಶಸ್ತಿ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನ್ಯೂಸ್​​ ಫಸ್ಟ್​​ಗೆ ‘ENBA’ ಹೆಮ್ಮೆಯ ಗರಿ; ವಿವಿಧ ವಿಭಾಗಗಳಲ್ಲಿ 12 ಪ್ರಶಸ್ತಿಯ ಸುರಿಮಳೆ

https://newsfirstlive.com/wp-content/uploads/2024/03/enba-2023.jpg

Load More