ಕಾಶ್ಮೀರದಲ್ಲಿ ಉಗ್ರರ ವಿರುದ್ಧ BSF ಕೂಂಬಿಂಗ್ ತೀವ್ರ; ಓರ್ವ ಯೋಧ ಹುತಾತ್ಮ

author-image
Ganesh
Updated On
ಕಾಶ್ಮೀರದಲ್ಲಿ ಉಗ್ರರ ವಿರುದ್ಧ BSF ಕೂಂಬಿಂಗ್ ತೀವ್ರ; ಓರ್ವ ಯೋಧ ಹುತಾತ್ಮ
Advertisment
  • ಪಹಲ್ಗಾಮ್​ ದಾಳಿ ಬೆನ್ನಲ್ಲೇ ಉಗ್ರರ ವಿರುದ್ಧ ಕೂಂಬಿಂಗ್
  • ಕಾಶ್ಮೀರದಲ್ಲಿ ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಕಾಳಗ
  • BSF ಮತ್ತು ಪೊಲೀಸರಿಂದ ಜಂಟಿ ಕಾರ್ಯಾಚರಣೆ

ಪಹಲ್ಗಾಮ್​​​ ದಾಳಿ ಬೆನ್ನಲ್ಲೇ ಬಿಎಸ್​ಎಫ್ ಪಡೆ ಉಗ್ರರ ವಿರುದ್ಧದ ಕೂಂಬಿಂಗ್ ತೀವ್ರಗೊಳಿಸಿದ್ದಾರೆ. ಪಹಲ್ಗಾಮ್ ದಾಳಿ ನಡೆದು ಎರಡು ದಿನದ ನಂತರ ಕಾಶ್ಮೀರದ ಉಧಮ್​​ಪುರದಲ್ಲಿ ಗುಂಡಿನ ಚಕಮಕಿ ನಡೆದಿದೆ.

ದುರಾದೃಷ್ಟವಶಾತ್ ಭಾರತೀಯ ಸೇನೆ ಓರ್ವ ಸೈನಿಕನನ್ನು ಕಳೆದುಕೊಂಡಿದೆ. ಉಗ್ರರು ಅಡಗಿರೋದು ಖಚಿತವಾಗಿತ್ತು. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಬಿಎಸ್​​ಎಫ್ ಪಡೆ ಜಂಟಿ ಕಾರ್ಯಾಚರಣೆಗೆ ಇಳಿದಿತ್ತು. ಈ ವೇಳೆ ಎರಡೂ ಕಡೆಯಿಂದ ಗುಂಡಿನ ಚಕಮಕಿ ಆಗಿದೆ.

ಇದನ್ನೂ ಓದಿ: ಅಂತಿಮ ದರ್ಶನ ಪಡೆದ ಸಿಎಂ; ಭರತ್ ಭೂಷಣ್ ಪುತ್ರನಿಗೆ ಸಮಾಧಾನ ಮಾಡಿದ ಸಿದ್ದರಾಮಯ್ಯ

ಈ ಘಟನೆಯಲ್ಲಿ ಓರ್ವ ಸೈನಿಕ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆದಿತ್ತಾದರೂ, ಅವರು ಬದುಕುಳಿಯಲಿಲ್ಲ. ಭದ್ರತಾ ಸಿಬ್ಬಂದಿ ಇಂದು ಬೆಳಗ್ಗೆಯೇ ಉಧಮ್​ಪರ ಜಿಲ್ಲೆಯ ದುದು ಬಸಂತ್​ಗರ್ ಪ್ರದೇಶದಲ್ಲಿ ಆಪರೇಷನ್ ಶುರುಮಾಡಿತ್ತು. ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಯೋಧರತ್ತ ಫೈರಿಂಗ್ ಮಾಡಿರುವ ಉಗ್ರರು ಮತ್ತೆ ನಾಪತ್ತೆ ಆಗಿದ್ದಾರೆ. ಶೋಧಕಾರ್ಯ ಮುಂದುವರೆದಿದೆ ಎಂದು ಸೇನೆ ತಿಳಿಸಿದೆ.

ಏಪ್ರಿಲ್ 22 ರಂದು ಪೆಹಲ್ಗಾಮ್​ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಗುರಿಯಾಗಿಸಿ ದಾಳಿ ನಡೆಸಿದ್ದರು. ಈ ಪೈಶಾಚಿಕ ಕೃತ್ಯದಲ್ಲಿ 26 ಪ್ರವಾಸಿಗರು ಜೀವ ಕಳೆದುಕೊಂಡಿದ್ದಾರೆ. ಮೃತರಲ್ಲಿ ಕರ್ನಾಟಕದ ಇಬ್ಬರು ಸೇರಿದ್ದಾರೆ. ಉಗ್ರರ ನೀಚ ಕೃತ್ಯದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಒತ್ತಾಯ ಜೋರಾಗಿದೆ. ಬೆನ್ನಲ್ಲೇ ಸೇನಾಪಡೆಯ ಕಾರ್ಯಾಚರಣೆಯೂ ಜೋರಾಗಿದೆ.

ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ.. ದೆಹಲಿ ಪಾಕಿಸ್ತಾನ ಹೈ ಕಮಿಷನ್ ಕಚೇರಿಗೆ ಕೇಕ್‌; ವಿಡಿಯೋ ಇಲ್ಲಿದೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment